ಅಯ್ಯಾಚಾರ ಆಗದ ಜಂಗಮನಿಗೆ ಜೋಳಿಗೆ ಹಿಡಿಯುವ ಹಕ್ಕಿಲ್ಲಾ:ಮಸೂತಿಶ್ರೀ
ತಾಳಿಕೋಟೆ:ಮಾ.19: ನಿರುಪಾದೀಶ್ವರಿಗೆ 12ನೇ ವಯಸ್ಸಿನಲ್ಲಿ ಲಿಂಗದೀಕ್ಷೆ ಗುರು ಉಪದೇಶವಾಗುತ್ತದೆ ಗುರುವಿಗೆ ಪಾದಪೂಜೆ ಮಾಡುತ್ತಾರೆ ಗುರು ಪಾದ ಪೂಜೆ ಮಾಡು ನಿರುಪಾದೀಶ್ವರನೇ ಮಾಡು 84ಲಕ್ಷ ಲಘು ಮಾಡಿಕೋ ಗುರುದೀಕ್ಷೆ ಎಂಬ ಗುರುವಿನ ಹಾಡು ಹಾಡಿ ಖ್ಯಾತ ಪುರಾಣ ಪ್ರವಚನಕಾರರಾದ ಮಸೂತಿಯ ಪೂಜ್ಯ ಶ್ರೀ ಡಾ.ಶಿವಲಿಂಗಯ್ಯ ಶರಣರು ಜನಮನವನ್ನು ತಲ್ಲಣಗೊಳಿಸಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಸೋಮವಾರರಂದು 8ನೇ ದಿನದಂದು ಜರುಗಿದ ಸುಕ್ಷೇತ್ರ ಅಂಕಲಿಯ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ಲಿಂಗದೀಕ್ಷೆ ಪಡೆಯಲು ನಿರುಪಾದೀಶ್ವರರು ಸಿದ್ದವಾಗುತ್ತಾರೆ ಜೋಳಿಗೆಯ ರೂಪದಲ್ಲಿ ಮುಂದಾಗುತ್ತಾರೆ ಈ ಸಮಯದಲ್ಲಿ ಗುರುಗಳು 5ನ್ಯಾಯಗಳು ಉಪದೇಶ ಮಾಡಿ ನಿರುಪಾದೀಶ್ವರರಿಗೆ ತಿಳಿಸುತ್ತಾ ಶಿಷ್ಯನೇ ಭಕ್ತರಿಗೆ ಕಾಳಜಿ ವಹಿಸು ನಿನ್ನಲ್ಲಿದ್ದ ಅನ್ನ ದಾಸೋಹ ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡು ಹಸಿದುಬಂದ ಭಕ್ತನಿಗೆ ಕಣ್ಣಲ್ಲಿ ಕಣ್ಣಿಟ್ಟು ವಿನಯತೆಯಿಂದ ನೋಡು ಎಲ್ಲ ಭಕ್ತರು ತೊಂದರೆಗೊಳಗಾಗದಂತೆ ಶಕ್ತಿ ನೀಡುವಂತಹ ಕಾರ್ಯ ಮಾಡು ಎಂದು ಗುರುಗಳು ಮಂತ್ರೋಪದೇಶ ಮಾಡುತ್ತಾರೆ ನರ ಜನ್ಮ ತೊರೆದು ಹರ ಜನ್ಮ ಮಾಡಿದೆ ಗುರುವೆ ಬಯಲೆಂಬುದು ಬಿಡಿಸಿ ಪರಮಶುಕ್ರ ತೊರಿದೆ ಗುರುವೆ ಎಂಬ ಮಂತ್ರವನ್ನು ಹೇಳುತ್ತಾ ಶಿವ ಶಿವ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸೋ ಮನವೆ ಹರ ಹರ ಹರ ಹರ ಎಂದೊಮ್ಮೆ ಹರನಾಗಿ ಹರನ ಪೂಜಿಸೋ ಮನವೆ ಲಿಂಗವೇ ಲಿಂಗವೇ ಲಿಂಗವೇ ಎಂದೊಮ್ಮೆ ಕಪಿಲಸಿದ್ದ ಮಲ್ಲಿಕಾರ್ಜುನ ಪೂಜಿಸಿ ದಿಟ್ಟವಾಗು ಮನವೆ ಈ ಮಂತ್ರವನ್ನು ಗುರುಗಳು ನಿರುಪಾದೀಶ್ವರರಿಗೆ ಹೇಳುತ್ತಾ ಏಳುಮಗನೇ ಮನವರೆಲ್ಲ ಒಂದು ಕೀರ್ತಿ ಶಿಖರ ಹತ್ತಲು ಗುರು ನಿರುಪಾದೀಶ್ವರರಿಗೆ ಆಶಿರ್ವದಿಸುತ್ತಾನೆ.
