ಸಿದ್ಧಾಂತ ಶಿಖಾಮಣಿ ವಿಚಾರ ಸಂಕಿರಣ
ವಿಜಯಪುರ .ಮಾ೧೯:ಶ್ರೀ ಸಿದ್ಧಾಂತ ಶಿಖಾಮಣಿ ಪುಸ್ತಕದ ಬಗ್ಗೆ ಉಪನ್ಯಾಸ ನೀಡುತ್ತಾ ಸಿದ್ಧಾಂತ ಶಿಖಾಮಣಿ ೧೩-೧೪ನೇ ಶತಮಾನದ ಸಂಸ್ಕೃತ ಭಾಷೆಯ ಕಾಲ್ಪನಿಕ ಕಥೆಯ ಪುಸ್ತಕವೆಂದು ತಿಳಿಯ ಪಡಿಸುತ್ತಾ ಈ ಸಿದ್ಧಾಂತವು ಮೊಟ್ಟಮೊದಲು ಶಿವನು ಪಾರ್ವತಿ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದರು ಎಂದು ಬೆಂಗಳೂರಿನ ಶರಣಿ ಆರ್ ಸುಮತಿ ದೇವಿ ತಿಳಿಸಿದರು.
ಅವರು ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ಪ್ರಸಾದ ನಿಲಯದ ಆವರಣದಲ್ಲಿ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ಸೇವಾ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಿದ್ದ ೩೪೯ ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಪುಸ್ತಕವನ್ನು ೧೦೦೮ ಕಾಶಿ ಜಗದ್ಗುರು ಶ್ರೀ ಚಂದ್ರಶೇಖರ ಸ್ವಾಮಿ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೆ ಅಭ್ಯಾಸವಾಗುವಂತೆ ಈ ಪುಸ್ತಕದಲ್ಲಿ ರೇಣುಕ ಗೀತೆ ಮತ್ತು ರೇಣುಕಾಗಸ್ತೃ ಎಂಬ ಗ್ರಂಥವನ್ನು ಕರೆಯಲ್ಪಡುತ್ತಿದ್ದರು. ೧೯೯೮ರಲ್ಲಿ ಇತಿಹಾಸಗಾರ ಬರಹಗಾರರಾದ ಡಾ ಎಂ ಚಿದಾನಂದಮೂರ್ತಿ ಸಂಶೋಧನೆ ನಡೆಸಿದರು ಈ ಗ್ರಂಥವು ರಾಮಾಯಣದ ಪೂರ್ವದಲ್ಲಿಯೇ ರಚನೆಯಾಗಿದೆ ಎಂದು ಸಂಶೋಧನಾಗಾರರಾಗಿ ಅಭಿಪ್ರಾಯಪಡೆಯುತ್ತಾ ಮೂರು ಯುಗದಲ್ಲೂ ಸಿದ್ಧಾಂತ ಶಿಖಾಮಣಿ ಧರ್ಮ ಪ್ರಚಾರಕವಾಗಿತ್ತೆಂದು ತಿಳಿಸಿದರು.
ಸುಷ್ಮಾ ನಂದನ್ ರವರು ಮಾತನಾಡಿ, ಪಟ್ಟಣದ ನಮ್ಮ ತಾತನವರಾದ ಕೀರ್ತಿ ಶೇಷ ಶ್ರೀ ಶರಣ ಆರ್ ರಾಜಶೇಖರಯ್ಯ ರವರು ಅಲಂಕಾರ ಚತುರರಾಗಿದ್ದು, ವಿವಿಧ ರೀತಿಯ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸುತ್ತಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ರಂಗನಾಯಕಿ ಚಲನಚಿತ್ರದಲ್ಲಿ ಮುತ್ತಿನ ಪಲ್ಲಕ್ಕಿಯನ್ನು ನಿರ್ಮಿಸಿ ಕೊಟ್ಟ ಪ್ರಸಂಗವಿದ್ದು, ಶ್ರೀ ಚನ್ನಕೇಶವ ಬ್ರಹ್ಮರಥೋತ್ಸವ ರಥ ಮತ್ತು ಶ್ರೀ ರುದ್ರದೇವರ ಆರು ಕಲ್ಲುಗಾಲಿನ ಚಕ್ರದ ಬ್ರಹ್ಮರಥೋತ್ಸವಕ್ಕೆ ವಿನ್ಯಾಸ ನೀಡಿದರೆಂದು ತಿಳಿಸಿದರು.
ನಮ್ಮ ಪೂರ್ವಜರಾದ ರಾಮಬಸಪ್ಪ ಶಾಸ್ತ್ರಿಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹರಿಕಥೆ ಮಾಡಿ ಉತ್ತಮ ಹೆಸರನ್ನು ಪಡೆದು ಮೈಸೂರು ಮಹಾರಾಜರದಿಂದ ಚಿನ್ನದ ಪದಕವನ್ನು ಪಡೆದತಹವರುಗಳನ್ನು ಕಂಡ ಪಟ್ಟಣ ವಿಜಯಪುರವಾಗಿತ್ತೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಜಾತ ಜಯ ಕುಮಾರ್ ಮತ್ತು ಶೋಭಾ ಜಯಂತ್ ಕುಮಾರ್ ಮಾತೃಶ್ರೀರಾದಂತ ಕೀರ್ತಿಶೇಷ ವಿಶಾಲಾಕ್ಷಮ್ಮ ನಂಜುಂಡಪ್ಪನವರ ಸ್ಮರಣಾರ್ಥವಾಗಿ ೫೦,೦೦೦ಗಳ ನಿಶ್ಚಿತ ಠೇವಣಿಯಲ್ಲಿ ಬರುವ ಬಡ್ಡಿ ಹಣದಲ್ಲಿ ಕಡು ಬಡವರಿಗೆ ಆರ್ಥಿಕ ಸಹಾಯ ನೀಡಬೇಕೆಂಬ ಅವರ ಮಹಾದಾಸೆಯಂತೆ ಬಳಗದ ಬಸವರಾಜು ಮತ್ತು ಅನುಸೂಯಮ್ಮ ಪುಟ್ಟರಾಜು ರವರಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸುಮತಿ ದೇವಿ ರವರು ಹಾಲಿ ಅಧ್ಯಕ್ಷರಾದ ಸಿ ಬಸಪ್ಪ ನಿಯೋಜಿತ ಅಧ್ಯಕ್ಷರಾದ ಅನಿಲ್ ಕುಮಾರ್ ಕುಮಾರ್ ಕಾರ್ಯದರ್ಶಿಗಳಾದ ಮ ಸುರೇಶ್ ಬಾಬು ರವರನ್ನು ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಟ್ರಸ್ಟ್ ಅಧ್ಯಕ್ಷರಾದ ಸಿ ಬಸಪ್ಪ ವಹಿಸಿದ್ದರು.ರಾಷ್ಟ್ರೀಯ ಬಸವದಳದ ಪದಾಧಿಕಾರಿಗಳಾದ ಮ.ಜಯದೇವ್, ಬಳಗದ ಉಪಾಧ್ಯಕ್ಷ ರಾದ ಅಂಬಾ ಭವಾನಿ, ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಸ್ವರ್ಣಗೌರಿ ಮಹಾದೇವ್, ಮಹಂತಿನ ಮಠ ಧರ್ಮ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿ ಪ್ರಭುದೇವ್, ನಗರ್ತ ಮಹಿಳಾ ಉಪಾಧ್ಯಕ್ಷರಾದ ಸಿ. ಭಾರತಿ, ರಾಧಾ ಮನೋಹರ್, ಮೀನಾ ಸುರೇಶ್ ಬಾಬು, ವಿಮಲಾಂಭ ಅನಿಲ್ ಕುಮಾರ್, ಹಾಗೂ ಅರಿವಿನ ಮನೆಯ ಅಕ್ಕಂದಿರು ವಚನಗಳನ್ನು ಹಾಡಿದ್ದು, ಇತರೆ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.