ದಾಖಲೆ ಇಲ್ಲದ ಹಣ ವಶ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.20-ದಾಖಲೆಇಲ್ಲದೇ ಸಾಗಿಸಲಾಗುತ್ತಿದ್ದ 1 ಲಕ್ಷರೂ. ಹಣವನ್ನು ಕೊಳ್ಳೇಗಾಲ ವಿಧಾನಸಭಾಕ್ಷೇತ್ರಕ್ಕೆ ಸೇರಿದದಾಸನಪುರಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದಾಸನಪುರಚೆಕ್ ಪೋಸ್ಟ್‍ನಲ್ಲಿನಿನ್ನೆಬೆಳಿಗ್ಗೆ ಬೆಂಗಳೂರಿನಿಂದ ಕೊಳ್ಳೇಗಾಲದ ಕಡೆ ಬರುತ್ತಿದ್ದಕಾರನ್ನು (ಕೆ.ಎ.-51 ಎಂ.ಡಬ್ಲ್ಯೂ-330) ತಪಾಸಣೆ ಮಾಡಿದ ವೇಳೆ ದಾಖಲೆಇಲ್ಲದೆ 1 ಲಕ್ಷರೂ. ಹಣ ಪತ್ತೆಯಾಗಿದೆ. ಹಣವನ್ನು ವಶಕ್ಕೆ ಪಡೆಯಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಿಲ್ಪಾ ನಾಗ್‍ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.