ತಾಲ್ಲೂಕು ದಂಡಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.19- ತಾಲ್ಲೂಕು ದಂಡಾಧಿಕಾರಿಯಾದ ತಹಶೀಲ್ದಾರ್‍ರವರೇ ಕಾನೂನು ಉಲ್ಲಂಘನೆ ಮಾಡಿರುವ ಘಟನೆ ತಾಲ್ಲೂಕು ತಹಶೀಲ್ದಾರ್‍ರವರಿಂದ ನಡೆದಿದೆ.
ಮಾನ್ಯ ಉಚ್ಛನ್ಯಾಯಾಲಯವು ನೀಡಿದ ಆದೇಶಕ್ಕೂ ಕಿಮ್ಮತ್ತು ಬೆಲೆ ನೀಡದೆ ಚಾಮರಾಜನಗರ ತಾಲ್ಲೂಕು ತಹಶೀಲ್ದಾರ್‍ರವರು ಹೊರಡಿಸಿದ ಗೊಂದಲದ ಆದೇಶದಿಂದ ನಗರದ ಮರಿಯಾಲ ಗ್ರಾಮದಲ್ಲಿರುವ ಬಸವ ರಾಜೇಂದ್ರ ಆಸ್ಪತ್ರೆಯಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಪ್ರಸಂಗ ನಡೆಯಿತು.
ತಾಲ್ಲೂಕಿನ ಮರಿಯಾಲ ಗ್ರಾಮದಲ್ಲಿರುವ ಬಸವ ರಾಜೇಂದ್ರ ಆಸ್ಪತ್ರೆಯ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ವಹಿಸಿರುವುದಾಗಿ ತಹಶೀಲ್ದಾರ್ ಶುಕ್ರವಾರ ನೀಡಿದ ನೋಟೀಸ್ ಗೊಂದಲಕ್ಕೆ ಕಾರಣವಾಗುವುದರ ಜೊತೆಗೆ ಆಸ್ಪತ್ರೆ ಸಿಬ್ಬಂದಿಗಳಲ್ಲದೆ ರೋಗಿಗಳ ಸಂಬಂಧಿಕರು ಹಾಗೂ ಹಿತೈಷಿಗಳಲ್ಲಿ ಆತಂಕ ಸೃಷ್ಟಿಸಿ ಬಿಗುವಿನ ವಾತಾವರಣ ನಿರ್ಮಾಣವಾಗುವಂತೆ ಮಾಡಿದ ಘಟನೆ ನಡೆಯಿತು.
ವಿಷಯ ತಿಳಿದು ಶನಿವಾರ ಬೆಳಿಗ್ಗೆ ಆಸ್ಪತ್ರೆಯ ಮುಂದೆ ಜಮಾಯಿಸಿದ ಜನರು ಹಾಗೂ ಸಿಬ್ಬಂದಿಗಳು ತಹಶೀಲ್ದಾರ್ ಕ್ರಮದ ವಿರುದ್ಧ ಪ್ರತಿಭಟಿಸಿದರಲ್ಲದೆ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ಮಾನ್ಯ ಉಚ್ಛ ನ್ಯಾಯಾಲಯವು ಆಸ್ತಿ ಮುಟ್ಟುಗೋಲು ಸಂಬಂಧ ತಡೆಯಾಜ್ಞೆ ತಂದು ಹೊಸ ಆದೇಶ ಜಾರಿ ಮಾಡಿದರೂ ಸಹ ಹಳೆಯ ಆದೇಶದ ಮೇಲೆ ನೋಟೀಸ್ ನೀಡಿರುವ ತಹಶೀಲ್ದಾರ್ ಕಾರ್ಯ ನಿಜಕ್ಕೂ ನಾಚಿಕೆಗೇಡು. ಇಂತಹ ಅಧಿಕಾರಿಗಳನ್ನು ನಾವು ಪಡೆದಿರುವಂತಹ ನಿಜಕ್ಕೂ ನತದೃಷ್ಟರು. ತಾಲ್ಲೂಕು ದಂಡಾಧಿಕಾರಿಗಳಾಗಿ ಒಂದು ನ್ಯಾಯಾಲಯದ ಆದೇಶವನ್ನು ಅರ್ಥ ಮಾಡಿಕೊಳ್ಳದಂತಹ ವ್ಯಕ್ತಿ ಅಧಿಕಾರ ಸ್ಥಾನದಲ್ಲಿರುವುದು ನಮ್ಮ ದುರ್ದೈವ. ಇಂತಹವರನ್ನು ಕರ್ತವ್ಯದಿಂದಲೇ ವಜಾಗೊಳಿಸುವವರಿಗೂ ಸುಮ್ಮನಿರಬಾರದೆಂದು ಆಕ್ರೋಶ ಹೊರ ಹಾಕಿದರು.
