ಕಡ್ಡಾಯ ಮತದಾನಕ್ಕೆ ಎಲ್ಲರೂ ಶ್ರಮಿಸಲು ಕರೆ
ಸಂಜೆವಾಣಿ ವಾರ್ತೆ
ಸಂಡೂರು: ಮಾ:19 : ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,30,320ಮತದಾರರಿದ್ದು ಅದರಲ್ಲಿ 1,14,952 ಪುರುಷ , 115345 ಮಹಿಳಾ ಹಾಗೂ 25 ತೃತೀಯ ಲಿಂಗ ಮತದಾರರಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರ ಸಹಕಾರದಿಂದ ಶಾಂತಿಯುತವಾದಿ ಚುನಾವಣಾ ಹಬ್ಬವನ್ನು 07.05.2024 ರಂದು ಪ್ರತಿಯೊಬ್ಬರೂ ಮತಗಟ್ಟೆಗೆ ಮತ ಹಾಕುವ ಮೂಲಕ ಹಬ್ಬವನ್ನು ಆಚರಿಸೋಣ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್ ತಿಳಿಸಿದರು.
ಅವರು ಇಂದು ಪಟ್ಟಣದ ತಾಲೂಕು ಕಛೇರಿಯಲ್ಲಿ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಮತ್ತು ಪತ್ರಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನಾದ್ಯಂತ ಒಟ್ಟು 253 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಅದರಲ್ಲಿ 55 ಸೂಕ್ಷಮ ಮತಗಟ್ಟೆಗಳನ್ನು ಗುರುತಿಸಲಾಗಿದೆ, ನಗರ ವ್ಯಾಪ್ತಿಯಲ್ಲಿ 12, ಗ್ರಾಮೀಣ ವ್ಯಾಪ್ತಿಯಲ್ಲಿ 43 ಮತಗಟ್ಟೆಗಳು, ಒಟ್ಟು 20 ಸೆಕ್ಟರ್‍ಗಳಿದ್ದು ತಾಲೂಕಿನಾದ್ಯಂತ ಒಟ್ಟು 3237 ಅಂಗವಿಕಲ ಮತದಾರರಿದ್ದಾರೆ, 85+ ಮೇಲ್ಪಟ್ಟವರು ಒಟ್ಟು 1985 ಮತದಾರರಿದ್ದಾರೆ, ಅದರಲ್ಲಿ ಸೇವಾ ಮತದಾರರು 58( ಮಿಲಟರಿ, ಇತರೆ) ಇದ್ದಾರೆ, ಈ ಬಾರಿ ಪೋಸ್ಟಲ್ ಬ್ಯಾಲೆಟ್ ಜೊತೆಗೆ ನೇರ ಚುನಾವಣಾ ಪತ್ರ ಪಡೆದು ತಮ್ಮದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಯಾವುದೇ ಬೂತನಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡಲಾಗುತ್ತಿದೆ ಎಂದರು.
ತಾಲೂಕಿನಾದ್ಯಂತ ಒಟ್ಟು 4 ಚೆಕ್ ಪೋಸ್ಟಗಳನ್ನು ಸ್ಥಾಪಿಸಲಾಗಿದೆ, 2 ಅಂತರಾಜ್ಯ ಚೆಕ್ ಪೋಸ್ಟ್‍ಗಳು 1 ಜಿ.ಬಸಾಪುರ, 2 ಗಂಗಾಲಾಪುರ, ಅಂತರ ಜಿಲ್ಲಾ ಚೆಕ್ ಪೋಸ್ಟ್‍ನ್ನು ಮೋತಲಕುಂಟಾದಲ್ಲಿ ಸ್ಥಾಪಿಸಲಾಗಿದೆ, ಮತ್ತೊಂದು ದಿಕ್ಕಲದಿನ್ನಿ ಹಾಗೂ ಜಿಂದಾಲ್ ಏರ್‍ಪೋರ್ಟನಲ್ಲಿಯೂ ಸಹ ಸ್ಥಾಪಿಸಲಾಗಿದೆ ಒಟ್ಟು ಎಫ್.ಎಸ್.ಟಿ. 3 ತಂಡ, ಎಸ್.ಎಸ್.ಟಿ. 4 ತಂಡ, ವಿ.ವಿ.ಟಿ. 3 ತಂಡ ಹಾಗೂ ವಿ.ಎಸ್.ಟಿ. 