ಹೆಣ್ಣು ಮಕ್ಕಳಿಗೆ ಶಿಕ್ಷಣ ಬಹುಮುಖ್ಯ
ಚಿಕ್ಕಬಳ್ಳಾಪುರ.ಸೆ.೧೮-ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಸದೃಢ ಕುಟುಂಬಕ್ಕೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಬಹುಮುಖ್ಯ ಹೆಣ್ಣು ಮಗು ಶಿಕ್ಷಣ ಪಡೆದರೆ ಇಡೀ ಕುಟುಂಬ ಸುಖಕರ ಜೀವನ ಸಾಗಿಸಬಹುದು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್ ತಿಳಿಸಿದರು.
ಇಂದು ನಗರದ ಹೊರವಲಯದಲ್ಲಿರುವ ಸಿ ವಿ ವಿ ಕ್ಯಾಂಪಸ್ ಹತ್ತಿರ ಹಿಲಾಲ್ ಎಜುಕೇಷನ್ ಸೊಸೈಟಿಯ ಮಹಮ್ಮದಿಯ ಆಂಗ್ಲ ಶಾಲೆಯ ನೊತನ ಕಟ್ಟಡದ ಶಂಕುಸ್ಥಾಪನೆ ನಂತರ ಗಿಡನೆಟ್ಟು ಅದಕ್ಕೆ ನೀರೆರದು ನೆರವೇರಿಸಿ ನಂತರ ವೇದಿಕೆ ಕಾರ್ಯಕಮ ದಲ್ಲಿ ಅವರು ಮಾತನಾಡಿ, ವಿಧ್ಯಾಭ್ಯಾಸಕ್ಕೆ ಬಡತನ ಅಡ್ಡಿಯಿಲ್ಲ ಬಡತನದ ಮಧ್ಯೆಯೂ ಬಹಳಷ್ಟು ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ ಇನ್ನು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ರವರು ಕೂಡ ಬಡತನ ಮಧ್ಯೆಯು ವಿಧ್ಯಾಭ್ಯಾಸವನ್ನು ಬಿಡದೆ ಕಷ್ಟಗಳು ಎಷ್ಟೇ ಇದ್ದರೂ ಲೆಕ್ಕಿಸದೆ ವಿಧ್ಯಾಭ್ಯಾಸ ಪೂರ್ಣಗೊಳಿಸಿದ್ದರು. ಹಾಗಾಗಿ ಶಿಕ್ಷಣಕ್ಕೆ ಬಡತನ ಅಡ್ಡಿಯಲ್ಲ ಸಾಧಿಸುವ ಛಲ ಬಿಡದೆ ಸಂಕಲ್ಪದೊಂದಿಗೆ ಮುಂದಾಗಬೇಕು ಆಗಲೇ ಅಂದುಕೊಂಡುವುದನ್ನ ಸಾಧಿಸಬಹುದು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೀತಾರಾಮ್ ಮಾತನಾಡಿ ಅಲ್ಪಸಂಖ್ಯಾತರ ಮಕ್ಕಳು ವಿಧ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸಲ್ಲ ಎಂಬುದು ಸಾಮಾನ್ಯವಾದ ಮಾತು ಇಂತಹ ಶಿಕ್ಷಣ ಸಂಸ್ಥೆಗಳಿಂದ ಉತ್ತಮ ವಾತಾವರಣ ಜತೆಗೆ ಎಲ್ಲ ಸೌಲಭ್ಯ ಕಲ್ಪಿಸಲು ಉದ್ದೇಶಿಸಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬಾರದೆಂದು ನೊತನ ಶಾಲಾ ಕಟ್ಟಡ ನಿರ್ಮಿಸಿ ಉನ್ನತ ಶಿಕ್ಷಣ ನೀಡುವ ಉದ್ದೇಶದಿಂದ ಹಿಲಾಲ್ ಎಜುಕೇಷನ್ ಸೊಸೈಟಿ ವತಿಯಿಂದ ಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿದ್ದು ಸಮುದಾಯದ ಮಕ್ಕಳಿಗೆ ಉಪಯುಕ್ತ ಆಗಲಿದೆ ಎಂದ ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ಅಭಿನಂದಿಸುತ್ತೇನೆ ಆದಷ್ಟೂ ಬೇಗ ಕಟ್ಟಡ ಪೂರ್ಣಗೊಳಿಸಿ ಶಾಲಾ ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.
ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮದ್ ಮೊಹ್ಸಿನ್ ಮಾತನಾಡಿ ಈ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ ಈ ಸಂಸ್ಥೆಯು ೫೦ವರ್ಷಗಳ ಇತಿಹಾಸ ಹೊಂದಿದ್ದು ಈ ಶಾಲೆಯ ಫಲಿತಾಂಶವನ್ನು ಕಳೆದ ೧೦ವರ್ಷಗಳಿಂದ ಗರಿಷ್ಠ ಫಲಿತಾಂಶ ಗಳಿಸಿರುವುದು ಸಂತಸದ ವಿಶಯ ಆದರೂ ಸಹಾ ಮಕ್ಕಳಿಗೆ ಶಿಕ್ಷಣ ಜೊತೆಯಲ್ಲಿ ಗುಣಮಟ್ಟ ಜ್ಞಾನದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶ್ರಮತಿ ಸಯೀದಾ ಜಾವಿದ ನಸೀಮ ಖಾನಂ ಮಾತನಾಡಿ ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಹಾಗಾಗಿ ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಮಾಡುವ ಜತೆಗೆ ಮುಂದೆ ಬರುವಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮಕ್ಕಳನ್ನ ತಯಾರಿಸಬೇಕು ಪ್ರತಿಯೊಬ್ಬರಿಗೂ ಶಿಕ್ಷಣ ಮುಖ್ಯ ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಇದು ಮಹಾತ್ಮಗಾಂಧಿ ರವರ ಮಾತು ಆಗಿತ್ತು ಇನ್ನು ಹಿಲಾಲ್ ಎಜುಕೇಷನ್ ವತಿಯಿಂದ ಮಹಮ್ಮದಿಯ ಶಾಲೆಯ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು ಕಾಮಗಾರಿ ಶೀಘ್ರ ಮುಗಿದು ಈ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದರು.
ಫಾಲ್ಕನ್ ಮತ್ತು ಷಾಹೀನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಬ್ದುಲ್ ಸುಭಾನ್ ಮಾತನಾಡಿ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಒಂದು ಒಳ್ಳೆಯ ಗುರಿ ಹಾಗೂ ಕನಸು ಕಾಣಬೇಕು ಅ ಕನಸಿನಂತೆ ಗುರಿ ಸಾಧಿಸುವವರೆಗೆ ಎಲ್ಲಾ ಅಡಚಣೆಗಳನ್ನು ಎದುರಿಸಿ ಜೀವನದ ಗುರಿಯನ್ನು ಸಾಧಿಸಲು ಮುನ್ನುಗಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಲಾಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ರಫೀಕ್ ಅಹ್ಮದ್ ರವರು ವಹಿಸಿದ್ದರು. ಎ ಎಸ್ ಪಿ ರಾಜಾ ಇಮಾಮ್ ಖಾಸಿಂ, ಉಪಾಧ್ಯಕ್ಷ ಬಿ ಎಸ್ ರಫೀಉಲ್ಲಾ, ಖಜಾಂಚಿ ಕೆ ಸೈಯದ್ ಅಜ಼್ಗರ್,ಕಾರ್ಯದರ್ಶಿ ಮಹಮ್ಮದ್ ಜು಼ಹೇಬ್,ಮಹಮದ್ ಜಿಲಾನಿ,ಸದಸ್ಯರಾದ ಸೈಯದ್ ಸುಹೇಲ್,ಸೈಯದ್ ತನ್ವೀರ್, ನಜೀರ್ ಅಹಮದ್ ಬಾಗೇಪಲ್ಲಿ, ನಗರಸಭಾ ಸದಸ್ಯ ಅಂಬರೀಶ್,ಅಪ್ಜಲ್,ಜಾಪರ್,ಇತರರು ಪಾಲ್ಗೊಂಡಿದ್ದರು.