ಜೇವರಗಿ, ಅಫಜಲಪುರದಲ್ಲಿ ಡಿ.ಸಿ ಸಂಚಾರಲೋಕಸಭೆ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಪರಿಶೀಲನೆ
ಕಲಬುರಗಿ,ಮಾ.19: ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲೆಯ ಜೇವರಗಿ, ಅಫಜಲಪುರ ತಾಲೂಕಿಗೆ ಭೇಟಿ ನೀಡಿ ಚುನಾವಣೆ ಪೂರ್ವಸಿದ್ಧತೆ ಕಾರ್ಯ ಮತ್ತು ಕಟ್ಟುನಿಟ್ಟಿನ ಎಂ.ಸಿ.ಸಿ. ಜಾರಿ ಕುರಿತು ಪರಿಶೀಲಿಸಿದರು.
ಮೊದಲು ಜೇವರಗಿ ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಮಸ್ಟರಿಂಗ್, ಡೀ-ಮಸ್ಟರಿಂಗ್, ಸ್ಟ್ರಾಂಗ್ ರೂಮ್ ಪರಿಶೀಲಿಸಿದರು. ಸಿಂಗಲ್ ವಿಂಡೋ ಸಿಸ್ಟಮ್ ಸಹ ನೋಡಿದರು. ಚುನಾವಣೆ ಕಾರ್ಯಕ್ಕೆ ನೇಮಿಸಲಾದ ವಿವಿಧ ತಂಡಗಳ ರಚನೆ ಕುರಿತು ತಹಶೀಲ್ದಾರ ಮಲ್ಲಣ್ಣ ಯಲಗೋಡ ಅವರಿಂದ ಮಾಹಿತಿ ಪಡೆದರು.
ನಂತರ ತಾಲೂಕಿನ ಗಡಿ ಗ್ರಾಮ ಜೇರಟಗಿ ಚೆಕ್ ಪೆÇೀಸ್ಟ್ ಗೆ ಭೇಟಿ ನೀಡಿ ಚೆಕ್ ಪೆÇೀಸ್ಟ್ ತಪಾಸಣೆ ಕಾರ್ಯ ವೀಕ್ಷಿಸಿದರು. ಇದೇ ಗ್ರಾಮದಲ್ಲಿ ಗುರುತಿಸಲಾದ ಕ್ರಿಟಿಕಲ್ ಮತಗಟ್ಟೆಗೂ ಭೇಟಿ ನೀಡಿದರು. ನಂತರ ಬೇಲೂರ ಗ್ರಾಮದ ಮತಗಟ್ಟೆ, ಅಂಕಲಗಾದಲ್ಲಿರುವ ಗುರುತಿಸಲಾದ ವಲನರೇಬಲ್ ಮತಗಟ್ಟೆ ಸಹ ವೀಕ್ಷಣೆ ಮಾಡಿದರು.
ಜಿಲ್ಲಾಧಿಕಾರಿಗೆ ಎಸ್.ಪಿ. ಅಕ್ಷಯ್ ಹಾಕೈ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಡಿ.ವೈ.ಎಸ್.ಪಿ ಬಿಂದುರಾಣಿ, ಜೇವರ್ಗಿ ತಾಲೂಕಿನ ಎ.ಆರ್.ಓ ಕೃಷ್ಣಾ ಸಾತ್ ನೀಡಿದರು.
ಜೇವರಗಿ ತಾಲೂಕು ಪ್ರವಾಸ ಮುಗಿಸಿದ ನಂತರ ಜಿಲ್ಲಾಧಿಕಾರಿಗಳು ಅಫಜಲಪುರ ತಾಲೂಕಿನ ಗಾಣಗಾಪುರ ಗ್ರಾಮದಲ್ಲಿನ ಮತಗಟ್ಟೆ, ಚೌಡಾಪೂರ ಚೆಕ್ ಪೆÇೀಸ್ಟ್, ಮದರಾ ಬಿ. ಗ್ರಾಮದಲ್ಲಿನ ವಲನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆ ಸಂ.93ಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ ಸಂಜೀವಕುಮಾರ ದಾಸರ್ ಇದ್ದರು.