ಸಂವಿಧಾನ ಯಥಾವತ್ ಜಾರಿ ಬಿಎಸ್ಪಿ ಪ್ರಣಾಳಿಕೆ
ಆನೇಕಲ್, ಮಾ. ೨೦- ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸಂಸದ ಡಿ.ಕೆ ಸುರೇಶ್ ರವರ ಕೊಡುಗೆ ಶೂನ್ಯವಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು ಮಾಡುವಂತಹ ಚರಂಡಿ, ಬೀದಿ ದೀಪ ಅಳವಡಿಕೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿರುವುದೇ ಇವರ ದೊಡ್ಡ ಸಾಧನೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಾ|| ಚಿನ್ನಪ್ಪಚಿಕ್ಕಹಾಗಡೆ ರವರು ಆರೋಫಿಸಿದರು.
ಅವರು ಸರ್ಜಾಪುರದಲ್ಲಿರುವ ಬಹುಜನ ಸಮಾಜ ಪಕ್ಷದ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಿಕೆ ಸುರೇಶ್ ರವರು ಸತತವಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಗೆದ್ದರು ಸಹ ಕ್ಷೇತ್ರಕ್ಕೆ ಸಂಭಂದಿಸಿದಂತೆ ಯಾವುದೇ ರೀತಿಯ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದಿಲ್ಲ ಬದಲಾಗಿ ವೇದಿಕೆ ಕಾರ್ಯಕ್ರಮಗಳಲ್ಲಿ ವಿರೋಧ ಪಕ್ಷಗಳನ್ನು ಟೀಕಿಸಿ ಮಧ್ಯಮಗಳಲ್ಲಿ ಸುದ್ದಿಯಾಗಿರುವುದು ಇವರ ಬಹು ದೊಡ್ಡ ಸಾಧನೆಯಾಗಿದೆ ಎಂದರು.
ರಾಷ್ಟ್ರದಲ್ಲಿ ಕಾಂಗ್ರೆಸ್, ಬಿಜೆಪಿ ಜನತಾ ಸರ್ಕಾರಗಳು ಭ್ರಷ್ಠಚಾರದಲ್ಲಿ ಬಾಗಿಯಾಗಿದ್ದು ಖಾಸಗಿ ಕಂಪನಿಗಳೊಂದಿಗೆ ಪಕ್ಷದ ಬೆಳವಣಿಗೆಗಾಗಿ ಬಾಂಡ್ ಗಳನ್ನು ಖರೀದಿ ಮಾಡಿ ಭ್ರಷ್ಟಚಾರಕ್ಕೆ ಇನ್ನಷ್ಟು ಅವಕಾಶ ಮಾಡಿಕೊಟ್ಟು ದೇಶದ ಪ್ರಗತಿಗೆ ಮಾರಕವಾಗುವಂತಹ ಪಕ್ಷಗಳಾಗಿವೆ, ಬಹುಜನ ಸಮಾಜ ಪಕ್ಷವುವು ರಾಷ್ಟ್ರೀಯ ಮಾನ್ಯತೆಯನ್ನು ಪಡೆದರು ಸಹ ಯಾವುದೆ ಕಂಪನಿಗಳಿಂದ ಚುನಾವಣಾ ಭಾಂಡ್ ಗಳನ್ನು ಖರೀದಿ ಮಾಡಲ್ಲಿ ಬದಲಾಗಿ ಪಕ್ಷವು ಕೆಳಹಂತದ ನಾಯಕತ್ವದ ಆಧಾರದ ಮೇಲೆ ನಡೆಯುವ ಪಕ್ಷವಾಗಿದೆ ಎಂದ ಹೇಳಿದರು. ಸಂವಿದಾನವನ್ನು ಯಥಾವತ್ತಾಗಿ ಜಾರಿಗೆ ತರುವುದೇ ಬಿಎಸ್ಪಿ ಪಕ್ಷದ ಪ್ರಣಾಳಿಕೆಯಾಗಿದೆ ಎಂದರು. ಸಂವಿದಾನದಲ್ಲಿಯೇ ಸಾರ್ವಜನಿಕರಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಬೇಕು, ದೇಶದ ಅಭಿವೃದ್ದಿಗೆ ಯಾವೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುವ ಅಂಶಗಳು ಸಂವಿದಾನದಲ್ಲಿಯೇ ಅಡಕವಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಲ್ ಮುನಿಯಲ್ಲಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶೀ ಮಿಥುನ್ ರೆಡ್ಡಿ, ಜಿಲ್ಲಾ ಉಸ್ತುವಾರಿ ಗೌರಿಶಂಕರ್‌ಉಪಾಧ್ಯಕ್ಷ ಎ.ಗಾಯಿತ್ರಿ, ಕಾರ್ಯದರ್ಶೀ ಲೋಕೆಶ್, ಡಾ. ತೌಸಿಪ್ ಅಹಮ್ಮದ್, ತಾಲ್ಲೂಕು ಉಸ್ತವಾರಿಗಳಾದ ಬುಲೇಟ್ ಕೃಷ್ಣಪ್ಪ, ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷರಾದ ಕುಮಾರಚಾರಿ, ಪಧಾಧಿಕಾರಿಗಳಾದ ಪೋಲಿಸ್ ಪಾಪಣ್ಣ, ಗೀತಾ ಲಕ್ಷಿ, ಮಂಜುನಾಥ್, ಯಲ್ಲಪ್ಪ, ನಾಗರಾಜು, ಶ್ರೀನಿವಾಸ್ ಚಾರಿ ಹಾಜರಿದ್ದರು.