ದೇಶ ಸುತ್ತು , ಕೋಶ ಓದು ನಾಣ್ಣುಡಿಯು ಅರ್ಥಪೂರ್ಣವಾದುದು : ರಾಮಕೃಷ್ಣ ಮುನಿಗ್ಯಾಲ
ಬೀದರ:ಮಾ.19:ಕೇವಲ ಮೊಬೈಲ್ ಹಾಗೂ ಟಿವಿಯಲ್ಲಿ ಮುಳುಗದೆ, ಕೋಶ ಓದುವುದರ ಜೊತೆಗೆ ದೇಶ ಸುತ್ತಿದರೆ ಜ್ಞಾನಾರ್ಜನೆ ಹೆಚ್ಚಾ ಗುವುದು ಎಂದು ಹಿರಿಯ ಉದ್ಯಮಿ ರಾಮಕೃಷ್ಣ ಮುನಿಗ್ಯಾಲ್ ರವರು ಅಭಿಪ್ರಾಯ ಪಟ್ಟರು. ಅವರು ಬೀದರ್ ನ ಗುರುನಾನಕ್ ಕಾಲೋನಿಯಲ್ಲಿ ಬರೀದ್ ಶಾಹಿ ಉದ್ಯಾನದಲ್ಲಿರುವ ಹಿರಿಯರ ಯೋಗ ತಂಡದಿಂದ ಏರ್ಪಡಿಸ ಲಾದ, ಮತದಾನ ಜಾಗೃತಿ ಅಭಿಯಾನ ಹಾಗೂ ಜಾಥಾದಲ್ಲಿ ಮಾತನಾಡು ತ್ತಿದ್ದರು. ತೆಲಂಗಾಣ ರಾಜ್ಯದ ವಿವಿಧ ಸ್ಥಳಗಳಲ್ಲಿ ಮತದಾನ ಜಾಗೃತಿ, ಪರಿಸರ ಜಾಗೃತಿ ಹಾಗೂ ಅಂತ ರಾಷ್ಟ್ರೀಯ ಮಹಿಳಾ ದಿನೋತ್ಸವದ ಜಾಥಾವನ್ನು ಏರ್ಪಡಿಸಲಾಗಿತ್ತು. ಮುಂದುವರೆದು ಮಾತ ನಾಡಿ, ಯಾತ್ರೆಗಳನ್ನು ಮೇಲಿಂದ ಮೇಲೆ ಕೈಗೊ ಳ್ಳುವುದರಿಂದ ಮನುಶ್ಯನ ಜ್ಞಾನದಲ್ಲಿ ವೃದ್ಧಿಯಾಗುತ್ತದೆ ಎಂದರು. ಹಿರಿಯ ಗೃಹಿಣಿ ಯಾದ ವಿಜಯಲಕ್ಷ್ಮಿ ಗoಗಪ್ಪ ಸಾವಲೆಯವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ರವಾನೆ ಮಾಡಿ ದರು. ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, ವಿವಿಧ ಉದ್ದೇಶಗಳನ್ನು ಇಟ್ಟು ಕೊಂಡು ತೆಲಂಗಾಣ ರಾಜ್ಯದ ಅನೇಕ ಭಾಗ ಗಳಲ್ಲಿ ಜಾಗೃತಿ ಅಭಿಯಾನ ವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಲೇ ಯವರು ಎಲ್ಲ ರನ್ನು ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಟೀಲ್, ಅಶೋಕ್ ಶೀಲವಂತ, ವೀರಶೆಟ್ಟಿ,ಸಂಜು ಪಾಟೀಲ, ಸಂಜುಕುಮಾರ ಶೀಲವಂತ, ಬಸವರಾಜ ತೋರಣ, ರಮೇಶ ಕಪಲಾಪೂರ, ಡಾಕ್ಟರ್ ಪೂಜಾ ಸೀಲ ವಂತ, ಚಂದ್ರಶೇಖರ್ ದೇವಣಿ, ಗಂಗಾಧರ್ ಪಾಟೀಲ್, ರಾಮಚಂದ್ರ ಗಜರೆ, ಅರುಣಾ, ಪುಷ್ಪಾ, ವೀಣಾ, ವಿಜಯಲಕ್ಷ್ಮಿ, ಸುಲೋಚನಾ, ಸರೋಜಿನಿ ಪಾಟಿಲ್, ಭುವನೇಶ್ವರಿ, ಸಾಕ್ಷಿ, ಸುಲೋಚನಾ ಪಾಟೀಲ್, ಸುನೀತಾ, ಜ್ಯೋತಿ, ಸುನೀತಾ ಮುಂತಾದವರು ಹಾಜರಿದ್ದರು.