ಪ್ರಧಾನಿ ಮೋದಿ ಅವರಿಂದ ಜನಪರ ಯೋಜನೆ ಅನುಷ್ಠಾನ
ಮಾಲೂರು.ಸೆ.೧೭: ವಿಶ್ವ ಕಂಡ ಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಡವರು, ದೀನ, ದಲಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯವನ್ನು ಒದಗಿಸಿದ್ದಾರೆ ಎಂದು ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ಎಸ್.ಎಂ ರಮೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೭೪ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಾಲ್ಲೂಕು ಗಾಣಿಗರ ಸಂಘದ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.
ದೇಶದಲ್ಲಿ ಧಣಿವರಿಯದ ಕೆಲಸ ಪರಿಶ್ರಮ ಮತ್ತು ದೂರ ದೃಷ್ಟಿಯ ಮೂಲಕ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನರೇಂದ್ರ ಮೋದಿಯವರು ತಂದಿದ್ದಾರೆ. ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಿಸಿದ್ದಾರೆ. ೭೪ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನ ಮಂತ್ರಿಗಳು ತಮ್ಮ ದಶಕಗಳ ಸಾರ್ವಜನಿಕ ಜೀವನದಲ್ಲಿ ದೇಶಕ್ಕಾಗಿ ತ್ಯಾಗ ಮತ್ತು ಸಮರ್ಪಣೆ ಮಾಡಿದ್ದಾರೆ.
ತಮ್ಮ ದಣಿವರಿಯದ ಪರಿಶ್ರಮ ಮತ್ತು ದೂರ ದೃಷ್ಟಿಯ ಮೂಲಕ ದೇಶದ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ತಂದಿದ್ದು, ಅದರ ಹೆಮ್ಮೆಯನ್ನು ಹೆಚ್ಚಿಸುವ ಮೂಲಕ ದೇಶದ ಗೌರವನ್ನು ಹೆಚ್ಚಿಸಿ ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ದಂದು ದೇವರು ಮತ್ತಷ್ಟು ಆರೋಗ್ಯಕರ ದೀರ್ಘಾಯುಷ್ಯ ನೀಡಿ ಮತ್ತಷ್ಟು ದೇಶ ಸೇವೆ ಮಾಡಲಿ ಎಂದು ಶುಭ ಹಾರೈಸಿದರು.
ದೇಶದಲ್ಲಿ ದೀನದಲಿತರು ಬಡವರು ಹಿಂದುಳಿದ ವರ್ಗದವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದ ಯೋಜನೆಗಳನ್ನು ಬಳಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ವಿಶ್ವದಲ್ಲಿಯೇ ಭಾರತ ದೇಶವು ಅಭಿವೃದ್ಧಿಯಲ್ಲಿ ಮುಂದುವರೆಯುತ್ತಿರುವ ದೇಶವೆಂದು ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ನಾಯಕ, ದೇಶ ಸೇವೆಗೆ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ. ಹಗಲಿರುಳು ದೇಶಕ್ಕಾಗಿ ಶ್ರಮಿಸುತ್ತಿರುವ ಅವರ ಆದರ್ಶಗಳು, ರಾಜಕೀಯ ಜೀವನ, ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಸಂತ್, ತಾಲೂಕು ಗಾಣಿಗರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್, ಕಾರ್ಯದರ್ಶಿ ಎಸ್ ನಾರಾಯಣಸ್ವಾಮಿ, ಖಜಾಂಚಿ ವಿಎನ್ ಮೂರ್ತಿ, ಸಂಚಾಲಕರಾದ ಎ ಎನ್ ಮಂಜುನಾಥ್, ವಿ ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಮನಿಕೃಷ್ಣಪ್ಪ, ಸಂಘದ ನಿರ್ದೇಶಕರುಗಳಾದ ಮರಿಯಪ್ಪ, ಮುನಿಕೃಷ್ಣ, ಇನ್ನಿತರರು ಹಾಜರಿದ್ದರು.