ವಾಯುಮಾಲಿನ್ಯ ನಿಯಂತ್ರಣ ಅರಿವು ಕಾರ್ಯಕ್ರಮ ಆಚರಣೆ
ವಿಜಯಪುರ, ಮಾ.19: ವಿಜಯಪುರ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ವಾಯುಮಾಲಿನ್ಯ ನಿಯಂತ್ರಣ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,
ಸಸಿ ನೆಡುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಹಿರಿಯ ಮೋಟಾರು ವಾಹನ ನಿರೀಕ್ಷಕÀ ಜಿ.ಅರ್.ಹೊಸಮನಿ, ಮೋಟಾರು ವಾಹನ ನಿರೀಕ್ಷಕರಾದ ಮಹ್ಮದ ಹುಸೇನ್, ರಾಜು.ಬಿ.ಅಳಗುಂಡಿ, ಎನ್.ಎಂ.ಶೇಖ, ಸಂತೋಷ ಪಾಟೀಲ, ಮೋಟಾರು ವಾಹನ ಮಾಲಕರ ಪ್ರತಿನಿಧಿಗಳಾದ ಶ್ರೀಮಂತ ಝಳಕಿ, ರಾಜು ಕಟ್ಟಿಮನಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.