ಡಾ.ಪುನೀತ್ ರಾಜಕುಮಾರ್ ಜನ್ಮದಿನ ಶಿಕ್ಷಕರಿಗೆ ಸನ್ಮಾನ
ಸೇಡಂ, ಮಾ,19: ಕರ್ನಾಟಕ ರತ್ನ ಪವರ್ ಸ್ಟಾರ್ ದಿ. ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನದ ಪ್ರಯಕ್ತ ತಾಲೂಕಿನ ಬೆನಕನಹಳ್ಳಿ ಗ್ರಾಮದ ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಕಲವಾರ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ತಮ ಶಿಕ್ಷಣ ನೀಡಿ ಮಕ್ಕಳ ಸೇವೆ ಮಾಡುತ್ತಿರುವ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು. ಶಾಲಾ ಮಕ್ಕಳಿಗೆ ಸ್ವೀಟ್ ಊಟ ಹಾಗೂ ನೋಟ್ ಬುಕ್ ಪೆನ್ನು ವಿತರಣೆ ಮಾಡಿ ಯಾವುದೇ ತರಹದ ಕೇಕು ಕಟ್ ಮಾಡದೆ ದುಂದು ವೆಚ್ಚ ಮಾಡದೆ ಈಗಿನ ಯುವ ಜನತೆ ಒಂದು ಉತ್ತಮ ಸಂದೇಶ ಸಾರುವ ಮೂಲಕ ವಿಶೇಷವಾಗಿ ಸರಳವಾಗಿ ಆಚರಿಸಿಕೊಂಡರು. ಈ ವೇಳೆಯಲ್ಲಿ ಶಾಲಾ ಗುರುಗಳಾದ ರೇವಣ ಸಿದ್ದಪ್ಪ, ಸಂತೋಷ್ ನಾಗರಾಜ್ ಸಾಬಣ್ಣ ಗಂಗಾಧರ್ ಬಸವರಾಜ್ ವನಿತಾ ವೀಣಾ ನಿಲಗಂಗಮ್ಮ ಸುರೇಖ ಶಶಿಕಲಾ ಗೀತಾ ಗೌರಮ್ಮ ಸುಧಾ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರ ಚಂದ್ರಮ ಜೋಗಿ ಹಾಗೂ ಬಸ್ಸಯ ಸ್ವಾಮಿ ಸೂರ್ಯ ಕಾಂತ ಶಾಲಾ ಮಕ್ಕಳು ಹಾಗೂ ನಾಗರಾಜ್ ಹೊಸಮನಿ ವಿಠಲ್ ಬಸವರಾಜ್ ಮಲ್ಲಿನಾಥ ದಾನಯ್ಯ ಗುತ್ತೇದಾರ ಸಂತೋಷ್ ಪ್ರಕಾಶ ಮಾರುತಿ ಇನ್ನೂ ಅನೇಕ ಗ್ರಾಮದ ಹಿರಿಯರು ಯುವಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.