ಟಿಪ್ಪರ್-ಬೈಕ್ ಡಿಕ್ಕಿ: ಓರ್ವ ಸಾವು
ಕಲಬುರಗಿ,ಮಾ.19-ಟಿಪ್ಪರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರ ಹೊರವಲಯದ ಹುಮನಾಬಾದ ರಸ್ತೆಯ ರಾಮನಗರ ಬಳಿ ನಿನ್ನೆ ನಡೆದಿದೆ.
ಮೃತನನ್ನು ಇಲ್ಲಿನ ಶಾಸ್ತ್ರಿ ನಗರ ನಿವಾಸಿ ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದ ರವಿ ಸಂಜೀವಕುಮಾರ ರೆಡ್ಡಿ (26) ಎಂದು ಗುರುತಿಸಲಾಗಿದೆ. ನೀಲಕುಮಾರ ಒನಕುದರೆ ಎಂಬಾತನಿಗೆ ಗಾಯಗಳಾಗಿವೆ.
ನೀಲಕುಮಾರ ಮತ್ತು ರವಿ ಬೈಕ್ ಮೇಲೆ ಹೊರಟಿದ್ದರು ರಾಮನಗರ ಬಳಿ ಟಿಪ್ಪರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಹಿಂದೆ ಕುಳಿತಿದ್ದ ರವಿ ಟಿಪ್ಪರ್ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಸಂಚಾರಿ-2 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.