ಜಾತ್ಯಾತೀತ ನಿಲುವಿನ ಪರಿಷತ್ತು:ಡಾ.ಗೊಳಸಂಗಿ
ಕಲಬುರಗಿ:ಮಾ.19:ಜಾತ್ಯಾತೀತ ದಸಾಪ ಕಟ್ಟಿದ್ದೇವೆ.ಸಾವಿತ್ರಿ ಬಾಯಿಫುಲೆ ಮೊದಲ ಜಯಂತಿ,ಉತ್ಸವ ಫಾತೀಮಾಶೇಖ್ ಪ್ರಶಸ್ತಿ ಗದಗಶ್ರೀಗಳಿಂದ ಮಾಡಿದ್ದೇ ನಮ್ಮ ಪರಿಷತ್ತು ಮಾಡಿದೆ.ಶಿಕ್ಷಕ – ಶಿಕ್ಷಕಿ ದಿನಾಚರಣೆ ಮಾಡಲು ಸಾಧ್ಯವಾಗಿದೆ.ಹೆದರದೇ,ಮುಲಾಜಿಲ್ಲದೇ ಮಾಡಬೇಕಾಗಿದೆ.ಪ್ರಶಸ್ತಿ ಮೌಲ್ಯಗಳು ಕುಸಿಯುತ್ತವೆ. ಪ್ರಶಸ್ತಿಗಳು ಮಾರಾಟಕ್ಕಿವೆ.ಬುದ್ಧ,ಬಸವ ಅಂಬೇಡ್ಕರ ತತ್ವ ನೆಲದ ಮೇಲೆ ನಾವಿದ್ದೇವೆ ಎಂದು ರಾಜ್ಯ ದಸಾಪ ಅಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ನುಡಿದರು
ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ರಂಗಾಯಣದಲ್ಲಿ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ತ್ರಿವೇಣಿ ಸಂಗಮ ಉತ್ಸವ,ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶೋಷಿತರ, ಬರಹದ ಜೊತೆ ನಾವು ತೊಡಗಬೇಕು.ಶಿಕ್ಷಕಿಯರಾಗಿ ಮಾಡಿದ ಸೇವೆ ರಮಾಬಾಯಿ ಅವರ ತ್ಯಾಗ ನಮ್ಮ ದೇಶಕ್ಕೆ ಮಾದರಿ ಎಂದರು.ಹೆಣ್ಣುಮಗಳ ತಾಯಿಗರ್ಭದಲ್ಲಿ ಅಷ್ಟೇ ಅಲ್ಲ ಭೂಮಿ ಮೇಲೆ ಸಹ ಸುರಕ್ಷಿತ ಇಲ್ಲವೆಂದರು.ಈ ಮೂರು ತಾಯಂದಿರ ಸೇವೆ ಅನುಕರಣೀಯವೆಂದರು.
ವಿಶೇಷ ಉಪನ್ಯಾಸ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅವರು ಒಂದನೆಯ ತರಗತಿಯಿಂದ ಹತ್ತನೆಯ ತರಗತಿ ವರೆಗೂ ಈ ಮೂರು ಸಾಧಕಿಯರ ಜೀವನ ಚರಿತ್ರೆ ಪಠ್ಯ ವಾಗಬೇಕೆಂದು ಒತ್ತಾಯಿಸಿ.ಈ ಮೂವರ ಕೊಡು ಗೆ ಸಮಾಜಕ್ಕೆ ಆದರ್ಶವೆಂದರು.
ಮಾತೃಹೃದಯಿಗಳ ಸಂಗಮ ವಿಶ್ವಕುಟುಂಬದ ತಾಯಿಗಳು ದೇವರು ನಾವು ಮಾಡಿದ್ದೇವೆ.ಇಂತಹ ಸಾಧಕಿಯರು ಮಾಡಿದ ಸಾಧನೆ ಅಪೂರ್ವವೆಂದರು. ಎಲ್ಲ ಧರ್ಮ,ಜಾತಿಗಳಲ್ಲಿ ಮಹಿಳೆಗೆ ಶೋಷಣೆ ಮಾಡಿ ದವರು ಇದ್ದಾರೆ‌.ನಮಗಾಗಿ ಜೀವತೇಯ್ದವರಿಗೆ ನಮಿ ಸಲು ಹಚ್ಚಿದವರು ಎಂದು ಸಾಹಿತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ.ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ನುಡಿದರು.
ಅಖಿಲ ಕರ್ನಾಟಕ
ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ವಿಶಾಲಾಕ್ಷಿ ಕರಡ್ಡಿ ಮಹಿಳಾ ಸುಧಾರಣೆಯಾದರೆ ಸಾಕು ಇಡಿ ಊರು,ಸಮಾಜ ಸುಧಾರಣೆ ಸಾಧ್ಯವೆಂದ ರು.ಸುಧಾರಿಸಿದರೆ ಮಾತ್ರ ದೇಶ ಉದ್ದಾರವೆಂದರು.
