ತಬಲಾ ಪರೀಕ್ಷೆಯಲ್ಲಿ ಉತ್ತೀರ್ಣ
ಹುಬ್ಬಳ್ಳಿ, ಮಾ19: ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲ ಪರಿಕ್ಷಾ ಸಮೀತಿಯವರು ನಡೆಸಿದ ತಬಲಾ ಪರಿಕ್ಷೆಯಲ್ಲಿ ಹುಬ್ಬಳ್ಳಿಯ ಡಿ.ಕೆ. ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಾದ ಸಂಪ್ರೀತಾ ಹಿರೇಮಠ, ರಕ್ಷಾ ನಾಕೋಡ ಉನ್ನತ ಶ್ರೇಣಿಯಲ್ಲಿ ಹಾಗೂ ರೋಶನ ಬದ್ದಿ, ನಿಜಬಾ ಮದರಕಾನವರ, ಪ್ರನೀತ ಭೂಶೆಟ್ಟಿ, ಆಯುಷ ದೇವನಕೊಂಡ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರ ಮಾರ್ಗದರ್ಶಕರು, ತಬಲಾ ಶಿಕ್ಷಕರಾದ ಮನುಕುಮಾರ ಹಿರೇಮಠ.