ಶ್ರೀ ಕಾಡುಬಸಪ್ಪ ದೇವಸ್ಥಾನದ ಗೋಪುರ ಜೀರ್ಣೋದ್ಧಾರ ಬಸವಣ್ಣ ಪ್ರತಿಷ್ಠಾಪನೆ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಮಾ.19:- 300 ವರ್ಷಗಳ ಇತಿಹಾಸ ಇರುವ ಶ್ರೀ ಕಾಡುಬಸಪ್ಪ ದೇವಸ್ಥಾನದ ಗೋಪುರ ಜೀರ್ಣೋದ್ಧಾರ ಬಸವಣ್ಣ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ ತಾಲೂಕಿನ ಮಳಲಿ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಿತು.
ಮಳಲಿ ಗ್ರಾಮದಲ್ಲಿ ಶ್ರೀ ಕಾಡುಬಸಪ್ಪ ದೇವಸ್ಥಾನದ ಗೋಪುರ ಜೀರ್ಣೋದ್ಧಾರ ಬಸವಣ್ಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ದೊಡ್ಡ ಸ್ವಾಮಿಗೌಡ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು ಹಲವು ವರ್ಷಗಳ ಹಿಂದೆ ಕಲ್ಲಿನ ಆಕಾರದಲ್ಲಿ ಬಸವಣ್ಣನ ಪ್ರತಿರೂಪ ಜನರಿಗೆ ಗೋಚಾರವಾಗಿದ್ದು ಆ ಬಸವಣ್ಣನ ಮೂರ್ತಿಯನ್ನು ತಾತಾ ಮುತ್ತಾತರ ಕಾಲದಿಂದಲೂ ಪೂಜಿಸಿಕೊಂಡು ಜನರು ತಮ್ಮ ಇಷ್ಟಾರ್ಥ ಪೂಜೆಯನ್ನು ಸಲ್ಲಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಾಗಾಗಿ ಈ ದೇವಸ್ಥಾನದ ಅಭಿವೃದ್ಧಿಗೆ ಮಳಲಿ ಗ್ರಾಮದ ಎಲ್ಲಾ ಸಮಾಜದ ಮುಖಂಡರನ್ನು ಒಳಗೊಂಡಂತೆ ದೇವಸ್ಥಾನ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮುಂದಾಗಿದ್ದು ತುಂಬ ಸಂತೋಷದ ವಿಷಯ ಎಂದರು.
ಗ್ರಾಮದ ಹಿರಿಯ ಮುಖಂಡ ವೀರೇಂದ್ರ ಮಾತನಾಡಿ ಹಲವು ದಿನಗಳಿಂದ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು ಸುಂದರವಾಗಿ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಶನಿವಾರ ಭಾನುವಾರ ಮತ್ತು ಸೋಮವಾರದ ತನಕ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿದರು ಸೋಮವಾರ ಬೆಳಿಗ್ಗೆ ಗೋಪುರ ಉದ್ಘಾಟನೆ ಮತ್ತು ಬಸವಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಸೇರದಂತೆ ವಿವಿಧ ಪೂಜಾ ಕ ನಡೆದವು. ಎಂದು ತಿಳಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ದೇವರ ದರ್ಶನವನ್ನು ಪಡೆದರು ಮಳಲಿ ಗ್ರಾಮಸ್ಥರಿಂದ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿದರು ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಬಂದಂತ ಭಕ್ತಾದಿಗಳು ಬಸವಣ್ಣನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಗ್ರಾಮದ ಬೀರೇಶ್ವರ ದೇವಸ್ಥಾನ ಇರುವ ಕೆರೆಯಿಂದ ನೂರೊಂದು ಮಹಿಳೆಯರು ಕಳಸ ವತ್ತು ವೀರಗಾಸೆ ಡೊಳ್ಳು ಕುಣಿತ ಮಂಗಳವಾದ್ಯ ಸಿರಿದಂತೆ ಕಲಾ ತಂಡಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕಾಡುಬಸವೇಶ್ವರ ನನ್ನ ಮೆರವಣಿಗೆ ಮಾಡಲಾಗಿತ್ತು ಪ್ರತಿ ಕುಟುಂಬದಲ್ಲೂ ಬಸವೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.