ಅದ್ಧೂರಿ ವೀರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
ಆನೇಕಲ್, ಮಾ.೧೯:ಗೋಪಸಂದ್ರ ಗೇಟ್ ಬಳಿಯಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ೫ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಸಮ್ಮಖದಲ್ಲಿ ಶ್ರದ್ದಾ ಭಕ್ತಿಯಿಂದ ನೆರವೇರಿತು.
ಇನ್ನು ಎತ್ತುಗಳ ಮೆರವಣಿಗೆಯೊಂದಿಗೆ ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವು ಬಯಲು ಬಸವೇಶ್ವರ ಸ್ವಾಮಿ ದೇವಾಲಯದವರೆಗೆ ಸಾಗಿದ ದೃಶ್ಯ ಕಂಡು ಬಂತು. ವಿಶೇಷವಾಗಿ ಹೆಣ್ಣು ಮಕ್ಕಳೇ ರಥವನ್ನು ಕೈಯಿಂದ ಎಳೆದ ದೃಶ್ಯ ಕಂಡು ಬಂತು.
ಇನ್ನು ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಅಂಗವಾಗಿ ಸ್ವಾಮಿಗೆ ಹಾಗೂ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು ಹಾಗೆಯೇ ಪಲ್ಲಕ್ಕಿ ಉತ್ಸವ, ಅನ್ನದಾಸೋಹ, ಅರವಂಟಿಕೆ ಕಾರ್ಯಕ್ರಮ ಹಾಗೂ ವಾದ್ಯಗೋಷ್ಠಿ ಸೇರಿದಂತೆ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶಾಸ್ತೋಸ್ತವಾಗಿ ನೆರವೇರಿತು. ಇನ್ನು ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಮತ್ತು ಶ್ರೀ ವೀರ ಆಂಜನೇಯ ಸ್ವಾಮಿಯ ದೇವಾಲಯದ ಭಕ್ತ ಮಂಡಳಿಯವರು ಮತ್ತು ಗ್ರಾಮಸ್ಥರು ಬಾಗವಹಿಸಿದ್ದರು.