3 ತಂಡಗಳು ಕ್ಷೇತ್ರದಾದ್ಯಂತ ಕಾರ್ಯನಿರ್ವಹಿಸಲಿವೆ, ಅದ್ದರಿಂದ ಯಾವುದೇ ರಾಜಕೀಯ ಪಕ್ಷವು ಚುನಾವಣಾ ಪ್ರಚಾರದಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸಬಾರದು ಮೊದಲೆ ಪರವಾನಿಗೆ ಪಡೆಯಬೇಕು, ಅತಿ ದೊಡ್ಡ ಪ್ರಚಾರ ಸಭೆಗೆ ನೇರ ಜಿಲ್ಲಾಧಿಕಾರಿ ( ಚುನಾವಣಾಧಿಕಾರಿ)ಗಳಿಂದ ಪರವಾನಿಗೆ ಪಡೆಯಬೇಕು, ಚುನಾವಣೆ ಪ್ರಚಾರವನ್ನು ಯಾವುದೇ ಧರ್ಮ, ಜಾತಿ, ಮತ, ಪಂಥದ ಅಡಿಯಲ್ಲಿ ಮತಯಾಚನೆ ಮಾಡಬಾರದು, ವೈಯಕ್ತಿಕ ನಿಂದನೆ, ವ್ಯಕ್ತಿ ನಿಂದನೆ ಮಾಡುವಂತಿಲ್ಲ, ತಮ್ಮ ಸಾಧನೆಗಳನ್ನು, ತಾವು ಮಾಡುವ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮತ ಯಾಚನೆ ಮಾಡಬೇಕು, ಮಕ್ಕಳನ್ನು ಪ್ರಚಾರ ಕಾರ್ಯದಲ್ಲಿ ಬಳಸುವಂತಿಲ್ಲ ಕಂಡು ಬಂದಲ್ಲಿ ಕ್ರಮವಹಿಸಲಾಗುವುದು, ಅಕ್ರಮವಾಗಿ ಯಾವುದೇ ರೀತಿಯ ಹಣ ಸಾಗಾಣಿಕೆ ಕಂಡುಬಂದಲ್ಲಿ ಕ್ರಮವಹಿಸಲಾಗುವುದು ಯಾರೂ ಸಹ 50 ಸಾವಿರಕ್ಕಿಂತ ಮೇಲ್ಪಟ್ಟು ಹಣ ಸಿಕ್ಕಲ್ಲಿ ಅದಕ್ಕೆ ಪೂರಕ ದಾಖಲೆ ಕಡ್ಡಾಯ ಇಲ್ಲವಾದಲ್ಲಿ ಶಿಸ್ತು ಕ್ರಮ, ಮದುವೆಗಳನ್ನು ಮಾಡಲು ಯಾವುದೇ ಅಡ್ಡಿ ಅತಂಕಗಳು ಇಲ್ಲ ಅದರೆ ಅಲ್ಲಿಯಾವುದೇ ಪಕ್ಷ ಅಥವಾ ವ್ಯಕ್ತಿ ಪ್ರಚಾರ ನಡೆಸುವಂತಿಲ್ಲ ಚುನಾವಣಾನೋಫೀಕೆಷನ್ ದಿನಾಂಕ: 12.04.2024 ರಂದು ಪ್ರಕಟ ನಾಮಪತ್ರ ಸಲ್ಲಿಸಲು 19.4.2024, ನಾಮಪತ್ರ ಪರಿಶೀಲನೆ 20.4.2024, ನಾಮಪತ್ರ ಹಿಂಪಡೆಯಲು 22.04.2024, ಮತದಾನ 07.05.2024ರಂದು ನಡೆಯಲಿದೆ ಚುನಾವಣೆಯ ಎಲ್ಲಾ ಕಾರ್ಯನಿರ್ವಹಣೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಪಡೆದುಕೊಳ್ಳಲಾಗಿದೆ, ಅಲ್ಲಿಯೇ ತರಬೇತಿ, ಮಾಸ್ಟರಿಂಗ್, ಡಿಮಾಸ್ಟರಿಂಗ್, ಸ್ಟಾಂಗ್ ರೂಂ ನಿರ್ಮಿಸಲಾಗಿದೆ ಶಾಂತಿ ಹಾಗೂ ಸಹಕಾರದಿಂದ ಹಬ್ಬವಾಗಿ ಚುನಾವಣೆಯ್ನನು ನಡೆಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ಅಧಿಕಾರಿ ಶಿವಕುಮಾರ್ ಹಾಗೂ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಸತೀಶ್.ಚಿತ್ರಿಕಿ, ಬಿ.ಜೆ.ಪಿ ಪಕ್ಷದಿಂದ ದರೋಜಿ ರಮೇಶ್, ಕೆ.ಅರ್.ಎಸ್. ಹೊನ್ನೂರಸ್ವಾಮಿ, ಇತರ ಪಕ್ಷಗಳ ಮುಖಂಡರು ಇದ್ದು ನಮಗೆ ಸರಿಯಾದ ಸಭೆಯ ಮಾಹಿತಿ ಇಲ್ಲ ನೇರ ಪೋನ್ ಮಾಡಿ ತಿಳಿಸಿ ಎಂದು ಚುನಾವಣಾಧಿಕಾರಿಗಳಿಗೆ ತಿಳಿಸಿದರು, ಅದಕ್ಕೆ ಅಧಿಕಾರಿಗಳು ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
One attachment • Scanned by Gmail