ಸರಸ್ವತಿ ಹುಲಸುರೆಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ: ಹರ್ಷ
ಬೀದರ್:ಮಾ.19: ಭಾಲ್ಕಿಯ ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಸರಸ್ವತಿ ಹುಲಸುರೆ ಅವರಿಗೆ ಇತ್ತಿಚೀಗೆ ರಾಜ್ಯ ಸರ್ಕಾರವು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕೊಡಮಾಡುವ ಈ ಸಾಲಿನ ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಲಾಖೆಯ ಹಿರಿಯ ಅಧಿಕಾರಿಗಳು ಈ ಪ್ರಶಸ್ತಿ ಪ್ರದಾನ ಮಾಡಿದರು.
2023-24ನೇ ಸಾಲಿಗೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ‘ಕಲಾ ಕ್ಷೇತ್ರದಲ್ಲಿನ ಸಾಧನೆ’ಗಾಗಿ ನೀಡುವ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಭರತ ನಾಟ್ಯ, ಕಥಕ್ ಒಡಿಸ್ಸಿಯಂತಹ ಶಾಸ್ತ್ರೀಯ ನೃತ್ಯ ಹಾಗೂ ಕಸೂತಿ, ಕುಂಬಾರಿಕೆ, ನೆಯ್ಗೆಯಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಸರಸ್ವತಿ ಅವರಿಗೆ ಈ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ನೀಡಿದಕ್ಕೆ ರಾಜ್ಯ ಪ್ರಶಸ್ತಿ ಪುರಸ್ಕøತರು ಹಾಗೂ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಕು.ಮಂಗಲಾ ಮರಕಲೆ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಸರಸ್ವತಿ ಅವರು ಕಳೆದ ಮೂರು ದಶಕಕ್ಕೂ ಅಧಿಕ ಕಾಲ ನೊಂದ ಮಹಿಳೆಯರಿಗೆ ಉದ್ಯೋಗ ನೀಡಿ, ಸ್ವಯಂ ಉದ್ಯೋಗದಲ್ಲಿ ತೊಡಗಲು ಯುವತಿಯರಿಗೆ ಪ್ರೋತ್ಸಾಹ ನೀಡಿದಲ್ಲದೇ ಕಲಿತ ಯುವತಿಯರಿಗೆ ಹಾಗೂ ವಿಧವೆಯರಿಗೆ ಸರಕಾರದಿಂದ ಅನೇಕ ಉದ್ಯೋಗ ತರಬೇತಿಗಳನ್ನು ಕೊಡಿಸಿರುತ್ತಾರೆ. ಇವರ ಅನುಪಮ ಸೇವೆಗೆ ಸಂದ ಪ್ರತಿಫಲವಾಗಿದೆ ಎಂಬುದು ಮಂಗಲಾ ಅವರ ಅಭಿಪ್ರಾಯ.