ನಗರಸಭೆ ಸದಸ್ಯ ಆರ್.ಪಿ. ನಂಜುಂಡಸ್ವಾಮಿ ಮಾತನಾಡಿ ವಿವೇಚನಾ ಸ್ಥಾನದಲ್ಲಿ ಕುಳಿತಿರುವ ಓರ್ವ ವ್ಯಕ್ತಿ ತಪ್ಪು ನಿರ್ಧಾರ ತೆಗೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರಮುಖ ಸಾಕ್ಷಿ. ಬಸವ ರಾಜೇಂದ್ರ ಆಸ್ಪತ್ರೆಯು ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಕೋರ್ಟ್ ಆದೇಶವನ್ನು ಪರಿಶೀಲಿಸಿ ತಹಶೀಲ್ದಾರ್ ಕ್ರಮ ವಹಿಸಬೇಕಾಗಿತ್ತು. ನೋಟಿಸ್ ನೀಡುವ ಮುನ್ನ ಕಾನೂನು ತಜ್ಞರ ಸಲಹೆ ಪಡೆಯಬಹುದಿತ್ತು. ಅದನ್ನು ಬಿಟ್ಟು ಇಂತಹ ವಿವೇಚನಾರಹಿತವಾಗಿ ಏಕಾಏಕಿ ಜಾರಿ ಮಾಡಿದ ನೋಟೀಸ್‍ನಿಂದಾಗಿ ಆಸ್ಪತ್ರೆಯವರಿಗೆ ಮಾನಸಿಕ ಹಿಂಸೆ ನೀಡಿದಂತಾಗಿದೆ. ಇದರಿಂದಾಗಿ ರೋಗಿಗಳಿಗೆ ವೈದ್ಯಕೀಯ ಸೌಲಭ್ಯ ದೊರೆಯದಿರುವುದನ್ನು ಕಣ್ಣಾರೆ ನೋಡುತ್ತಿದ್ದೇವೆ. ಇಂತಹ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಆಸ್ಪತ್ರೆಯಲ್ಲಿರುವ ರೋಗಿಯ ಸಂಬಂಧಿಕರಾದ ಜಬೀ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಹೊರತು ಪಡಿಸಿ ನಗರದಲ್ಲಿ ಈ ಆಸ್ಪತ್ರೆಯಲ್ಲೊಂದೇ ಚಿಕಿತ್ಸೆ ದೊರೆಯುತ್ತಿದ್ದದು. ಅದರಲ್ಲೂ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಎμÉ್ಟೂೀ ಮಂದಿ ಸಾವನಪ್ಪಿದನ್ನು ನಾವು ಕಣ್ಣಾರೆ ನೋಡಿದ್ದೇವೆ. ಆದರೆ ಈ ಆಸ್ಪತ್ರೆಗೆ ದಾಖಲಾದವರಲ್ಲಿ ಸಾವೀಗೀಡಾದವರೂ ಬೆರಳೆಣಿಕೆಯಷ್ಟು. ಅಂತಹ ಉತ್ತಮ ಚಿಕಿತ್ಸೆ ಬಸವ ರಾಜೇಂದ್ರ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ಆದರೆ ಇಂದು ತಹಶೀಲ್ದಾರ್ ಮಾಡಿರುವ ಕಾರ್ಯ ನಿಜಕ್ಕೂ ನೋವು ತಂದಿದೆ ಎಂದರು.
