ವಿವಿಧ ಫಲಾನುಭವಿಗಳಿಗೆ ಸವಲತ್ತುಗಳು ಶಾಸಕರಿಂದ ವಿತರಣೆ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.18:- ನಗರಸಭೆ ವತಿಯಿಂದ ನಗರಸಭೆಯ 15 ಲಕ್ಷ ವೆಚ್ಚದ ಸಾಮಾನ್ಯ ನಿಧಿಯಿಂದ ನಗರಸಭೆ ವತಿಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪಾಲ್ಗೊಂಡು, ಒಲಿಗೆ ಯಂತ್ರ, ಹೈರನ್ ಬಾಕ್ಸ್, ಮರಕೆಲಸ ಮಾಡುವ ಯಂತ್ರಗಳನ್ನು ವಿತರಣೆ ಮಾಡಿದರು. ಶಾಸಕ ದರ್ಶನ್ ದ್ರುವ ನಾರಾಯಣ್ ಮಾತನಾಡಿ ಸಮಾಜದಲ್ಲಿ ಮಹಿಳೆಯರು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಜೀವನ ಮತ್ತು ಬದುಕನ್ನು ಕಟ್ಟಿಕೊಳ್ಳುವುದು ಮುಂದುವರೆಯಲು ಇದು ಸಹಕಾರಿಯಾಗುತ್ತದೆ ಇದನ್ನು ಸದುಪಯೋಗವಾಗಿ ಬಳಸಿಕೊಂಡು ಉತ್ತಮ ಜೀವನ ನಡೆಸಿ ಎಂದರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಬಡ ಕುಟುಂಬಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ಮಾಡಿ ಅವರ ಜೀವನಕ್ಕೆ ಸಹಕಾರಿಯಾಗುತ್ತೇವೆ ಎಂದರು ಸದಸ್ಯರು ಕೂಡ ಪ್ರಾಮಾಣಿಕವಾಗಿ ಫಲಾನುಭವಿಗಳನ್ನು ಗುರುತಿಸಿ ಅವರ ಸಹಾಯಕ್ಕೆ ನಿಲ್ಲಬೇಕು ಎಂದರು.
ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾತನಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶವನ್ನು ನಗರಸಭೆ ವತಿಯಿಂದ ನೀಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೂ ಇದೇ ರೀತಿ ಸಲಕರಣೆಗಳನ್ನು ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಕಂಠ ಸ್ವಾಮಿ ಉಪಾಧ್ಯಕ್ಷರಾದ ರಿಯನಾ ಬಾನು ನಗರಸಭಾ ಪೌರಯುಕ್ತರಾದ ನಂಜುಂಡ ಸ್ವಾಮಿ ನಗರಸಭಾ ಸದಸ್ಯರಾದ ಗಾಯತ್ರಿ ಮೋಹನ್ , ಶ್ವೇತಾ ಲಕ್ಷ್ಮಿ ಮಂಗಳಮ್ಮ, ಗಂಗಾಧರ್ , ರಿಯಾನಾ ಬಾನು, ಮೀನಾಕ್ಷಿ, ವಿಜಯಾ ಲಕ್ಷ್ಮಿ ಖಾಲಿದ್ , ಯೋಗೀಶ್ ಮಹದೇವ ಪ್ರಸಾದ್ ರವರು, ರವಿ ಬಸವರಾಜ್, ದೀಪು ಸೌಭಾಗ್ಯ , ರಮೇಶ್, ಗ್ಯಾರಂಟಿ ಯೋಜನೆ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಕೆ. ಮಾರುತಿ ರವರು ನಗರಸಭೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.