ಯಧುವೀರ್ ಪ್ರಜಾಪ್ರತಿನಿಧಿಯಾಗಲಿದ್ದಾರೆ: ಪ್ರತಾಪಸಿಂಹ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.20:- ಸಂವಿಧಾನ ಜಾರಿಗೊಂಡ ಬಳಿಕ ಮಹಾರಾಜರೆಂಬುದು ಇಲ್ಲ. ಈಗಾಗಿ ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಯಧುವೀರ್ ಅವರು ಪ್ರಜಾಪ್ರತಿನಿಧಿಯಾಗಲು ಬಂದಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಮೈಸೂರಿನಲ್ಲಿ ವಿವಿದೆಡೆ ಪ್ರಚಾರ ನಡೆಸಿ ಮಾದ್ಯಮಗಳಿಗೆ ಪ್ರತಿಕ್ರಯಿಸಿದ ಅವರು, ಮಹಾರಾಜರ ಪದದಲ್ಲಿ ಹುಳುಕು ಹುಡುಕುವುದು ತಪ್ಪು. ಯದುವೀರ್ ಬಿಜೆಪಿ ಅಭ್ಯರ್ಥಿ, ನಾನು ಕೂಡು ಹೇಳಿಕೆ ಕೊಡುವಾಗ ಅವರು ಪ್ರಜಾ ಪ್ರತಿನಿಧಿಯಾಗಿರಬೇಕು ಅಂತಾ ಅವತ್ತೇ ನಾನು ಹೇಳಿದ್ದೆ. ಯದುವೀರ್ ಪ್ರಜಾ ಪ್ರತಿನಿಧಿಯಾಗಲು ಬಂದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಿಎಂ ಹೇಳಿಕೆ ಹುಳುಕು ಅನ್ನಿಸುತ್ತಿಲ್ಲ. ಸಿಎಂ ಹೇಳಿರುವುದರಲ್ಲಿ ತಪ್ಪಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನ ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ನನಗೂ ಅವರಿಗೂ ಬಹಳಷ್ಟು ವಿರೋಧಗಳು ಇದೆ. ಮೈಸೂರಿನ ಜನ ಯದುವೀರ್ ಅವರನ್ನ ಮಹಾರಾಜ ಅಂತ ಕರೆಯುತ್ತೀರಾ? ಅಥವಾ ಬಿಜೆಪಿ ಅಭ್ಯರ್ಥಿ ಅಂಥ ಕರೆಯುತ್ತೀರಾ? ಮಹಾರಾಜರು ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿಎಂ ಬಿಜೆಪಿ ಅಭ್ಯರ್ಥಿ ಎಂದು ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‍ಗಿಂತ ನಾವೇ ಫಾಸ್ಟ್ ಇದ್ದೇವೆ. ನನ್ನ ಕಾಲಾವಧಿಯಲ್ಲಿ ಮಾಡಿದ ಕೆಲಸಗಳ ರಿಪೆÇೀರ್ಟ್ ಕಾರ್ಡನ್ನ ಸಿದ್ದಗೊಳಿಸಿ ಸುಮಾರು 2ಲಕ್ಷಕ್ಕೂ ಹೆಚ್ಚು ಕಾಪಿ ಪ್ರಿಂಟ್ ಮಾಡಿ ಹಂಚಿದ ದೇಶದ ಮೊದಲ ಸಂಸದ ನಾನೇ. ಗುತ್ತಿಗೆದಾರರಲ್ಲಿ ಯಾರ ಬಳಿ ಎಂದೂ ಕಮಿಷನ್ ಪಡೆದಿಲ್ಲ ಅಂತ ನಾನು ಎದೆ ತಟ್ಟಿಕೊಂಡು ಹೇಳುತ್ತೇನೆ. ಬೇರೆಯವರು ತೆಗೆದುಕೊಂಡಿದ್ದಾರೆ. ನನ್ನ ಸಾಲಿಗೆ ಈಗ ಶ್ರೀವತ್ಸಣ್ಣ ಸೇರಿದ್ದಾರೆ ಅವರು ತೆಗೆದುಕೊಳ್ಳಲ್ಲ. ಬೇರೆಯವರೆಲ್ಲಾ ತೆಗೆದುಕೊಂಡಿದ್ದಾರೆಂದರು.
