ವಿಶ್ವಕರ್ಮರು ಪ್ರಪಂಚದ ಮೊದಲ ಕಲಾ ವಿನ್ಯಾಸಕರು: ಶಾಸಕ ದರ್ಶನ್
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.18:- ವಿಶ್ವಕರ್ಮರು ಪ್ರಪಂಚದ ಮೊದಲ ಕಲಾ ವಿನ್ಯಾಸಗಾರರಾಗಿದ್ದು, ದೇವರು ಸೃಷ್ಠಿಸಿದ ಪರಿಸರಕ್ಕೆ ತನ್ನದೇ ದೃಷ್ಟಿಕೋನದಲ್ಲಿ ಸುಂದರತೆ ಮತ್ತು ಅಕರ್ಷಣೆ ರೂಪವನ್ನು ನೀಡುವ ಮೂಲಕ ವಿಶ್ವಕರ್ಮ ಸಮುದಾಯವು ಸಮಾಜದಲ್ಲಿನ ಎಲ್ಲಾ ಸಮುದಾಯಕ್ಕೆ ಕೊಡುಗೆ ನೀಡಿದೆ ಎಂದು ಶಾಸಕ ಶಾಸಕ ದರ್ಶನ್ ಧ್ರುವನಾರಾಯಣ್ ಬಣ್ಣಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿ ವಿಶ್ವಕರ್ಮ ಸಮುದಾಯ ಸಮಾಜದಲ್ಲಿ ಐದು ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಪ್ರಕೃತಿಗೆ ಸುಂದರತೆಯನ್ನು ನೀಡಿದ್ದಾರೆ. ನಮ್ಮ ದೇಶದಲ್ಲಿನ ಪ್ರವಾಸಿ ತಾಣಗಳು, ಪಟ್ಟಣದಲ್ಲಿನ ಬಹುಮಹಡಿ ಕಟ್ಟಡಗಳು ಸೇರಿದಂತೆ ಹಳ್ಳಿಯಿಂದ- ದಿಲ್ಲಿಯವರೆಗೆ ಪ್ರಕೃತಿಗೆ ಸುಂದರವಾದ ರೂಪ ನೀಡುವಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಒಂದು ಹಳ್ಳಿ ನಿರ್ಮಾಣ ಆಗಿದೆ ಎಂದರೆ ಅಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ ಎಂಬುದನ್ನು ಮರೆಯುವಂತಿಲ್ಲ. ರೈತರು ಕೃಷಿಗೆ ಬಳಸುವ ಉಳುಮೆಯ ನೇಗಿಲಿನಿಂದ ಹಿಡಿದು ದೇವಸ್ಥಾನಗಳ ನಿರ್ಮಾಣ, ವಿಗ್ರಹಗಳ ಕೆತ್ತನೆ, ಚಿನ್ನಾಭರಣಗಳ ತಯಾರಿಕೆ, ಕಟ್ಟಡದ ಸಾಮಾಗ್ರಿಗಳು ಹೀಗೆ ಪ್ರತಿ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾದದ್ದು
ತಾಲೂಕು ಅಧ್ಯಕ್ಷ ಚಂದ್ರು ಮತ್ತು ವಿಶ್ವಕರ್ಮ ಜನಾಂಗದ ಮುಖಂಡ ಶ್ರೀಕಂಠ ಮಾತನಾಡಿ ವಿಶ್ವಕ್ಕೆ ಸುಂದರ ರೂಪ ನೀಡಿರುವ ವಿಶ್ವಕರ್ಮ ಸಮುದಾಯದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಬದುಕು ನಿರ್ಮಾಣ ಮಾಡುವಲ್ಲಿ ಎಡವುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಉದ್ಯಮದತ್ತ ಸೆಳೆದು ಅವರ ವಿದ್ಯಾಭ್ಯಾಸವನ್ನು ಮೊಟಕು ಮಾಡುವ ಜೊತೆಗೆ ಮಕ್ಕಳಿಗೆ ಹಣದ ಆಸೆಯ ಬಲೆಗೆ ಸಿಲುಕಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಮುಂದಾದರು ಸಮುದಾಯದ ಜನತೆ ಎಚ್ಚೆತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಮೊದಲ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು. ಸರ್ಕಾರಗಳು ಯಾವುದೇ ಬಂದರೂ ಎಲ್ಲಾ ಪಕ್ಷದಲ್ಲೂ ನಮ್ಮ ಜನಾಂಗ ಉತ್ತಮ ರೀತಿ ಕೆಲಸ ಮಾಡುತ್ತಿದೆ ಆದರೆ ಆರ್ಥಿಕವಾಗಿ ನಾವು ಹಿಂದುಳಿದಿದ್ದೇವೆ ನಮ್ಮ ಜನಾಂಗವನ್ನು ಗುರುತಿಸಿ ಪಕ್ಷದ ಹುದ್ದೆಗಳಲ್ಲಿ ನೇಮಿಸಬೇಕೆಂದು ಮತ್ತು ಈ ಬಾರಿ ಶ್ರೀಕಂಠೇಶ್ವರ ದೇವಾಲಯ ಧರ್ಮದರ್ಶಿಯಾಗಿ ನಮ್ಮ ಜನಾಂಗದಿಂದ ಗೋಪಾಲಕೃಷ್ಣ ಒಬ್ಬರನ್ನು ಆಯ್ಕೆ ಮಾಡಿದ್ದೇವೆ ಮತ್ತು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದೇವೆ ನೀವು ಈ ಬಾರಿ ನಮ್ಮ ಜನಾಂಗವನ್ನು ಗುರುತಿಸಿ ಅವರಿಗೆ ದೇವಸ್ಥಾನದಲ್ಲಿ ಸೇವೆ ಮಾಡಲು ಧರ್ಮದರ್ಶಿಯನ್ನು ಮಾಡಿಕೊಡಬೇಕೆಂದು ಈ ಸಂದರ್ಭದಲ್ಲಿ ಸರ್ವಾನುಮತದಿಂದ ಮನವಿ ಮಾಡಿದರು ಅದಕ್ಕೆ ಶಾಸಕ ದರ್ಶನ್ ದ್ರುವ ನಾರಾಯಣ್ ಅದನ್ನು ಪರಿಗಣಿಸಿ ನಿಮ್ಮ ಜನಾಂಗದ ಜೊತೆ ನಾನಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ತಾಲೂಕು ಅಧ್ಯಕ್ಷ ಚಂದ್ರು ಮುಖಂಡ ಶ್ರೀಕಂಠಾಚಾರ್ ಸೇರಿದಂತೆ ಇತರರು ಇದ್ದರು.