ಅನೈತಿಕ ಸಂಬಂಧ: ಜೋಡಿ ಕೊಲೆ
ವಿಜಯಪುರ,ಮಾ.19:ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಜಿಲ್ಲೆಯ ನಿಡಗುಂದಿ ತಾಲೂಕಿನ ಮಾರಡಗಿ ತಾಂಡಾ ಬಳಿ ಜೋಡಿ ಕೊಲೆ ನಡೆದಿದೆ.
ಕಲ್ಲಪ್ಪ ಕುಂಬಾರ (35) ಪಾವರ್ತಿ ತಳವಾರ (38) ಕೊಲೆಯಾದವರು.
ಮೃತರು ನಿಡಗುಂದಿ ತಾಲೂಕಿನ ಗಣಿ ಗ್ರಾಮದ ನಿವಾಸಿಗಳು.
ವಿವಾಹಿತೆ ಪಾರ್ವತಿ ಹಾಗೂ ಕಲ್ಲಪ್ಪ ಮಧ್ಯೆ ಅಕ್ರಮ ಸಂಬಂಧವಿತ್ತು.
ಮಾರಡಗಿ ತಾಂಡಾದ ಬಳಿ ಜಮೀನಿನಲ್ಲಿ ಪಾರ್ವತಿ ಹಾಗೂ ಕಲ್ಲಪ್ಪ ಒಟ್ಟಿಗೆ ಇದ್ದಾಗ ಯಾರೋ ಕೊಲೆಗಡುಕರು ಈ ಕೊಲೆ ಮಾಡಿ ಕೊಲೆಯ ಬಳಿಕ ಶವದ ಮೇಲೆ ಮುಳ್ಳುಕಂಟಿ ಹಾಕಿದ್ದಾರೆ.
ಪಾರ್ವತಿ ಮನೆಯ ಕಡೆಯವರು ಕೊಲೆ ಮಾಡಿರುವ ಶಂಕೆಯನ್ನು ಪೆÇಲೀಸರು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ನಿಡಗುಂದಿ ಪೆÇಲೀಸ್ ಠಾಣೆಯ ಸಿಪಿಐ ಶರಣಗೌಡ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ
ನಡೆಸಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕೊಲೆಗಾರರ ಪತ್ತೆಗೆ ಪೆÇಲೀಸರು ಜಾಲ ಬೀಸಿದ್ದಾರೆ.
ನಿಡಗುಂದಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸ್ಥಳದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.