ಡಾ.ಸೈಯದ್ ಜಕವುಲ್ಲಾ ನಾಮನಿರ್ದೇಶನ
ಕಲಬುರಗಿ,ಮಾ.19: ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರನ್ನಾಗಿ ನಗರದ ಅಲ್-ಬದರ್ ದಂತ ಕಾಲೇಜು ಮತ್ತು ಆಸ್ಪತ್ರೆಯ ಪ್ರಿನ್ಸಿಪಾಲ್ ಮತ್ತು ಡೀನರಾದ ಪ್ರೊ.ಡಾ.ಸೈಯದ್ ಜಕವುಲ್ಲಾ ಅವರು ನಾಮ ನಿರ್ದೇಶನಮಾಡಲಾಗಿದೆ.
ಸಂಸ್ಥೆಯ ಆಡಳಿತ ಮಂಡಳಿ, ವೈಸ್ ಪ್ರಿನ್ಸಿಪಾಲ್ ,ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಪ್ರೊ.ಡಾ.ಸೈಯದ್ ಜಕವುಲ್ಲಾ ಅವರು ನಾಮನಿರ್ದೇಶನಗೊಂಡಿದ್ದಕ್ಕಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.