ಅರಳಗುಂಡಿಗೆ ಕುಡಿಯುವ ನೀರು ಕೊಡಲು ಆಗ್ರಹ
ಜೇವರಗಿ:ಮಾ.20: ಬೇಸಿಗೆ ಇರುವುದರಿಂದ ದಾಸೋಹಿ ಶರಣಬಸವೇಶ್ವರ ಜಾತ್ರೆ ಅರಗುಂಡಿಗಿ ಗ್ರಾಮದಲ್ಲಿ ಇರುವುದರಿಂದ ಗ್ರಾಮದಲ್ಲಿ ಇರುವುದರಿಂದ ಕುಡಿಯುವ ನೀರು ಇರದ ಜನರು ಪರದಾಡುತ್ತಿದ್ದಾರೆ ಕೂಡಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕುಡಿಯುವ ನೀರು ಜನರ ಭವಣೆ ನೀಗಿಸಬೇಕೆಂದು ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಜಗದೀಶ್ ಮಡಿವಾಳಪ್ಪ ಆಗ್ರಹಿಸಿದ್ದಾರೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಕೊಡದೆ ಕಾಲ ರಣ ಮಾಡುತ್ತಿದ್ದಾರೆ ಧನ ಕರೆಗಳಿಗೆ ಜಾನುವಾರಗಳಿಗೆ ಕುಡಿಯುವ ನೀರಿಲ್ಲ ಬೋರ್ವೆಲ್ ಮತ್ತು ಬಾವಿಗಳು ನೀರು ತಂದು ಜನರಿಗೆ ಕೊಡಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು ಇಲ್ಲವಾದರೆ ಟ್ಯಾಂಕರ್ ಮುಖಾಂತರ ಅರಳಗುಂಡಿಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು ಇಲ್ಲವಾದರೆ ಗ್ರಾಮ ಪಂಚಾಯತ್ ಬೀಗ ಹಾಕಲಾಗುತ್ತದೆ ಎಂದು ಹೇಳಿದರು ಅಥವಾ ಉಗ್ರವಾದ ಹೋರಾಟ ಮಾಡಲಾಗುತ್ತದೆ ಒಂದು ವೇಳೆ ನಿರ್ಲಕ್ಷ ವಹಿಸಿದರೆ ಗ್ರಾಮದ ಜನತೆ ನೇತೃತ್ವ ಹಾಗೂ ನಮ್ಮ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