ಭೀಮನಗರ ಭವಾನಿ ಮಂದಿರದಲ್ಲಿ ಮಹಿಳಾ ದಿನಾಚರಣೆ
ಬೀದರ್:ಮಾ.19: ನಗರದ ಭೀಮನಗರ ಗಲ್ಲಿಯಲ್ಲಿರುವ ಜಗದಂಬಾ ಭವಾನಿ ಮಂದಿರದಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜರುಗಿತು.
ಗೀತಾ ಪರಿವಾರದಿಂದ ಆಯೋಜಿಸಲಾದ ಈ ಕಾರ್ಯಕ್ರಮವನ್ನು ಗೀತಾ ಪರಿವಾರದ ಉಪಾದ್ಯಕ್ಷರು ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ.ಕಲ್ಪನಾ ದೇಶಪಾಂಡೆ ಉದ್ಘಾಟಿಸಿ ಮಾತನಾಡಿದರು.
ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮಹಿಳೆಯರ ಹೋರಾಟ ವಿಶ್ವಮಾನ್ಯವಾಗಿದೆ. ಇತ್ತಿಚೀಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇಕಡಾ 33 ಪ್ರತಿಶತ ಮೀಸಲಾತಿ ನೀಡುವ ಮೂಲಕ ನಾರಿ ಸಮ್ಮಾನಕ್ಕೆ ಭಾಜನರಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಡಾ.ಪೂಜಾ ಸೂರ್ಯವಂಶಿ ಮಾತನಾಡಿ, ನಾರಿ ಶಕ್ತಿ ಎಲ್ಲ ಸಮುದಾಂiÀiಗಳ ದೊಡ್ಡ ಶಕ್ತಿಯಾಗಿದೆ. ಇಂದು ಓರ್ವ ಮಹಿಳೆ ಬರೀ ಮಕ್ಕಳನ್ನು ಹೇರುವ ಯಂತ್ರವಾಗಿರದೇ ಬಾನಂಗಳದಲ್ಲಿ ವಿಮಾನ ಹಾರಿಸುವ, ನೀಲಿ ಸಮುದ್ರದಲ್ಲಿ ಹಡಗು ನಡೆಸುವ ಮೂಲಕ ಈಜುವ, ಬೆಟ್ಟ ಗುಡ್ಡಗಳಲ್ಲಿ ರಸ್ತೆಗಳು ನಿರ್ಮಿಸಿ ಬೃಹತ್ತಾದ ವಾಹನಗಳನ್ನು ಚಲಾಯಿಸಿ ಪುರುಷರಿಗಿಂತ ಯಾವುದರಲ್ಲಿ ಕಮ್ಮಿ ಇಲ್ಲ ಎಂಬುದು ರುಜುವಾತು ಮಾಡಿದ್ದಾಳೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಗೀತಾ ಪರಿವಾರದ ಅಧ್ಯಕ್ಷೆ ಕಾಂತಾ ಮಾಲಾನಿ ಮಾತನಾಡಿ, ಮಹಿಳೆಯಾದ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂಬುದನ್ನು ಧೃಢಪಟ್ಟುಕೊಳ್ಳಬೇಕು. ಎಲ್ಲ ಪೂಣ್ಯ ಕಾರ್ಯಗಳು ಹಾಗೂ ಸಭೆ, ಸಮಾರಂಭಗಳು ಮಹಿಳೆಯರಿಲ್ಲದೇ ನಡೆಯುವುದಿಲ್ಲ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕು. ಆದರೆ ಇಂದು ವೈಜ್ಞಾನಿಕ ತಳಹದಿಗೆ ಜಾರಿದ ಮಹಿಳೆ ತನ್ನ ಪಾತಿವೃತೆ ಧರ್ಮವನ್ನು ತ್ಯಜಿಸಿ ಡಿವೊರ್ಸ್‍ಗೆ ಅರ್ಜಿ ಹಾಕುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭದಲ್ಲಿ ಓಣಿಯ ಮಕ್ಕಳು ನಾಟಕ ಹಾಗೂ ಫ್ಯಾಶನ್ ಶೊ ಪ್ರದರ್ಶನದಲ್ಲಿ ಭಾಗವಹಿಸಿದರು. ಇಂದಿರಾ ಪ್ರಾರ್ಥನೆ ಗೀತೆ ಹಾಡಿದರು. ಗೀತಾ ಪರಿವಾರದ ಕಾರ್ಯದರ್ಶಿ ತೃಪ್ತಿ ಬಜಾಜ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಶಿಕಲಾ ಶೇಂದ್ರೆ ಕಾರ್ಯಕ್ರಮ ನಿರೂಪಿಸಿ ವಂದನೆ ಸಲ್ಲಿಸಿದರು.