ನಂಜನಗೂಡಿನಲ್ಲಿ ದೊಡ್ಡ ಜಾತ್ರೆ ಸಕಲ ಸಿದ್ಧತೆ
ಸಂಜೆವಾಣಿ ವಾರ್ತೆ
ನಂಜನಗೂಡು: ಮಾ.20:- ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯ ವೈಭವಯುತ ಪಂಚ ಮಹಾರಥೋತ್ಸವ ಮಾರ್ಚ್ 22 ರಂದು ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಇಡೀ ದಕ್ಷಿಣ ಭಾರತದಲ್ಲಿ ಒಂದೇ ಬಾರಿಗೆ ಪಂಚ ರಥಗಳನ್ನು ಏಕಕಾಲದಲ್ಲಿ ಎಳೆಯುವ ಏಕೈಕ ಕ್ಷೇತ್ರವೆಂದರೆ ಅದು ನಂಜನಗೂಡು ದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿಯಾಗಿದೆ.
ಮೊದಲು ಗಣಪತಿ ಪಾರ್ವತಿ ಸಮೇತ ಶ್ರೀಕಂಠೇಶ್ವರ ಪಾರ್ವತಿ ಸುಬ್ರಹ್ಮಣ್ಯ ಸ್ವಾಮಿ ಚಂಡಿಕೇಶ್ವರ ಸ್ವಾಮಿ ರಥಗಳು ರಥದ ಬೀದಿಯಲ್ಲಿ ಎಳೆಯಲಾಗುತ್ತದೆ ಈಗಾಗಲೇ ರಥೋತ್ಸವ ಅಂಗವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಅಲ್ಲದೆ ರಥಗಳ ಚಕ್ರವನ್ನು ಸರಿಪಡಿಸಿ ಹೊಸ ಹಗ್ಗಗಳನ್ನು ತರಲಾಗಿದೆ ರಥಗಳನ್ನು ಬಣ್ಣ ಬಣ್ಣದ ಬಾವುಟಗಳನ್ನು ಕಟ್ಟಿ ರಥಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಮಾಡುವ ಸಲುವಾಗಿ ಕಾರ್ಮಿಕರು ಕಳೆದ ಹಲವಾರು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾರೆ.
ಮಾ.22ರಂದು ಬೆಳಿಗ್ಗೆ 6:30 ರಿಂದ 6,50 ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಮನ್ಮ ಹಾ ಗೌತಮ ರಥರೋಣ ಜರುಗಲಿದ್ದು ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾಯುತ್ತಿದ್ದಾರೆ.
ಇದಲ್ಲದೆ ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯದ ಆವರಣದ ಸುತ್ತಲೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ ಅಲ್ಲದೆ ನಗರದ ಪ್ರಮುಖ ಬೀದಿ ಹಾಗೂ ಕಟ್ಟಡಗಳನ್ನು ಕಪಿಲಾ ನದಿಯ ಆಸುಪಾಸಿನಲ್ಲಿ ಭಕ್ತಿ ಮಾರ್ಗ ಮತ್ತು ಮುಕ್ತಿ ಮಾರ್ಗಗಳಲ್ಲಿ ದೇವಸ್ಥಾನದ ಉದ್ಯಾನಗಳನ್ನು ಕೂಡ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿದೆ.
ಮಳೆ ಇಲ್ಲದೆ ಬಿಸಿಲು ಹೆಚ್ಚಿಗೆ ಇರುವುದರಿಂದ ಅನೇಕ ಸಂಘ ಸಂಸ್ಥೆಗಳು ಮಜ್ಜಿಗೆ ಪಾನಕ ಪ್ರಸಾದ ವಿತರಣೆ ಮಾಡುವುದರಿಂದ ಕಡ್ಡಾಯವಾಗಿ ಆರೋಗ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ.
ರಾಜ್ಯದ ವಿವಿಧಡೆಗಳಿಂದ ಲಕ್ಷಾಂತರ ಭಕ್ತಾದಿಗಳು ದೊಡ್ಡ ಜಾತ್ರೆಗೆ ಆಗಮಿಸುವುದರಿಂದ ಮೂಲಭೂತ ಸೌಕರ್ಯ ಸಾರಿಗೆ ಸಂಸ್ಥೆ ವತಿಯಿಂದ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಮತ್ತು ರೈಲಿನ ವ್ಯವಸ್ಥೆ ಮಾಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಜಾತ್ರೆ ದಿನ ರಥದಲ್ಲಿ ವಜ್ರ ವೈಡೂ ರೈ ಶ್ರೀಕಂಠೇಶ್ವರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸಿ ಬಣ್ಣ ಬಣ್ಣದ ಹೂವಿನ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ನಿಗದಿತ ಸಮಯದಲ್ಲಿ ಅರ್ಚಕ ವೃಂದ ಧಾರ್ಮಿಕ ವಿಧಿ ವಿಧಾನ ವೇದ ಘೋಷಗಳು ಮೊಳಗಿಸಿದ ನಂತರ ಮಹಾಮಂಗಳಾರತಿ ಇಡುಗಾಯಿ ಒಡೆದು ಚಾಲನೆ ಸಿಗಲಿದೆ ನಂತರ ಭಕ್ತಾದಿಗಳು ಶ್ರೀಕಂಠೇಶ್ವರ ಸ್ವಾಮಿಗೆ ಜೈಕಾರ ಕೂಗುತ್ತಾ ರಥಗಳನ್ನು ಎಳೆಯುತ್ತಾರೆ.
ದೊಡ್ಡ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಭಕ್ತಾದಿಗಳು ಇಂದಿನ ದಿನವೇ ಶ್ರೀ ಶ್ರೀಕಂಠೇಶ್ವರ ದೇವಾಲಯಕ್ಕೆ ಬರುತ್ತಾರೆ ದೇವಾಲಯದ ಮುಂಭಾಗ ಆಸುಪಾಸಿನಲ್ಲಿ ಮತ್ತು ಪಡಸಾಲೆಯಲ್ಲಿ ತಂಗಿ ಕೊಂಡು ಬೆಳಗಿನ ಜಾವ ಮೂರು ಗಂಟೆಗೆ ಕಪಿಲಾ ನದಿಯಲ್ಲಿ ಮಿಂದು ಮೂಡಿಸೇವೆ ದೂಪದ ಸೇವೆ ಮಾಡಿ ದೇವರ ದರ್ಶನ ಪಡೆದು ರಥಗಳನ್ನು ಎಳೆಯಲು ಸಿದ್ಧರಾಗುತ್ತಾರೆ ಈ ಬಾರಿ ಪಂಚ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಕಲಸಿದ್ಧತೆಗಳನ್ನು ನಡೆದಿದೆ.