ಮುಖ್ಯ ಅಧಿಕಾರಿಯಾಗಿ ಪ್ರದೀಪ್ ಅಧಿಕಾರ ಸ್ವೀಕಾರ
ಮಾಲೂರು.ಸೆ.೧೭- ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗ್ರೇಡ್ ೧ ಮುಖ್ಯ ಅಧಿಕಾರಿಗಳಾಗಿ ಎಬಿ ಪ್ರದೀಪ್ ಅವರು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಎ.ಬಿ.ಪ್ರದೀಪ್ ಅವರು ಪುರಸಭಾ ಮುಖ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು, ಅವರಿಗೆ ಇಲಾಖೆಯು ಗ್ರೇಡ್-೧ ಪದೋನ್ನತಿ ನೀಡಿ ಬೇರೆ ಕಡೆ ವರ್ಗಾವಣೆ ಮಾಡಲಾಗಿತ್ತು, ಪಟ್ಟಣದ ಪುರಸಭೆಯಲ್ಲಿ ಬಂಗಾರಪೇಟೆಯ ಮುಖ್ಯಾಧಿಕಾರಿ ಸತ್ಯನಾರಾಯಣ ಹಾಗೂ ಶ್ರೀನಿವಾಸಪುರ ಪುರಸಭೆ ನವೀನ್ ಚಂದ್ರ ರವರು ಮುಖ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಪೌರಾಡಳಿತ ಇಲಾಖೆಯ ಎ.ಬಿ.ಪ್ರದೀಪ್ ಅವರನ್ನು ಪಟ್ಟಣದ ಪುರಸಭೆಯ ಮುಖ್ಯ ಅಧಿಕಾರಿಯಾಗಿ ವರ್ಗಾವಣೆಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಪುರಸಭೆಗೆ ಆಗಮಿಸಿದ ಎ.ಬಿ.ಪ್ರದೀಪ್ ಅವರು ಪ್ರಬಾರಿ ಮುಖ್ಯಾಧಿಕಾರಿ ನವೀನ್ ಚಂದ್ರ ಅವರಿಂದ ಅಧಿಕಾರ ಸ್ವೀಕರಿಸಿದರು. ಮುಖ್ಯಾಧಿಕಾರಿಗಳಾಗಿ ಪ್ರಭಾರ ಸ್ವೀಕರಿಸಿದ ಅವರನ್ನು ಪುರಸಭಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಭಿನಂದಿಸಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅಧಿಕಾರಿ ಎ.ಬಿ.ಪ್ರದೀಪ್ ಅವರು ಮಾಲೂರು ಪಟ್ಟಣದ ಪುರಸಭೆಯಲ್ಲಿ ಕಳೆದ ೧ ವರ್ಷದಿಂದ ಮುಖ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಾಗಿತ್ತು. ಪದೋನ್ನತಿ ಹಿನ್ನೆಲೆಯಲ್ಲಿ ಬೇರೆ ಕಡೆ ವರ್ಗಾವಣೆಯಾಗಿ ಮತ್ತೆ ಪಟ್ಟಣದ ಪುರಸಭೆಯಲ್ಲಿ ಶಾಸಕ ಕೆ.ವೈ ನಂಜೇಗೌಡ ಅವರ ಸಹಕಾರದಿಂದ ಮತ್ತೆ ಪುರಸಭಾ ಮುಖ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದೆ ಉತ್ತಮ ಆಡಳಿತ ನೀಡಲು ಸಹಕಾರ ನೀಡಿದ ಹಾಗೆ ಸಹಕಾರ ನೀಡುವುದರ ಮೂಲಕ ತಮ್ಮ ಕೆಲಸ ಕಾರ್ಯಗಳನ್ನು ಉತ್ತಮ ರೀತಿಯಲ್ಲ್ಲಿ ಮಾಡಿಕೊಂಡು ಹೋಗಬೇಕು, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪುರಸಭೆಯ ಎಲ್ಲಾ ಸದಸ್ಯರ ಸಹಕಾರದಿಂದ ಪಟ್ಟಣದಲ್ಲಿ ಸ್ವಚ್ಛತೆ ಬೀದಿ ದೀಪ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲತ್ತುಗಳನ್ನು ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಎ.ರಾಜಪ್ಪ, ನಿರ್ಗಮಿತ ಮುಖ್ಯಾಧಿಕಾರಿ ನವೀನ್ ಚಂದ್ರ, ಕಚೇರಿ ವ್ಯವಸ್ಥಾಪಕಿ ಮುಪ್ತಿಯಾರ್, ಪರಿಸರ ಅಭಿಯಂತರ ಶಾಲಿನಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಸಿ ಎ ಓ ಮಂಜುನಾಥ್, ಮನೋಜ್, ಇನ್ನಿತರರು ಹಾಜರಿದ್ದರು.