ಅದ್ದೂರಿ ವಿಶ್ವ ಮಹಿಳಾ ದಿನಾಚರಣೆ
ಆನೇಕಲ್. ಮಾ. ೨೦ – ಚಂದಾಪುರದ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದ ಆವರಣದಲ್ಲಿ ವೀರ ಶೈವ ಲಿಂಗಾಯತ ಮಹಾ ಸಭಾದ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಶಿಭಿರ ಆಯೋಜನೆ, ವಿವಿಧ ಕ್ಷೇತ್ರದಲ್ಲಿ ಸಾದನೆ ಮಾಡಿದ ಸಾದಕಿಯವರಿಗೆ ಅಭಿನಂದನೆ ಸಲ್ಲಿಕೆ, ಕ್ರೀಡಾ ಕೂಟದಲ್ಲಿ ಗೆಲುವು ಸಾದಿಸಿದ ಸ್ತೀ ಸಂಘಗಳ ಮಹಿಳಾ ಸದಸ್ಯರುಗಳಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ, ಪೌರ ಕಾರ್ಮಿಕರಿಗೆ ಸನ್ಮಾನ ಸೇರಿದಂತೆ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಕುಸುಮ ರಾಜ್, ವೈದ್ಯರಾದ ಡಾ|| ಪಲ್ಲವಿ, ಸಬ್ ಇನ್ಸ್ ಪೆಕ್ಟರ್ ಚಂದ್ರಕಲಾ, ಶಾರದ ಆಶ್ರಮ ರಮಾ ಪ್ರಿಯಾಂಬ, ಸಾಹಿತಿ ಶ್ರೀವಲ್ಲಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಅಂಬಿಕಾ, ಮಂಜುಳ ನೀಲಕಂಠಯ್ಯ, ವಿಶಾಲ ಆರಾಧ್ಯ, ಪುಷ್ಪ ಮಹಾಂತೇಶ್, ಬಾರತಿ ಬಸವರಾಜ್, ಬಾರತಿ ವಿರುಪಾಕ್ಷ, ಮಮತಾ ಯಜಮಾನ್, ಹೆನ್ನಾಗರ ಪುಷ್ಪ. ಶುಭ ಆರಾಧ್ಯ ಹಾಗೂ ವೀರ ಶೈವ ಲಿಂಗಾಯತ ಮಹಾ ಸಭಾದ ಮಹಿಳಾ ಘಟಕದ ಪದಾದಿಕಾರಿಗಳು ಮತ್ತು ಅಕ್ಕನ ಬಳಗ ಮತ್ತು ಲಯನ್ಸ್ ಕ್ಲಬ್ ನ ಪದಾದಿಕಾರಿಗಳು ಬಾಗವಹಿಸಿದ್ದರು.