ಶಾಸಕ ಮುನಿರತ್ನ ವಿರುದ್ಧ ದಸಂಸ ಆಕ್ರೋಶ
ಮಾಲೂರು.ಸೆ.೧೭- ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಂ ನಾಯ್ಡುರವರು ದಲಿತ ಸಮುದಾಯವನ್ನು ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ನಡೆಸಿ ಶವ ಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನಂ ನಾಯ್ಡುರವರು ಚಲುವರಾಜು ಎಂಬ ಗುತ್ತಿಗೆದಾರರ ಬಳಿ ತಮ್ಮ ವೈಯಕ್ತಿಕ ವ್ಯಾವಹರದ ಬಗ್ಗೆ ಮಾತನಾಡುತ್ತಿದ್ದಾಗ ದಲಿತ ಸಮುದಾಯದ ಬಗ್ಗೆ ತುಚ್ಚವಾಗಿ ಮಾತನಾಡಿರುವುದನ್ನ ಖಂಡಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ವತಿಯಿಂದ ಡಾ ಬಿ.ಆರ್.ಅಂಬೇಡ್ಕರ್ ಉದ್ಯಾನವನದನಲ್ಲಿ ಪ್ರತಿಭಟನೆ ನಡೆಸಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮುನಿರತ್ನಂರವರ ಶವ ಯಾತ್ರೆ ನಡೆಸಿ ಮಾರಿಕಾಂಬಾ ವೃತ್ತದಲ್ಲಿ ಪ್ರತಿಕೃತಿ ದಹನ ಮಾಡಿದರು,
ಅಂಬೇಡ್ಕರ್ ವಾದ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್ ಮಾತನಾಡಿ, ಶಾಸಕ ಮುನಿರತ್ನಂ ಅವರು ಜಾತಿ ಹೆಸರಿನ ಮೂಲಕ ದಲಿತ ಸಮುದಾಯವನ್ನು ಒಬ್ಬ ಜನ ಪ್ರತಿನಿಧಿಯಾಗಿ ಈ ರೀತಿ ಮಾತನಾಡಿರುವುದು ಬಹಳ ಖಂಡನೀಯ, ಹೆಣ್ಣು ಮಕ್ಕಳ ಮೇಲೆ ಇಂತಹ ಕೊಳಕು ಮನಸ್ಸು ಹೊಂದಿರುವ ಮುನಿರತ್ನಂ ನಾಯ್ಡುರವರನ್ನ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಅವರನ್ನ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿರುವುದು ಕಾನೂನಿಗೆ ಸಂದ ಜಯವಾಗಿದೆ.
ಕೋಮುವಾದವನ್ನು ಉಂಟುಮಾಡುವಂತಹ ಮುನಿರತ್ನಂ ನಾಯ್ಡುರವರಂತಹ ಜನ ಪ್ರತಿನಿಧಿಗಳನ್ನ ಗಡಿಪಾರು ಮಾಡಬೇಕು, ಶಾಸಕ ಸ್ಥಾನದಿಂದ ವಜಾಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಉಗ್ರವಾದ ಹೋರಾಟವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ ತಹಶಿಲ್ದಾರ್ ಕಚೇರಿಯ ಮೂಲಕ ಗೃಹ ಸಚಿವರಿಗೆ, ರಾಜ್ಯಪಾಲರಿಗೆ, ಜಿಲ್ಲಾಧಿಕಾರಿಗಳಿಗೆ, ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ವಿಭಾಗಿಯ ಸಂಚಾಲಕ ಎ ಪಿ ರಂಗನಾಥ್, ಜಿಲ್ಲಾ ಸಂಘಟನಾ ಸಂಚಾಲಕ ಮದಿವಣ್ಣನ್ನನ್, ಜಿಲ್ಲಾ ಸಂಘಟನಾ ಸಂಚಾಲಕ ಎಟ್ಟಕೋಡಿ ಎ ಕೆ ವೆಂಕಟೇಶ್, ಜೂನಿಯರ್ ಗದ್ದರ್ ಸೀನಪ್ಪ, ಕಳವಂಚಿ ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಮುನಿರಾಜು, ತಾಲ್ಲೂಕು ಮಹಿಳಾ ಒಕ್ಕೂಟದ ಚಂದ್ರಕಲಾ ನಾಗವೇಣಿ, ಸುರೇಶ್, ಶಿವು, ಮೀಸೆ ಮುನಿಯಪ್ಪ, ಲಕ್ಕೂರು ತಿಮ್ಮರಾಜ್, ಕಿರಣ್, ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು,