ಮಹಿಳಾ ಸಬಲೀಕರಣ ಕೇವಲ ಭ್ರಮೆ: ಪೆÇ್ರ.ಕಾವಲಮ್ಮ ಬೇಸರ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.19:- ಆಧುನಿಕ ಯುಗದಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು, ಮಹಿಳಾ ಸಬಲೀಕರಣವಾಗಿ ಎನ್ನುವುದು ಕೇವಲ ಭ್ರಮೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಪೆÇ್ರ.ಆರ್.ಕಾವಲಮ್ಮ ತಿಳಿಸಿದರು.
ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವತಿಯಿಂದ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣ ಅನ್ನುವುದೇ ಒಂದು ರಾಜಕಾರಣ. ಯಾವ ವರ್ಗದ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಎಂಬ ಪ್ರಶ್ನೆ ಕಾಡುತ್ತಾದೆ. ಅಂಚಿನಲ್ಲಿರುವ ಮಹಿಳೆಯರನ್ನು ಸಬಲೀಕರಣಗೊಳಿಸುವ ಕೆಲಸ ಯಾರಿಂದಲೂ ನಡೆಯುತ್ತಿಲ್ಲ. ಮಹಿಳಾ ಅಭಿವೃದ್ಧಿ, ಮಹಿಳಾ ಸಬಲೀಕರಣದ ಮಾತುಗಳನ್ನು ನಾವು ಗ್ರಹಿಸಿಕೊಂಡಿರುವ ರೀತಿಗೂ, ವಾಸ್ತವದ ಅನುಭವಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಅಸ್ಮಿತೆಯನ್ನು ತಾವೇ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಪುರುಷರ ಬಾಯಿಂದ ಬರುವ ಸ್ತ್ರೀ ಸ್ವಾತಂತ್ಯದ ಮಾತುಗಳು ನೆರೆ ಹೊರೆಯ ಹೆಣ್ಣು ಮಕ್ಕಳಿಗೆ ಅನ್ವಯಿಸುವಂತೆ ಇರುತ್ತವೆ. ಆದರೆ, ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಎಲ್ಲಾ ಸಂದರ್ಭದಲ್ಲಿಯೂ ನಿಯಂತ್ರಿಸುತ್ತಲೇ ಇರುತ್ತಾರೆ. ಅಂದರೆ ಒಟ್ಟಾರೆಯಾಗಿ ಹೆಣ್ಣು ಅವರವರ ಅನುಕೂಲಕ್ಕೆ ಬಳಸಿಕೊಳ್ಳುವ ವಿಷಯ ವಸ್ತುವಾಗಿದ್ದಾಳೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸ್ವಾತಂತ್ರ?ಯ ಮತ್ತು ಆಯ್ಕೆಯ ಬಗ್ಗೆ ಸ್ಪಷ್ಟತೆ ಕಂಡುಕೊಳ್ಳಬೇಕಿದೆ. ಮಹಿಳೆಯರು ಯಾರೋ ನಮ್ಮನ್ನು ಉದ್ಧಾರ ಮಾಡುತ್ತಾರೆ ಎಂದು ಭಾವಿಸಿಕೊಳ್ಳಬಾರದು. ಮಹಿಳೆಯರ ಸಬಲೀಕರಣ ಮಹಿಳೆಯರಿಂದ ಮಾತ್ರ ಸಾಧ್ಯ. ಆದ್ದರಿಂದ ಹೆಣ್ಣು ಮಕ್ಕಳು ಸರ್ಕಾರದಿಂದ ಕೊಡುವ ಸೌಲಭ್ಯ ಬಳಸಿಕೊಂಡು ತಮ್ಮನ್ನು ತಾವೇ ಸಬಲೀಕರಣಗೊಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಂಡಸರು ಯಾವಾಗಲೂ ದ್ವಂದ್ವದಲ್ಲಿ ಇರುತ್ತಾರೆ. ಅಧಿಕಾರ ಸಿಗುವವರೆಗೆ ಭೂಮಿಯನ್ನು ತಾಯಿ ಎಂದು ಭಾವಿಸಿಕೊಳ್ಳುತ್ತಾರೆ. ಅಧಿಕಾರ ಸಿಕ್ಕ ತಕ್ಷಣ ಭೂಮಿಗೆ ಗಂಡಂದಿರಂತೆ ವರ್ತಿಸುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆ ಮತ್ತು ಸನಾತನ ಧರ್ಮ ಮೂರು ವರ್ಗದ ಮಹಿಳೆಯರನ್ನು ಸೃಷ್ಠಿಸಿದೆ. ಮಹಿಳೆಗೆ ದೇವತೆಯ ರೂಪಕೊಟ್ಟು ಭಾವಚಿತ್ರವನ್ನು ಗೋಡೆಗೆ ಮೊಳೆ ಹೊಡೆದು ನೇತುಹಾಕಿದ್ದಾರೆ. ಬಹುತೇಕ ಮಹಿಳೆಯರನ್ನು ಪತಿಭಕ್ತೆಯಾಗಿ ಪರಿವರ್ತಿಸಿದ್ದಾರೆ. ಪ್ರಶ್ನೆ ಮಾಡುವ ಮಹಿಳೆಯರನ್ನು ರಾಕ್ಷಸಿ ಪಟ್ಟಕಟ್ಟಿ ಅಪಮಾನಿಸಲಾಗಿದೆ. ಹೆಣ್ಣನ್ನು ಪೂಜಿಸಿದರೆ ಅಲ್ಲಿ ದೇವರು ನೆಲೆಸುತ್ತಾನೆ ಎಂದು ಹೇಳುತ್ತಲೇ ಮಹಿಳೆಯರನ್ನು ವ್ಯವಸ್ಥಿತವಾಗಿ ತುಳಿಯವ ಸಂಚನ್ನು ಸನಾತನಿಗಳು ನಡೆಸಿಕೊಂಡು ಬಂದಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ನಾಗೇಶ್ ವಿ.ಬೆಟ್ಟಕೋಟೆ, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಕೃಪಾ ಫಡ್ಕೆ, ಅಧಿಕ ಪ್ರಭಾರ ಹಣಕಾಸು ಅಧಿಕಾರಿ ರೇಖಾ ಉಪಸ್ಥಿತರಿದ್ದರು.