5ನೇ ವಾರ್ಷಿಕ ಜಾತ್ರಾ ಮಹೋತ್ಸವ
ಮುನವಳ್ಳಿ,ಮಾ19: ಯಕ್ಕೇರಿ ಶ್ರೀ ವರವಿ ಕನಕ ಮಹಾಲಕ್ಷ್ಮೀದೇವಿ ದೇವಸ್ಥಾನದ 5ನೇ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ 1ನೇ ವರ್ಷದ ಪುನಃ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಮಾ.18 ರಿಂದ ಪ್ರಾರಂಭವಾಗಿದೆ
ದಿವ್ಯ ಸಾನಿಧ್ಯ ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು, ನವಲಗುಂದದ ಶ್ರೀ ವೀರೇಂದ್ರ ಶ್ರೀಗಳು, ಕುಷ್ಠಗಿ ದುರ್ಗಾಪರಮೇಶ್ವರಿ ಆಶ್ರಮದ ಶ್ರೀ ಸದಾನಂದ ಮಹಾರಾಜರು, ಗುರ್ಲಹೊಸೂರ ಸವದತ್ತಿಯ ಶ್ರೀ ಪ್ರಸನ್ನ ಸುಂದರೇಶ ದಿಕ್ಷೀತರು, ಗೊರನಕೊಳ್ಳದ ಶ್ರೀ ಶಿವಾನಂದ ಶ್ರೀಗಳು, ಕೇರಳ ವೈಧಿಕ ಶಾಸ್ತ್ರಿ ಶ್ರೀ ಪ್ರಮೋಧ ಶಂಕರ ಜ್ಯೋತಿಷಿಗಳ ಸಾನಿಧ್ಯದಲ್ಲಿ ಹೋಮ ಹಾಗೂ ಪೂಜಾ ಕೈಂಕರ್ಯ ಜರುಗುವದು.
ಇಂದು ಶ್ರೀ ಗಣಪತಿ ಮಹಾಪೂಜೆ, ನವಗ್ರಹ ಹೋಮ, ಶ್ರೀ ಮಹಾವಿಷ್ಣುನವಕ ಪ್ರಧಾನ ಕಲಾಹೋಮ ಶ್ರೀ ಕನಕ ಮಹಾಲಕ್ಷ್ಮೀ ನವಕ ಪ್ರಧಾನ ಕಲಾಹೋಮ ಪುರ್ಣಾಹುತಿ, ಕಳಶಾಭೀಷೇಕ, ನೈವೇದ್ಯ ಮಹಾಮಂಗಳಾರತಿ ಮಹಾಅನ್ನಸಂತರ್ಪಣೆ, ಪ್ರಸಾದ ವಿತರಣೆ,
ದಿ. 20 ಶ್ರೀ ಕನಕ ಮಹಾಕ್ಷ್ಮೀ ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆ, ಅಷ್ಟೋತರ ನಾಮಪೂಜೆ, ಹಣ್ಣುಕಾಯಿ, ಮುತೈದೆಯರಿಂದ ಉಡಿ ಸಮರ್ಪಣೆ, ಮಹಾಮಂಗಳಾರತಿ, ಬಲಿಹರಣ, ಮಹಾಅನ್ನಸಂತರ್ಪಣೆ, ಪ್ರಸಾದ ವಿತರಣೆ ಬಲಿಹರಣ, ಪ್ರಾರ್ಥನೆ ಜರುಗುವದು ಎಂದು ಅರುಣ ಸೂರ್ಯವಂಶಿ ಪ್ರಕಟಣೆಯಲ್ಲಿ ತಿಳಿಸಿರುವರು.