ರೈಲ್ವೆ ನಿಲ್ದಾಣ ಅಭಿವೃದ್ಧಿ ಮಾಡಿದೆ. ಟಿಪ್ಪು ಅವರ ಹೆಸರಿನಲ್ಲಿದ್ದ ಟ್ರೈನ್ ಹೆಸರನ್ನು ಬದಲಿಸಿ ನಾಲ್ವಡಿ ಒಡೆಯರ ಹೆಸರನ್ನು ಇಡಲು ಹೋರಾಟ ಮಾಡಿದೆ. ಮಹಿಷಾ ದಸರಾ ನಿಲ್ಲಿಸಲು ಹೋರಾಡಿದೆ. ಸಂಘರ್ಷಕ್ಕೆ ನಿಂತೆನೆಂದು ನೆನೆದರು. ಇಂದು ಪಕ್ಷ ತೀರ್ಮಾನ ಮಾಡಿದೆ ಯದುವೀರ್ ಗಿಂತ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಿತಲ್ಲ ಎಂಬ ನೋವು ನಿಮಗೆ ಇರಬಹುದು. ಇರಲಿ ನನಗೆ ಪಕ್ಷ ಹತ್ತು ವರ್ಷ ಅವಕಾಶ ಮಾಡಿಕೊಟ್ಟಿದೆ. ಟಿಕೆಟ್ ಸಿಗಲಿಲ್ಲ ಎಂದು ನಾನು ತಲೆ ಕೆಡಿಸಿಕೊಂಡು ಹೋಗಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಯದುವೀರ್ ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರು ಒಗ್ಗೂಡಿ ಕೆಲಸ ಮಾಡೋಣವೆಂದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ಲಕ್ಷ್ಣಣ್ ವಿರುದ್ಧ ವ್ಯಂಗ್ಯವಾಡಿದ ಸಂಸದ ಪ್ರತಾಪ ಸಿಂಹ, ಕಾಂಗ್ರೆಸ್ ನಲ್ಲಿ ಈಗ ಕೇಳಿ ಬರುತ್ತಿರುವ ಹೆಸರು ಫೈನಲ್ ಆದ್ರೆ ಪ್ರಚಾರಕ್ಕೆ ಹೋಗುವುದೇ ಬೇಡ. ಯದುವೀರ್ ಒಳ್ಳೆ ಅಂತರದಿಂದ ಗೆಲ್ಲುತ್ತಾರೆ. ನಾನು ಚುನಾವಣೆಗೆ ನಿಂತಿದ್ದರೆ ಎರೆಡರಿಂದ ಮೂರು ಲಕ್ಷ ಮತಗಳಿಂದ ಗೆಲ್ಲುತ್ತಿದ್ದೆ. ನನ್ನ ಮುಂದಿನ ಗುರಿ ಯದುವೀರ್ ಗೆಲ್ಲಿಸುವುದು ಎಂದರು.
ನಿಮ್ಮ ಸೇವೆಗೆ ಪ್ರತ್ಯೇಕ ಕಚೇರಿ ತೆರೆವೆ:
ನಾನು ಅರಮನೆಯಲ್ಲಿ ಕುಳಿತು ನಿಮ್ಮನ್ನು ಕಾಯಿಸಲ್ಲ. ಬದಲಿಗೆ ಪ್ರತ್ಯೇಕ ಕಚೇರಿ ತೆರೆದು ನಿಮ್ಮ ಸಮಸ್ಯೆ ಆಲಿಸುವೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ತಿಳಿಸಿದರು.
ಕುವೆಂಪುನಗರದ ಸಾಮ್ರಾಟ್ ಛತ್ರದಲ್ಲಿ ಕೃಷ್ಣರಾಜ ಕ್ಷೇತ್ರದ ಬೂತ್ ಅಧ್ಯಕ್ಷರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದು ವಿಶ್ವಕ್ಕೆ ದೇಶದ ಪರಿಚಯ ಆಗಿರುವುದು ಡಿಜಿಟಲ್ ಕಾರಣದಿಂದ, ಇದಕ್ಕೆ ನರೇಂದ್ರಮೋದಿಯವರ ಆಡಳಿತವೇ ಮೂಲಕ ಕಾರಣ. ದೇಶದ ಐಕ್ಯತೆ, ಸಮಾನತೆಗೆ ಮತ್ತು ಅಭಿವೃದ್ಧಿಯ ದೃಷ್ಠಿಯಿಂದ ಮತ್ತೊಮ್ಮೆ ಪ್ರಧಾನಿಯನ್ನಾಗಿ ನರೇಂದ್ರಮೋದಿಯವರನ್ನು ಮಾಡಲು ಮತ್ತೊಮ್ಮೆ ಅವಕಾಶ ಕೊಡಿ ಎಂದು ಹೇಳಿದರು.
ಸಾಕಷ್ಟು ಮಂದಿಗೆ ಇಂದಿಗೂ ನಾನು ಸಿಗುತ್ತೇನೆಯೇ ಎಂಬ ಗೊಂದಲವಿದೆ. ಆದರೆ, ಅದಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮಗಳ ಹಿತಕಾಯಲು ಸದಾ ನಿಮ್ಮೊಟ್ಟಿಗೆ ಇರುತ್ತೇನೆಂದು ಹೇಳಿದರು.
ಶಾಸಕ ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ರಮೇಶ್ ಇನ್ನಿತರರು ಉಪಸ್ಥಿತರಿದ್ದರು.