ಜೇವರ್ಗಿಯಲ್ಲಿ ಸೆಂಟ್ ಲೂಕ್ ಶಾಲೆಯ ಮಕ್ಕಳ ಬಿಳ್ಕೋಡುವ ಸಮಾರಂಭ
ಕಲಬುರಗಿ:ಮಾ.19: ಚೆಂಡು ನಾವು ಗೋಡೆಗೆ ಎಸೆದಾಗ ವೇಗವಾಗಿ ಮರಳಿ ತನ್ನ ಮೂಲ ಸ್ಥಾನಕ್ಕೆ ಬರುತ್ತದೆ. ಹಾಗೇ ವಿದ್ಯಾರ್ಥಿಗಳು ಚೆಂಡಿನಂತೆ ಹಿಂದೆ ಗುರು ಮುಂದೆ ಗುರಿ ಇರಿಸಿಕೊಂಡು, ತಮ್ಮ ವ್ಯಾಸಂಗ ಕಠಿಣ ಶ್ರಮದಿಂದ ಓದಿ ತಾವು ಆದರ್ಶ ವಿದ್ಯಾರ್ಥಿಗಳಗಾಗಿ, ಈ ಶಾಲೆಗೂ ತಮ್ಮ ತಂದೆ ತಾಯಿಗೂ ಕೀರ್ತಿ ತರಬೆಕಂದು ಸ್ಥಳಿಯ ವೈದ್ಯರಾದ ಡಾ|| ಮಲ್ಲಿಕಾರ್ಜುನ ಒಡೆಯರ ಹೇಳಿದ ಅವರು ಜೇವರ್ಗಿ ನಗರದ ಸೆಂಟ್ ಲೂಕ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಬೀಳ್ಕೋಡುವ ಸಮಾರಂಭ ಮುಖ್ಯ ಅತಿಥಿ ಸ್ಥಾನ ವಹಿಸಿಕೊಂಡು ಮುಂದು ವರೆಯುತ್ತಾ ಪ್ರಸ್ತುತ ದಿನಗಳಲ್ಲಿ ಸಂಸ್ಥೆಯ ಅಡಿಯಲ್ಲಿ ಶಾಲೆ ನಡೆಸುವುದು ತುಂಬ ಕಠಿಣ ವಾದದ್ದು, ಈ ಶಾಲೆಯ ಕಾರ್ಯದರ್ಶಿ ನಿವೃತ್ತ ಶಿಕ್ಷಕರಾದ ಆನಂದ ಭಾಸ್ಕರ್ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯ ಮೆಚ್ಚುವಂಥಹದ್ದು
ಇನ್ನೋರ್ವ ಶಿಕ್ಷಕರಾದ ಶಾಂತಿನಿಕೇತನ ಮುಖ್ಯಗುರುಗಳು ಶೇಖ ಮಹಿಬೂಬ ಸಾಬ ಅಣಬಿ ಮಾತನಾಡುತ್ತಾ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಮರೆಯಾಗುತ್ತಿದ್ದು ಇದನ್ನು ನಮಗೆ ಬಹಳ ಕಳವಳಕಾರಿಯಾಗಿ ಗೋಚರಿಸಿದೆ. ಅದಕ್ಕೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳುತ್ತಾ ಹಿಂದಿನ ಮಹಾನ ನಾಯಕರು ಕಠಿಣ ಪರಿಸ್ಥಿತಿಯಲ್ಲಿ ಅಧ್ಯಾಯನ ಮಾಡಿ ಉನ್ನತ ಸ್ಥಾನ ಏರಿದಾ ಸ್ವಾಮಿ ವೀವಿಕಾನಂದರು ಹಾಗೂ ಎ.ಪಿ.ಜೆ ಅಬ್ದುಲ ಕಲಂ , ಇವರನ್ನು ನೋಡಿ ತಮ್ಮ ವಿಧ್ಯಾಭ್ಯಾಸ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳಬೆಕೆಂದು ಹೇಳಿದರು
ವೇದಿಕೆಯಲ್ಲಿ ಪಾಸ್ಟರ್ ರಮೇಶ , ನಬಿ ವೈದ್ಯರು, ರಮೇಶ ಗುತ್ತೇದಾರ ಬಿರಾಳ(ಬಿ) ಪಾಲಕ ಪ್ರತಿನಿಧಿಗಳು ಭಾಗವಹಿಸಿದರು. ಈ ಶಾಲೆಯ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ನೇರವೆರಿತು ಶಾಲೆಯ ಮುಖ್ಯಗುರುಗಳು ನೀರೂಪಣೆ ಮಾಡಿದ್ದರು.