ಕಾಂಗ್ರೆಸ್ ಪಕ್ಷ ದಿಂದ ಹೊಸ ಚರಿತ್ರೆ : ರಾಜು ಆಲಗೂರ
ಕೊಲ್ಹಾರ:ಮಾ.19: 25 ವರ್ಷಗಳ ಇತಿಹಾಸ ಇವತ್ತು ಕೊನೆಗೊಳ್ಳುತ್ತಾ ಇದೆ ವಿಜಯಪುರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಮುಖಾಂತರ ಹೊಸ ಚರಿತ್ರೆ ಬರಿತ್ತಾ ಇದೆ ಎಂದು ಲೋಕಸಭೆ ಚುನಾವಣೆ ‘ಕೈ’ ಅಭ್ಯರ್ಥಿ ರಾಜು ಆಲಗೂರ ಹೇಳಿದರು
ಪಟ್ಟಣದ ಶ್ರೀ ದಿಗಂಬರೇಶ್ವರ ಮಠಕ್ಕೆ ಭೇಟಿ ನೀಡಿ, ಶ್ರೀ ಕಲ್ಲಿನಾಥ ದೇವರ ಆಶೀರ್ವಾದ ಪಡೆದುಕೊಂಡು
ನಂತರ ಶ್ರೀಗಳ ಸ್ವಗೃಹದಲ್ಲಿ ಲೋಕಸಭಾ ಚುನಾವಣೆ ಕುರಿತು ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ ಮಾತನಾಡಿದ ಅವರು
ಕಾಂಗ್ರೆಸ್ ಪಕ್ಷವು ನನಗೆ ಟೆಕೆಟ್ ನೀಡುವ ಮೂಲಕ ಎಸ್‍ಸಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಿದೆ. ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕರು, ಮುಖಂಡರ ಸಹಕಾರದಿಂದ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದೇನೆ. ಪಕ್ಷದ ಮುಖಂಡರು, ಜಿಲ್ಲೆಯ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷ ಕೈಹಿಡಿಯುವ ವಿಶ್ವಾಸ ಇದೆ’ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್ ಬಿ ಪಕಾಲಿ, ಕೆಎಂಎಫ್ ಅಧ್ಯಕ್ಷ ಗುರು ಚಲವಾದಿ,ರಾಜು ಇವಣಗಿ, ಹನೀಫ್ ಮಕಂದಾರ,ದಶರಥ ಈಟಿ, ಮಂಜು ಗದಗ್, ಗೌರೀಶ್ ಪಾಟೀಲ್, ಸಿಡ್ಲಪ್ಪ ತಳಗೇರಿ, ಉಮೇಶ್ ಬಾಲ್ಯಾಳ್ಯ, ತಿಪ್ಪಣ್ಣ ಕುದುರಿ ಸಹಿತ ಅನೇಕರು ಉಪಸ್ಥಿತರಿದ್ದರು