ಸಿಡಿಬಂಡಿ ಎಳೆಯುವ ಎತ್ತುಗಳ ಮೆರವಣಿಗೆ
ಸಂಜೆವಾಣಿ ವಾರ್ತೆ
ಸಿರುಗುಪ್ಪ: ಬಳ್ಳಾರಿಯಲ್ಲಿ ಇಂದು ಸಂಜೆ ನಡೆಯಲಿರುವ ಶ್ರೀ ಕನಕದುರ್ಗಮ್ಮ ಸಿಡಿಬಂಡಿ ಎಳೆಯುವ ಎತ್ತುಗಳ ಮೆರವಣಿಗೆಯು ಸಿರುಗುಪ್ಪ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ನಗರದಲ್ಲಿರುವ ಗಾಣಿಗಾ ಸಮಾಜದವರು ಬಳ್ಳಾರಿ ಕನಕದುರ್ಗಮ್ಮ ಪರಮಭಕ್ತರಾಗಿದ್ದು, ಗಾಣಿಗ ಸಮಾಜದವರು ಸಾಕಿ ಬೆಳೆಸಿದ ಒಂದು ಜೊತೆ ಎತ್ತುಗಳು ಬಳ್ಳಾರಿಯಲ್ಲಿ ದುರ್ಗಮ್ಮನ ಸಿಡಿಬಂಡಿ ಎಳೆಯಲಿದ್ದು, ಮಂಗಳವಾರ ನಡೆಯಲಿರುವ ಸಿಡಿಬಂಡಿ ಉತ್ಸವದ ಅಂಗವಾಗಿ ಗಾಣಿಗ ಸಮಾಜದವರು ಎತ್ತುಗಳನ್ನು ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆ ಸಂದರ್ಭದಲ್ಲಿ ಗಾಣಿಗ ಸಮಾಜದ ಪ್ರತಿಯೊಬ್ಬರು ಎತ್ತುಗಳಿಗೆ ಪೂಜೆ ಸಲ್ಲಿಸಿ ಕಾಯಿ ಕರ್ಪೂರ ಸಮರ್ಪಿಸಿದರು.
ಗಾಣಿಗ ಸಮಾಜದ ಮುಖಂಡರಾದ ಜಿ.ಆರ್.ಸತೀಶ್, ಜಯಪ್ರಕಾಶ್, ಕೊಂಡಯ್ಯ, ರಂಜಿತ್‌ಕುಮಾರ್, ತಿರುಪಾಟಿ ಸಂಜಯ್‌ಕುಮಾರ್, ಬಟ್ಟು ಶಿವ ಇನ್ನಿತರರು ಇದ್ದರು.