ಏಕ ನಿಷ್ಠೆ ಗುರುವಾಗಿ ಬೆಳೆಯ ಬೇಕೆಂದು ಗುರುಗಳು ನಿರುಪಾದೀಶ್ವರನಿಗೆ ತಿಳಿಸುತ್ತಾ ಆಚಾರ ವಿಚಾರ ಅನ್ನುವಂತಹದ್ದು ಮಹತ್ವದ್ದಾಗಿದೆ ಆಚರಣೆ ಅನ್ನುವಂತಹದ್ದು ಭೂಮಿಯ ಮೇಲೆ ಉಳಿಯುತ್ತದೆ ಗುರುಲಿಂಗ ಜಂಗಮ, ವಿಭೂತಿ, ರುದ್ರಾಕ್ಷೀ ಪೂಜೆಗೆ ಸಾಧನೆಯಾಗಿದ್ದು ಗುರುವಿನಿಂದ ಎಲ್ಲವೂ ಗುರುವಿನಿಂದ ಪಡೆದುಕೊಳ್ಳಲು ತಪ್ಪಲಗಡ್ಡೆಯಲ್ಲಿ ಗುರು ಉಪದೇಶ ಪಡೆಯುತ್ತಾ ಸಾಗಿದಾಗ ಗುರುಗಳು ಲಿಂಗ ನೀಡುತ್ತಾರೆ ಲಿಂಗವೆಂಬುದು ಆನಂದ ಸಂತೋಷ ಕೊಡುತ್ತದೆ ಅಂಗದ ಮೇಲೆ ಲಿಂಗವಿದ್ದರೆ ಕೂಡಲ ಸಂಗಮನಾಥ ಲಿಂಗಾಯತ ಧರ್ಮಕ್ಕಾಗಿ ಜನೀವಾರವನ್ನು ಬಿತ್ತರಿಸಿದ ಬಸವಣ್ಣ ಅವರಂತೆ ನಿರುಪಾದೀಶ್ವರ ಶಿಷ್ಯನ ಆದರ್ಶತನವನ್ನು ನೋಡಿ ಗುರುಗಳು ಬಹಳೇ ನಂಬಿ ತಮ್ಮಲ್ಲಿಯ ವಿದ್ಯಾದಾನಕ್ಕೆ ಮುಂದಾಗುತ್ತಾರೆ.
ಕಾಮ, ಯೋಗವೇ ನರಕದ ಭಾಗಿಲವಾಗಿದ್ದು ಕಾರಣ ಜ್ಞಾನ ಸಂಪತ್ತನ್ನು ಪಡೆಯಲು ಅಕ್ಕ ಮಹಾದೇವಿ ಲಿಂಗಪೂಜೆಯಲ್ಲಿ ತೊಡಗಿದ್ದಳು ಶಿವ ಗುರು ಲಿಂಗ ಕೊಟ್ಟಿದ್ದಾನೆಂದು ಅರೀತು ಅಕ್ಕಮಹಾದೇವಿಯ ಮೇಲೆ ಕಾಮಾಪೇಕ್ಷೆ ಮಾಡಿದ ಕೌಸಿಕರಾಜಾ ಮುಂದಾಗಿ ನಿರ್ಮಲಶೆಟ್ಟಿ ಅವರ ಮನೆಗೆ ಹೋಗಿ ಅವರಿಗೆ ನಿಮ್ಮ ಮಗಳನ್ನು ಕೊಟ್ಟು ಲಗ್ನ ಮಾಡಿ ಎಂದು ಹೇಳಿದ ಕೌಸಿಕರಾಜಾ ಚಿನ್ನದ ಸೀರಿ ಎಲ್ಲಿಲ್ಲದ ಸಾಮಾನುಗಳನ್ನು ಕಳುಹಿಸಿ ಅಕ್ಕ ಮಹಾದೇವಿಯೊಂದಿಗೆ ಲಗ್ನ ಮಾಡಿಕೊಳ್ಳಲು ಅಪೇಕ್ಷೀಸಿದ್ದ ಕೌಸಿಕ ರಾಜನ ವಿಷಯ ಅರೀತ ಅಕ್ಕ ಮಹಾದೇವಿ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಆತನಿಗೆ ಕಂಡಿಶನ್‍ಗಳನ್ನು ಹಾಕುತ್ತಾಳೆ ಆಕೆಯ ಕಂಡಿಶನ್ ಹಾಕಿದಂತೆ ಮಾಡಲಾಗದ ಕೌಸಿಕರಾಜನ ಕಾಟಕ್ಕೆ ತೊಂದರೆಗೆ ಒಳಪಟ್ಟ ಅಕ್ಕಮಹಾದೇವಿ ಕೌಸಿಕ ರಾಜನ ಕುಚೇಷ್ಠಿತನವನ್ನು ಅರೀತ ಅಕ್ಕಮಹಾದೇವಿ ಸೀರೆ ಕಳೆದು ಕೂದಲದಿಂದ ಮೈಮುಚ್ಚಿಕೊಂಡು ಕಲ್ಯಾಣಕ್ಕೆ ತೆರಳುತ್ತಾಳೆ ಅಲ್ಲಮಪ್ರಭುವಿನ ಆಸ್ತಾನಕ್ಕೆ ತೆರಳಿದ ನಂತರ ರಾಯಮ್ಮಳು ಅಲ್ಲಿ ಹೇಳಿದಂತಹ ಅದ್ಭುತ್ ವಚನಗಳ ಮಾತುಗಳ ಕುರಿತು ತಿಳಿ ಹೇಳಿ ಕೌಸಿಕ ರಾಜನಿಗೆ ಮುಂದಾದ ಎಡರು ತೊಡರುಗಳ ಕುರಿತು ಶ್ರೀಗಳು ವಿವರಿಸಿದರು.
ಅಂಗವೇ ಸತಿ ಲಿಂಗವೇ ಪತಿ ಎಂಬುದನ್ನು ಅರ್ಥೈಸಿ ವರ್ತನೆಯಿಂದ ಪರಿವರ್ತನೆ ಮಾಡಿದ ಬಸವಣ್ಣನವರು ಜಗತ್ತನ್ನೇ ಬೆಳಗಿದರು ಸಕಾಲಕ್ಕೆ ವಚನಗಳನ್ನು ಬರೆದರಲ್ಲದೇ ಕೈಯಲ್ಲಿ ಲಿಂಗ ಹಿಡಿದು ಹೇಳುತ್ತಾರೆ ಸ್ವಧರ್ಮ ನಿಷ್ಠೆ ಕುರಿತು ಅರ್ಥೈಸುತ್ತಾರೆಂದು ಹೇಳಿದ ಶ್ರೀಗಳು ಗುಡ್ಡಾಪೂರ ದಾನಮ್ಮದೇವಿ ಕುರಿತು ಹಾಗೂ ಅಂಗದ ಮೇಲಿನ ಮಲಿನನ್ನು ತೊಳೆಯುವವರು ಕೋಟ್ಯಾನು ಕೋಟಿ ಜನರಿದ್ದಾರೆ ಆದರೆ ಮನಸ್ಸಿ ಮೈಲನ್ನು ತೊಳೆಯುವವರು ಅಣ್ಣ ಬಸವಣ್ಣನವರೆಂದು ಹೇಳಿದ ಶ್ರೀಗಳು ಬ್ರಹ್ಮಸ್ತ ಗ್ರಹಸ್ತು 12 ವರ್ಷ ಗುರುಸೇವೆ ಮಾಡಿದ ನಿರುಪಾದೀಶ್ವರ ಆಡಂಬರಕ್ಕೆ ಬೆನ್ನು ಹತ್ತದೇ ಗುರುಗಳು ತಿಳಿಸಿದಂತೆ ಆಚಾರಕ್ಕೆ ಬೆನ್ನು ಹತ್ತುತ್ತಾರೆಂದು ಶ್ರೀಗಳು ಹೇಳಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.