ಸಿರಿ ಸಂಪತ್ತಿದ್ದರು ಪ್ರೀತಿ ಮಮತೆಯಿಲ್ಲದೇ ಜನರ ಕೊರಗು ಹೆಚ್ಚಿದೆ
ಆಲಮೇಲ:ಮಾ.19: ಇಂದಿನ ಜನರಿಗೆ ಎಲ್ಲ ರೀತಿಯ ