ಕೀರೆಪಾತಿಯಲ್ಲಿ ಶಿಲುಬೆ ಹಾದಿ ಆಚರಣೆ
ಸಂಜೆವಾಣಿ ವಾರ್ತೆ
ಹನೂರು ಮಾ 19 :- ತಾಲ್ಲೂಕಿನ ಸುಳ್ವಾಡಿ ಸಮೀಪ ಇರುವ ಕೀರೆಪಾತಿ ಗ್ರಾಮದಲ್ಲಿ ಯೇಸು ಕ್ರೈಸ್ತರ ಶಿಲುಬೆ ಹಾದಿ ಅಲ್ಲಿರುವ ಬೆಟ್ಟ-ಹತ್ತುವ ಮೂಲಕ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ಸುಳ್ವಾಡಿ ಧರ್ಮ ಕೇಂದ್ರದ ಗುರುಗಳಾದ ಫಾ ಟೆನ್ನಿ ಕುರಿಯನ್ ಹಾಗೂ ಹಲವಾರು ಕ್ರೈಸ್ತ ಭಕ್ತಾದಿಗಳು ಹಾಜರಿದ್ದರು.ಕ್ರಿಶ್ಚಿಯನ್ ಧರ್ಮದ ಜನರು 40 ದಿನಗಳ ಕಾಲ ಉಪವಾಸ ಮಾಡಿದರೆ, ಕೆಲವರು ಶುಕ್ರವಾರ ಮಾತ್ರ ಉಪವಾಸ ಮಾಡುತ್ತಾರೆ, ಇದನ್ನು ಲೆಂಟ್ ಎಂದು ಕರೆಯಲಾಗುತ್ತದೆ. ಈ ದಿನದಂದು, ಜನರು ಚರ್ಚ್‍ಗಳು ಮತ್ತು ಮನೆಗಳ ಅಲಂಕಾರ ವಸ್ತುಗಳನ್ನು ಬಟ್ಟೆಯಿಂದ ಮುಚ್ಚುತ್ತಾರೆ ಅಲ್ಲದೆ, ಅವರ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸುತ್ತಾರೆ.ಈ ದಿನಗಳಲ್ಲಿ, ಜನರು ಎಲ್ಲರೊಂದಿಗೆ ಚರ್ಚಿನಲ್ಲಿ ಯೇಸುವಿನ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ.