ನೀರು ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಗೆ ಕಣ್ಣೀರೆ ಗತಿ: ಪಾಂಡೆ
ಕಲಬುರಗಿ:ಮಾ.19: ನೀರನ್ನು ನಾವು ಸಂರಕ್ಷಿಸದೇ ಹೋದಲ್ಲಿ ಮುಂದಿನ ಪೀಳಿಗೆಗೆ ಕಣ್ಣೀರೇ ಗತಿ ಎಂದು ಸಾಮಾಜಿಕ ಕಾರ್ಯಕರ್ತರೂ ಆದ ಉತ್ತರ ಪ್ರದೇಶದ ಪದ್ಮಶ್ರೀ ಪುರಸ್ಕøತ ಉಮಾಶಂಕರ್ ಪಾಂಡೆ ಅವರು ಎಚ್ಚರಿಸಿದರು.
ನಗರದ ವಿಶ್ವೇಶ್ವರ್ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಜರುಗಿದ ನೀರಿನ ಸದ್ಬಳಕೆ ಹಾಗೂ ಅಂತರ್ಜಲ ಸಂರಕ್ಷಣೆಯ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನೀರಿಗೆ ತಾರತಮ್ಯ ಗೊತ್ತಿಲ್ಲ. ಎಲ್ಲರನ್ನೂ ಶುಚಿಗೊಳಿಸುತ್ತದೆ. ಇಂತಹ ನೀರನ್ನು ನಾವು ಸಂರಕ್ಷಗೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮುಂದಿನ ಪೀಳಿಗೆಗೆ ಕೆಣ್ಣೀರೇ ಗತಿ ಎಂದರು.
ರಾಜಸ್ಥಾನದ ಪದ್ಮಶ್ರೀ ಪುರಸ್ಕøತ ಲಕ್ಷ್ಮಣ್ ಸಿಂಗ್ ಅವರು ಮಾತನಾಡಿ, ನೀರನ್ನು ಉಳಿಸಿ ಜೀವನನ್ನು ರಕ್ಷಿಸಬೇಕು. ರಾಜಸ್ಥಾನದಲ್ಲಿ ನೀರಿಗೆ ಇರುವ ಅಭಾವ ಮತ್ತು ಜನರು ಅನುಭವಿಸುತ್ತಿರುವ ಕಷ್ಟವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ಬಸವರಾಜ್ ಗಾದಗೆ ಅವರು ಉಪಸ್ಥಿತರಿದ್ದರು, ಡಾ. ಶುಭಾಂಗಿ ಡಿ.ಸಿ., ಅವರು ವಂದಿಸಿದರು. ಡಾ. ಸಂತೀಶ್ ಉಪಳಾಂವಕರ್ ಅವರು ಸ್ವಾಗತಿಸಿದರು. ಪ್ರೊ. ಪೂಜಾ ಮರಬ್ ಅವರು ಕಾರ್ಯಕ್ರಮ ನಿರೂಪಿಸಿದರು. ಭೋಧಕ, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.