ಎನ್‍ಇಪಿ ಜಾರಿಯಲ್ಲಿ ರಾಜ್ಯ ಹಸ್ತಕ್ಷೇಪ ಸಲದು: ನಿಂಗರಾಜೇಗೌಡ
ಸಂಜೆವಾಣಿ ನ್ಯೂಸ್
ಮೈಸೂರು,ಮಾ.20:-ರಾಜ್ಯ ಸರ್ಕಾರ ಎನ್‍ಇಪಿ ಜಾರಿ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಕರ್ನಾಟಕ ಶಿಕ್ಷಣಕ್ಕಾಗಿನ ಜನರ ವೇದಿಕೆ ಸಂಚಾಲಕ ಡಾ.ಈ.ಸಿ. ನಿಂಗರಾಜು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಅಥವಾ ಸರ್ಕಾರಿ ಸ್ವಾಮ್ಯದ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ನಿರ್ಧಾರ ಕೈಗೊಳ್ಳುವ ಮೂಲಕ ಜನಾಗ್ರಹದ ವಿರುದ್ಧ ಸಾಗಿದೆ. ಕಳೆದ ವಿಧಾನಸಭಾ ಚುನಾವಣಾ ನಂತರ ರಾಜ್ಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಇದೀತ ಮತ್ತ ಪಠ್ಯ ಪರಿಷ್ಕರಿಸಲು ಮುಂದಾಗಿರುವುದು ಸರಿಯಲ್ಲ ಎಂದರು.
ಅಲ್ಲದೆ, ರಾಜ್ಯದಲ್ಲಿ ಬಡಮಕ್ಕಳೇ ಹೆಚ್ಚಾಗಿರುವ ಶಾಲೆಗಳತ್ತಲೇ ಸರ್ಕಾರ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ದೂರಿದರು.
ಬಳಿಕ, ಮೇಲಿಂದ ಮೇಲೆ ಪಠ್ಯ ಪರಿಷ್ಕರಣೆಯತ್ತ ನಡೆಯಿಟ್ಟಿರುವ ಸರ್ಕಾರ ಸರ್ಕಾರಿ ಶಾಲೆಗಳಲ್ಲಿರುವ ಮೂಲ ಸೌಲಭ್ಯ ಕೊರತೆ, ಶಿಕ್ಷಕರ ತರಬೇತಿಗಾಗಿ ಹಣ ವ್ಯಯಿಸಬೇಕು. ಇನ್ನು, ಒಳಗೊಳ್ಳುವಿಕೆಯ ಸೋಗಿನಲ್ಲಿ, ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಕಳಪೆ ಗುಣಮಟ್ಟದ ಸಾಹಿತ್ಯವನ್ನು ಮತ್ತೆ ಪರಿಚಯಿಸಲಾಗುತ್ತಿದೆ. ಸರಿಯಾದ ಪ್ರಕ್ರಿಯೆಯಿಲ್ಲದೇ ಏಕ ಪಕ್ಷೀಯವಾಗಿ ಅಧ್ಯಾಯಗಳನ್ನು ತೆಗೆದುಹಾಕುವ ಸಿಎಂ ಸಿದ್ದರಾಮಯ್ಯ ಅವರ ಸರ್ವಾಧಿಕಾರಿ ಆದೇಶವು ಸಾಂವಿಧಾನಿಕ ಮಾನದಂಡಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ.
ಶೌರ್ಯದ ಸಾಕಾರ ರೂಪವಾದ ಭಗತ್‍ಸಿಂಗ್, ಪ್ರಬಲ ನಾಯಕ, ಸ್ವಾತಂತ್ರ?ಯ ಹೋರಾಟಗಾರರಾದ ಸಾವರ್ಕರ್ ಅವರ ಇತಿಹಾಸ ಪಾಠದಿಂಧ ತೆಗೆದುಹಾಕಿರುವುದು ಸರ್ಕಾರದ ದೇಶದ್ರೋಹಿ ರಾಜಕೀಯ ನಿಲುವನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದರು.
ಸಂಚಾಲಕ ಪೆÇ್ರ.ಜಿ.ಸಿ. ರಾಜಣ್ಣ, ಎ.ಬಿ. ಜಯಣ್ಣ, ಡಾ.ಕೆ. ವಸಂತಕುಮಾರ್, ಪ್ರಜ್ವಲ್ ಹಾಜರಿದ್ದರು.