ಮಹಿಳೆ ಅಬಲೆಯಲ್ಲ ಸಬಲಳು: ಡಾ.ಕಾಂತು ಇಂಡಿ
ಇಂಡಿ: ಮಾ.20:ಮಹಿಳೆ ಅಬಲೆಯಲ್ಲ ಅವಳೂ ಕೂಡಾ ಸಬಲಳು ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪುರುಷರಷ್ಠೆ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದು ಉಪನ್ಯಾಸಕ ಡಾ. ಕಾಂತು ಇಂಡಿ ಹೇಳಿದರು.
ಬಸವರಾಜೇಂದ್ರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ಇಂಡಿ ತಾಲೂಕಾ ಮಹಿಳಾ ಕದಳಿ ವೇದಿಕೆ ಇಂಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮೀಸಲಿರದೆ ಆರ್ಥಿಕ, ಶೈಕ್ಷಣಿಕ ,ಸಾಮಾಜಿಕ ರಾಷ್ಟ್ರೀಯ ,ಅಂತರಾಷ್ಟ್ರೀ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ. ಯತ್ರನಾರ್ಯಸ್ತು ಪೂಜ್ಯತೆ ತತ್ರ ರಮಂತೆ ದೇವತಾ: ಮಹಿಳೆಯರನ್ನು ಎಲ್ಲಿ ಗೌರವಿಸುತ್ತಾರೆಯೋ ಅಲ್ಲಿ ದೇವತೆಗಳು ನಲೆಸಿರುತ್ತಾರೆ. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಭಾರತ ದೇಶದಲ್ಲಿ ಮಹಿಳೆಯರಿಗೆ ದೇವರ ಸ್ಥಾನದಲ್ಲಿ ಗೌರವಿಸುವ ಸಂಸ್ಕøತಿ ನಮ್ಮದಾಗಿದೆ.ಸಮಾನತೆ ಎಲ್ಲಿರುತ್ತದೋ ಅದೇ ಬಲವಾದ ದೇಶ, ಮಹಿಳೆ ಒಂದು ಕುಟುಂಬದ ನಿರ್ವಹಣೆಯಲ್ಲಿ ಪುರುಷರಷ್ಠೇ ಪ್ರಮುಖ ಪಾತ್ರವಹಿಸಿದ್ದಾಳೆ. ಇಂದು ಮಹಿಳಾ ದಿನಾಚರಣೆಯಂದು ಕೇವಲ ಕಾಟಾಚಾರದ ಆಚರಣೆ ಮಾಡಿದರೆ ಸಾಲದು ಪ್ರತಿಯೋಬ್ಬರು ಅವರನ್ನು ಗೌರವಿಸುವಂತಾಗಬೇಕು. 12ನೇ ಶತಮಾನದ ಶಿವಶರಣೆಯರಾದ ಅಕ್ಕಮಹಾದೇವಿ, ನಿಂಬೇಕ್ಕ, ನೀಲಮ್ಮಾ,ಆಯ್ದಕ್ಕಿ ಲಕ್ಕಮ್ಮ, ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೆಯಾದ ಕೊಡುಗೆ ನೀಡಿದ ಭಾರತ ದೇಶವನ್ನಾಳಿನ ಹಿಂದಿನ ಪ್ರಧಾನಿ ಇಂಧಿರಾಗಾಂಧಿ, ಸಮಾಜಕ್ಕಾಗಿ ಬಡವರಿಗಾಗಿ ದುಡಿದ ಮದರ್‍ಥೆರೇಸಾ, ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರರಾಣಿ ಚೆನ್ನಮ್ಮಾ .ಕಲ್ಪನಾ ಚಾವ್ಲಾ, ತ್ಯಾಗಮಯಿ ಸುಧಾಮೋರ್ತಿ ಇಂತಹ ಅನೇಕ ಆದರ್ಶ ಮಹಿಳೆಯರ ಗುಣಗಳನ್ನು ಅಳವಡಿಸಿಕೊಳ್ಳಿ
ಎಂದರು.
ಕದಳಿ ವೇದಿಕೆ ತಾಲೂಕಾ ಅಧ್ಯಕ್ಷೆ ಶ್ರೀಮತಿ ಗಂಗಾ ಗಲಗಲಿ ಕಾರ್ಯಕ್ರಮದಲ್ಲಿ ಆಶೇಯನುಡಿಗಳಾಡಿದರು.
ನಿವೃತ್ತ ಪ್ರಾಚಾರ್ಯ ಶ್ರೀಮತಿ ಶೈಲಜಾ ತೆಲ್ಲೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಿ.ಎಸ್ ಪಾಟೀಲ, ಅಧ್ಯಕ್ಷತೆ ಸೋಮಶೇಖರ ಸುರಪೂರ, ಮುಖ್ಯ ಅತಿಥಿಗಳಾಗಿ ಬಿ.ಎಸ್ ಪಾಟೀಲ, ಶಿಕ್ಷಕಿಯರಾದ ಎಸ್.ಟಿ ನಾಯಕ, ಪಾರ್ವತಿ ದಳವಾಯಿ , ಭವಾನಿ ಗುಳೆದಗುಡ್ಡ, ರಿಯಾನಾ ಸುತಾರ,ಪಾರ್ವತಿ ಸೊನ್ನದ, ಬಿ.ಎಸ್ ಪೊಲೀಸ್ ಪಾಟೀಲ, ಕಸ್ತೂರಿ ಅವುಟಿ, ,ಶ್ರೀಮತಿ ಜೆ.ಡಿ ಕಾಂಬಳೆ, ಶಶಿಕಲಾ ಅಂಕಲಗಿ ಸೇರಿದಂತೆ ಕಸಾಪ ಕದಳಿ ವೇದಿಕೆಯ ಮತ್ತು ಯುವಘಟಕ ಎಲ್ಲ ಪದಾಧಿಕಾರಿಗಳು ಇದ್ದರು.