ಹರಿಹರ ತೋಟದಲ್ಲಿ ಸುಗ್ಗಿ ಸಂಭ್ರಮ
ಆಳಂದ,ಮಾ.19-ತಾಲೂಕಿನ ಗಡಿಗ್ರಾಮ ಖಜೂರಿಯ ರಾಜಶೇಖರ ಹರಿಹರ ಅವರ ತೋಟದಲ್ಲಿ ಸೋಮವಾರ 5 ಗಂಟೆ ಯಿಂದ ರಾತ್ರಿ 9 ಗಂಟೆಯವರೆಗೆ ಸುಗ್ಗಿ ಸಂಭ್ರಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ವಿಶ್ವನಾಥ ಕೊರಣೇಶ್ವರ ಶ್ರೀಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಾಜಶೇಖರ ಹರಿಹರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಪ್ಪಾಸಾಹೇಬ ತೀರ್ಥೇ, ಮಲ್ಲಿನಾಥ ಯಲಶೆಟ್ಟಿ, ದಯಾನಂದ, ಶಿವರಾಜ ಜೋಶಿ, ಎನ್‍ಎಸ್‍ಎಲ್ ನಿರ್ದೇಶಕ ಶಾಂತು ಪಾಟೀಲ, ಆಲಗೂಡೆ, ಡಾ.ಅವಿನಾಶ ದೇವನೂರ ಕಲ್ಯಾಣಿ ಹರಳಯ್ಯ ಇನ್ನಿತರರು ಭಾಗವಹಿಸಿದ್ದರು.
ತುಕ್ಕಾಣೆ ಅವರು ಹಂತಿ ಪದಗಳನ್ನು ಹಾಡಿ ಎಲ್ಲರನ್ನು ಮನರಂಜಿಸಿದರು. ಅದೇರೀತಿ ಚಂದ್ರಕಲಾ ಬಂಡೆ ಚತುರಾಬಾಯಿ ಮುಕ್ತಬಾಯಿ ಹಾಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿಶ್ವನಾಥ ಕೋರಣೇಶ್ವರ ಶ್ರೀಗಳು ನೇರವೇರಿಸಿ ಆಶಿರ್ವಚನ ನೀಡಿದರು. ಆಧುನಿಕ ಯುಗದಲ್ಲಿ ನಾವು ತಂತ್ರಜ್ಞಾನದ ಬಳಕೆಯಿಂದ ಹಂತಿ ಪದಗಳು ಮರೆತಿದ್ದೇವೆ ಎಂದು ಅಧ್ಯಕ್ಷತೆ ವಹಿಸಿದ್ದ ರಾಜಶೇಖರ ಹರಿಹರ ಕಳವಳ ವ್ಯಕ್ತಪಡಿಸಿದರು. ಜಾನಪದ ಜೀವಂತವಾಗಿ ಉಳಿಯಬೇಕೆಂದು ಎಲ್ಲರಿಗೆ ಮನಮುಟ್ಟುವಂತೆ ಹೇಳಿದರು. ಕಲ್ಯಾಣಿ ತುಕ್ಕಾಣಿ ಸ್ವಾಗತಿಸಿದರು. ಇಟಗಿ ಅವರು ವಂದಿಸಿದರು.