ಭಾರತದ ಅಭಿವೃದ್ಧಿಗೆ ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಿ.
ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.19; ಭಾರತ ಇನ್ನಷ್ಟು ಅಭಿವೃದ್ಧಿಯಾಗಲು ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿ ಎಂದು ನಮೋ ಬ್ರಿಗೇಡ್‍ನ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ಎಚ್‍ಪಿಎಸ್ ಕಾಲೇಜು ಮೈದಾನದಲ್ಲಿ ಸ್ಥಳೀಯ ನಮೋ ಬ್ರಿಗೇಡ್ ಸಂಘಟನೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾನುವಾರ ರಾತ್ರಿ ಮಾತನಾಡಿದರು.
ಕಾಂಗ್ರೆಸ್ ನವರು ಸ್ವಂತ ಪರಿವಾರ ಬೆಳೆಸಿದರೆ, ಮೋದಿ 148 ಕೋಟಿ ಪರಿವಾರ ಬೆಳೆಸಿದರು, ಭಾರತೀಯತೆಯನ್ನು ಜಗತ್ತಿಗೆ ಪರಿಚಯಿಸಿದ ವ್ಯಕ್ತಿ ಮೋದಿ ಎಂದು ಗುಣಗಾನ ಮಾಡಿದ ಅವರು ಒಂದೂ ರಜೆ ಇಲ್ಲದೆ 10 ವರ್ಷ ಕೆಲಸ ಮಾಡಿದ ಯಾರಾದರೂ ಇದ್ದರೆ ಅದು ಪ್ರಧಾನ ಸೇವಕ ಮೋದಿ ಮಾತ್ರ, ಜನರ ಮನಸ್ಸಿನ ಕದ ತಟ್ಟಲು ರೇಡಿಯೊ ಬಳಸಿ ಮನ್ ಕಿಬಾತ್ ನಡೆಸಿದ ಮೊದಲ ಪ್ರಧಾನಿ ಎಂದು ತಿಳಿಸಿದರು.
ಶ್ವೇತ ಭವನಕ್ಕೂ ಹೋದರೂ ನವರಾತ್ರಿ ಉಪವಾಸ ಬಿಡಲಿಲ್ಲ, ಪ್ರತಿ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸುತ್ತಾರೆ, ಪೌರ ಕಾರ್ಮಿಕರ ಕಾಲು ತೊಳೆದ ಇವರು ದೇಶದ ಆರ್ಥಿಕ ರಕ್ಷಣೆಗೆ ನೋಟು ಬ್ಯಾನ್ ಮಾಡಿದರು ಎಂದು ತಿಳಿಸಿದರು.
ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನವರು ಡಾ.ಬಿ.ಆರ್.ಅಂಬೇಡ್ಕರ ರವರಿಗೆ ಏಕೆ ಭಾರತ ರತ್ನ ನೀಡಲಿಲ್ಲ ಎಂದು ಪ್ರಶ್ನಿಸಿದರು. ಸಿಎಂ ಹಾಗೂ ಪಿಎಂ ಆಗಿ 22 ವರ್ಷದಲ್ಲಿ ಒಂದೇ ಒಂದು ಭ್ರμÁ್ಟಚಾರದ ಆರೋಪ ಹೊಂದಿಲ್ಲ, ಇವರದು ಅದ್ಬುತ ಬದುಕು ಎಂದರು.
ರಾಷ್ಟ್ರೀಯ ಹೆದ್ದಾರಿಗಳ, ರೈಲು ನಿಲ್ದಾಣ ಅಭಿವೃದ್ದಿ, 80 ಕೋಟಿ ಬಡವರಿಗೆ ಉಚಿತ ಧಾನ್ಯ ನೀಡುವಿಕೆ, ಅತ್ಯಂತ ಕಡಿಮೆ ಬೆಲೆ ಯಲ್ಲಿ ಭಾರತ ರೈಸ್ ವಿತರಣೆ, ಆಯುμÁ್ಮನ್ ಭಾರತ ಮೂಲಕ 50 ಕೋಟಿ ಜನರಿಗೆ ಉಚಿತ ಚಿಕಿತ್ಸೆ, ಪಿಎಂ ಆವಾಸ್ ಯೋಜನೆ.ಲ್ಲಿ 4 ಕೋಟಿ ಮನೆಗಳ ವಿತರಣೆ ಹೀಗೆ ಇನ್ನೂ ಅನೇಕ ಅಭಿವೃದ್ದಿ ಕಾರ್ಯ ಮಾಡಿದ್ದಾರೆ ಮೋದಿ ಎಂದು ಹೇಳಿದರು.
ಮೋದಿಯವರು ದೇಶವನ್ನು 100 ವರ್ಷ ಮುಂದಕ್ಕೆ ತೆಗೆದುಕೊಂಡು ಹೋಗಿದ್ದರೆ ಸಿದ್ದರಾಮಯ್ಯನವರು ರಾಜ್ಯವನ್ನು 25 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿದರು.
ಉಚಿತ ಗ್ಯಾರಂಟಿಗಳಿಗೆ ಜನರು ಓಟು ಹಾಕಿದರೆ ಏನು ಅನಾಹುತ ವಾಗುತ್ತದೆ ಎಂದು ಕಳೆದ 8-10 ತಿಂಗಳಿನಿಂದ ನಮೋಬ್ರಿಗೇಡ್ ನಿಂದ ಮೋದಿ ಪ್ರಧಾನಿ ಮಾಡಲು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಮೋಬ್ರಿಗೇಡ್ ಉತ್ತರ ಭಾರತ ಸಂಚಾಲಕ ವರ್ದಮಾನ್ ತ್ಯಾಗಿ ಪ್ರಸ್ಥಾವಿಕವಾಗಿ ಮಾತನಾಡಿದರು. ಡಾ.ಇಂದಿರೇಶ್ ತಟ್ಟಿ ಅದ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಮುಖಂಡರಾದ ಆರುಂಡಿ ನಾಗರಾಜ, ಡಾ.ಸುವರ್ಣ ನಾಗರಾಜ, ಜಿ.ನಂಜನಗೌಡ, ಎಚ್.ಎಂ.ಅಶೋಕ, ಪ್ರಭಾವತಿ ಅಶೋಕ, ಮಂಜುನಾಥ ಇಜಂತಕರ್, ಓಂಕಾರಗೌಡ, ಬಾಗಳಿ ಕೊಟ್ರೇಶಪ್ಪ, ಚೆನ್ನನಗೌಡ, ಪುರಸಭಾ ಸದಸ್ಯ ಕಿರಣ್ ಶ್ಯಾನಬಾಗ್, ಹಾಗೂ ನಮೋಬ್ರಿಗೇಡ್ ಸ್ಥಳೀಯ ಸದಸ್ಯರು ಇತರರು ಇದ್ದರು.