ಅಧ್ಯಕ್ಷತೆಯನ್ನು ಹಳಕಟ್ಟಿ ಬಳಗದ ಅಧ್ಯಕ್ಷ ಡಾ.ಗವಿಸಿ
ದ್ಧಪ್ಪ ಪಾಟೀಲವಹಿಸಿ ಪ್ರಗತಿಪರ ಆಶಯ ಉಳ್ಳವರ ಪರಿಷತ್ತು ಇದಾಗಿದೆ.ಯುವ ಲೇಖಕರ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿದೆ.ಈ ಅವಧಿಯ ಕಸಾಪ ಜಿಲ್ಲಾ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಎ.ಇ.ಇ. ಬಿ.ಆರ್.ಬುದ್ಧಾ,ಜಿಲ್ಲಾ ದಸಾಪ ಅಧ್ಯಕ್ಷ ಡಾ.ಸುನೀಲ ಜಾಬಾದಿ,ದಸಾಪ ವಿಭಾಗೀಯ ಸಂಚಾಲಕ ಡಾ.ಗಾಂಧೀಜಿ ಮೊಳಕೇರಿ ಇದ್ದರು. ಸ್ವಾಗತ- ಪ್ರಾಸ್ತಾವಿಕ ನುಡಿಯನ್ನು ದಸಾಪ ಪ್ರಧಾನ ಕಾರ್ಯದರ್ಶಿ ಡಾ.ರಾಜಕುಮಾರ ಮಾಳಗೆ,ದೇವೇಂದ್ರ ರಾಮಗೋಳ ನಿರೂಪಿಸಿದರು.ಡಾ.ಶಿಲಾದೇವಿ ಬಿರಾದಾರ ವಂದಿಸಿದರು.ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಡಾ. ಕೆ.ಎಸ್.ಬಂಧು,ಡಾ.ಚಿದಾನಂದ ಕುಡ್ಡನ್ನ,ಡಾ.ಎಂ.ಬಿ.ಕ ಟ್ಟಿ,ಡಾ.ವಸಂತ ನಾಶಿ,ಡಾ.ಶರಣಬಸಪ್ಪ ವಡ್ಡನಕೇರಿ, ಡಾ.ನಾಗಪ್ಪ ಗೋಗಿ,ಡಾ.ಅಜೀಂ ಪಾಷಾ,ಡಾ.ಸಿದ್ದಪ್ಪ ಹೊಸಮನಿ,ಸುರೇಶ ಕಾನೇಕರ,ಡಾ.ಶಾಂತಪ್ಪ ಡಂಬಳ,ಡಾ.ಇಂದುಬಾಯಿ ಸಿಂಧೆ,ಡಾ.ಶಿವಕುಮಾರ ಸಿಂಗೆ,ಮಲ್ಲಿನಾಥ ನಿಂಬರ್ಗೆ,ಡಾ.ಶಿವಪುತ್ರ ಹೊಳ್ಕರ,ಜೈಭೀಮ ಹೋಳಿಕೇರಿ
ಇತರರಿದ್ದರು.
ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಡಾ.ಅಶೋಕ ಮಟ್ಟಿ ನೇಮಕ ಮಾಡಿ ಆದೇಶ ನೀಡಿ ಸನ್ಮಾನಿಸಲಾಯಿತು.ಕೆ.ಎ.ಎಸ್.ಡಾ.ಅಂಬಾದಾಸ ಕಾಂಬಳೆ ಅವರನ್ನು ಗೌರವ ಸನ್ಮಾನ ಮಾಡಲಾಯಿತು.
ಸಾವಿತ್ರಿಬಾಯಿ ಫುಲೆ ಪ್ರಶಸ್ತಿ:
ಮಹಾದೇವಿ ಬಂಧು,ಡಾ.ಶೈಲಜಾ ಕೊನೇಕ್,ಸವಿತಾ ಕಾಂಬಳೆ,ಗೌತಮಿ ಹಿರೋಳ್ಳಿ,ಡಾ.ಸಂಗೀತಾ ಪಾಟೀಲ, ಡಾ.ಚೆನ್ನಮ್ಮ ಅಲ್ಬಾ,ಮಲ್ಲಮ್ಮ ಕಾಳಗಿ,ರೇಣುಕಾ ಗೋಗಿ,ಶೈಲಜಾ ಕುಡ್ಡನ್ನ,ಡಾ.ಸರಿತಾ ಹಿಪ್ಪರಗಿ,
ಫಾತಿಮಾ ಶೇಖ್ ಪ್ರಶಸ್ತಿ:
ಪೌಜಿಯಾ ಬೇಗಂ,ಡಾ.ರಾಬಿಯಾ ಇಫಾತ್,ಶಾಕೀರಾ ತನ್ವೀರ,ಹಸಿನಾಬೇಗಂ ಪಾಶಾ,ಡಾ.ಅಂಬಿಕಾ ಸಿಂಗೆ,ಶಾ ಕೀರಾ ಬೇಗಂ,ಡಾ.ಸುಖದೇವ ಗಂಟೆ,ಸುನೀತಾ ಮಾಳಗೆ,ಮೈಮುನಾ ಖಾತೂಮ್,
ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ:
ಶಾಂತಾ ಪಸ್ತಾಪೂರ,ಕಸ್ತೂರಾಬಾಯಿ ಬುದ್ದಾ,ಡಾ.ಸಂ ಧ್ಯಾ ಕಾನೇಕರ,ಗೀತಾ ಭರಣಿ,ಸುಷ್ಮಾವತಿ ಹೊನ್ನಗೆಜ್ಜಿ, ಶ್ವೇತಾ ದೊಡ್ಡಮನಿ,ಇಂದಿರಾಬಾಯಿ ಬಳಗಾನೂರ,ಸುರೇಖಾ ಕಡಕೋಳ,ಅರ್ಚನಾ ದೇವ‌ ನೂರ,ಪೂಜಾ,ಮಾಯಾದೇವಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.