ಮತ್ತೋರ್ವ ರೋಗಿಯ ಸಂಬಂಧಿ ತಾಜ್ ಮಾತನಾಡಿ ನಾವು ಬಹಳ ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಉತ್ತಮ ಸೇವೆ ನೀಡುತ್ತಿರುವ ನಮ್ಮ ಡಾಕ್ಟರ್‍ಗೆ ಅನ್ಯಾಯವಾಗಲೂ ನಾವು ಬಿಡುವುದಿಲ್ಲ ಎಂದು ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಆಸ್ಪತ್ರೆಯ ಸಿಬ್ಬಂದಿ ಶಿವಮ್ಮ ಭಾವುಕಳಾಗಿ ನಾವು ನೂರಾರು ಕುಟುಂಬಗಳು ಈ ಆಸ್ಪತ್ರೆಯನ್ನ ಅವಲಂಬಿಸಿದ್ದೇವೆ. ಇಲ್ಲಿ ಕಾರ್ಯ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದೇವೆ. ಏಕಾಏಕಿ ಮುಟ್ಟುಗೋಲು ಎಂಬುದನ್ನು ಕೇಳಿ ಏನು ಮಾಡಬೇಕೆಂದು ತೋಚದಾಯಿತು. ಯಾರೇ ಬರಲಿ ನಾವು ಬಿಡುವುದಿಲ್ಲ. ಒಂದು ವೇಳೆ ಅವರು ಕ್ರಮ ವಹಿಸುವುದಾದರೆ ನಮ್ಮಗಳ ಜೀವನಕ್ಕೆ ಏನಾದರೂ ಆದರೆ ಅವರೇ ನೇರ ಹೊಣೆಗಾರರಾಗುತ್ತಾರೆ ಎಂದು ಕಣ್ಣೀರಾಕಿದರು.
ಘಟನೆ ಕುರಿತು ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಸವ ರಾಜೇಂದ್ರರವರು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗುರುವಾರ ಸಂಜೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಆದೇಶದ ಪ್ರತಿಯನ್ನು ಮನವಿ ಪತ್ರದೊಂದಿಗೆ ಜಿಲ್ಲಾಧಿಕಾರಿಗಳು, ಪೆÇಲೀಸ್ ವರುμÁ್ಠಧಿಕಾರಿಗಳ ಕಛೇರಿ ಹಾಗೂ ತಹಶೀಲ್ದಾರ್ ರವರಿಗೆ ಶುಕ್ರವಾರ ಬೆಳಿಗ್ಗೆ ಸಲ್ಲಿಸಲಾಗಿದೆ. ಆದರೂ ಕೂಡ ಮಧ್ಯಾಹ್ನದ ವೇಳೆಗೆ ತಹಶೀಲ್ದಾರ್‍ರವರು ಶನಿವಾರದಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ನೋಟೀಸ್ ನೀಡಿದರು. ಇದರಿಂದಾಗಿ ನೆನ್ನೆಯಿಂದಲೂ ಇಲ್ಲಿಯವರೆಗೆ ಮಾನಸಿಕ ಖಿನ್ಬತೆಗೆ ಒಳಗಾಗಿ ನೋವನನ್ನು ಅನುಭವಿಸುವಂತಾಯಿತು. ಇದೊಂದೇ ಬಾರಿಯಲ್ಲ ಈಗಾಗಲೇ ನಾಲ್ಕು ಬಾರಿ ಈ ರೀತಿ ನೋಟಿಸ್ ನೀಡಿಧದಾರೆ. ಪದೇ ಪದೇ ಉದ್ದೇಶಪೂರ್ವಕವಾಗಿಯೇ ನನಗೆ ತೊಂದರೆ ನೀಡಲೆಂದೆ ಈ ರೀತಿ ಮಾಡುತ್ತಿದ್ದಾರೇನೊ ಎಂಬಂತಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಈಗಾಗಲೇ ಧರ್ಮಸ್ಥಳ ಯೋಜನೆ, ಯಶಸ್ವಿನಿ, ಪಿಎಫ್ ಸೌಲಭ್ಯಗಳಡಿ ಚಿಕಿತ್ಸೆ ನೀಡುವ ಮೂಲಕ ಬಡವರಿಗೆ ನೆರವಾಗುತ್ತಿದ್ದೇವೆ. ಆಯುμÁ್ಮನ್ ಯೋಜನೆಯಡಿ ಉತ್ತಮ ಸೇವೆ ನೀಡಿದ ಆಸ್ಪತ್ರೆ ನಮ್ಮದೆಂದು ಜಿಲ್ಲಾಡಳಿತ ಈಗಾಗಲೆ ಪ್ರಶಂಸಿಸಿದೆ. ಇನ್ನು ಮುಂದೆಯೂ ಕೂಡ ಬಡವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಜಾರಿ ಮಾಡಲು ಯೋಜನೆ ರೂಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕೋರ್ಟ್ ಆದೇಶವಿದ್ದರೂ ಈ ರೀತಿ ಪದೇ ಪದೇ ನಮಗೆ ನೋಟೀಸ್ ಜಾರಿ ಮಾಡಿ ತೊಂದರೆ ನೀಡುತ್ತಿರುವ ತಹಶೀಲ್ದಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಏನಿದು ಪ್ರಕರಣ?: ಬಸವ ರಾಜೇಂದ್ರ ಆಸ್ಪತ್ರೆಯು ಟಿಜಿಎಂಸಿ ಬ್ಯಾಂಕ್ ಮೈಸೂರಿನ ಶಾಖೆಯಲ್ಲಿ ಸಾಲ ಪಡೆದಿರುವುದು ಸರಿಯμÉ್ಟ. ಈ ಸಂಬಂಧ ಸಾಲ ಹಿಂದುರಿಗಿಸಿಲ್ಲ ಎಂದು ಬ್ಯಾಂಕ್ ನವರು 2023 ರ ಜಿಲ್ಲಾಧಿಕಾರಿಗಳ ಆದೇಶದಂತೆ ನವೆಂಬರ್ 7, 2023 ರಂದು ಆಸ್ತಿ ಮುಟ್ಟುಗೋಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಾಲ ವಸೂಲಾತಿ ಮಂಡಳಿಯಲ್ಲಿ ಪ್ರಕರಣವಿರುವುದರಿಂದ ವ್ಯಾಜ್ಯ ಪೂರ್ಣವಾಗುವವರೆಗೂ ಕ್ರಮ ವಹಿಸದಂತೆ ಆಸ್ಪತ್ರೆಯವರು ತಡೆಯೊಡ್ಡಿದರು. ಆ ಸಂದರ್ಭದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರ ಪ್ರತಿರೋಧದ ಹಿನ್ನೆಲೆಯಲ್ಲಿ ಹಿಂದಿರುಗಿದ ಬ್ಯಾಂಕ್ ಸಿಬ್ಬಂಧಿಗಳು ಉಚ್ಛ ನ್ಯಾಯಾಲಯಕ್ಕೆ ರಿಟ್ ಸಲ್ಲಿಸಿ ದಿನಾಂಕ 22-1-2024 ರಂದುತಹಶೀಲ್ದಾರ್ ರವರು, ಪೆÇಲೀಸ್ ವರಿμÁ್ಟಧಿಕಾರಿಗಳು, ಸರ್ಕಲ್ ಇನ್ಸ್‍ಪೆಕ್ಟರ್ ರವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆಸ್ಪತ್ರೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಹಕರಿಸುವಂತೆ ಉಚ್ಚನ್ಯಾಯಾಲಯದಿಂದ ನಿರ್ದೇಶನ ನೀಡಿಸಿದ್ದರು. ಈ ಮೇರೆಗೆ ತಹಶೀಲ್ದಾರ್ ದಿನಾಂಕ 11-03-2024 ರಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ನೋಟೀಸ್ ಜಾರಿ ಮಾಡಿದ್ದರು. ಆದರೆ ಸಿಎಜೆ ಕಾರ್ಯಕ್ರಮ ಹಿನ್ನೆಲೆ ಅಂದು ಸ್ಥಗಿತಗೊಂಡಿತ್ತು. ಈ ನಡುವೆ ಆಸ್ಪತ್ರೆಯ ಕಡೆಯಿಂದ ಇದಕ್ಕೆ ಸಂಬಂಧಿಸಿದಂತೆ 12-03-24 ರಂದು ಉಚ್ಚ ನ್ಯಾಯಾಲಯದಲ್ಲಿ ರಿಟ್ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ದಿ.13 ರಂದು ವಿಚಾರಣೆ ನಡೆಸಿದ ಕೋರ್ಟ್ ಆಸ್ಪತ್ರೆಯಲ್ಲಿ ರೋಗಿ ಇರುವಾಗ ಮುಟ್ಟುಗೋಲು ಹಾಕಬಾರದು ಸದರಿ ಆಸ್ಪತ್ರೆಯಲ್ಲಿರುವ ರೋಗಿಗಳ ಸಂಖ್ಯೆಯನ್ನು ಸರ್ವೇ ಮಾಡಿ ಮಾಹಿತಿ ನೀಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿತ್ತು. ಟಿಎಚ್‍ಓ ವರದಿ ಆಧರಿಸಿ ದಿನಾಂಕ 14 ರಂದು ವಿಚಾರಣೆ ನಡೆಸಿದ ಕೋರ್ಟ್ ಪ್ರಸ್ತುತ ಆಸ್ಪತ್ರೆಯಲ್ಲಿ 92 ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು ಮುಟ್ಟುಗೋಲು ಹಾಕಿಕೊಳ್ಳಬಾರದೆಂದು, ಅಲ್ಲದೆ ಮುಂದಿನ ಎರಡು ವಾರದೊಳಗೆ ಆಸ್ಪತ್ರೆಯವರು ಬ್ಯಾಂಕ್ ಗೆ 50 ಲಕ್ಷ ಹಣ ಕಟ್ಟಬೇಕು, ತದನಂತರ ಎರಡು ವಾರದೊಳಗೆ ಇನ್ನು 50 ಲಕ್ಷ ಹಣ ಪಾವತಿಸಬೇಕು. ಒಂದು ವೇಳೆ ವಿಫಲರಾದಲ್ಲಿ ಆಸ್ಪತ್ರೆಯ ಆಸ್ತಿಯನ್ನು ಬ್ಯಾಂಕ್‍ನವರ ಸುಪರ್ದಿಗೆ ನೀಡಿ ನೇರ ಆದೇಶ ನೀಡುವುದಾಗಿ ಆದೇಶ ಹೊರಡಿಸಿದೆ. ಈ ಹೊಸ ಆದೇಶವನ್ನು ಪರಿಗಣಿಸದೆ ತಹಶೀಲ್ದಾರ್ ಹಳೇ ಆದೇಶದನ್ವಯವೇ ನೋಟೀಸ್ ಜಾರಿ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು, ಬಸವ ರಾಜೇಂದ್ರ ನಸಿರ್ಂಗ್ ಶಾಲೆ ಹಾಗೂ ಕಾಲೇಜಿನ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು, ಆಸ್ಪತ್ರೆಯ ರೋಗಿಗಳ ಸಂಬಂಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.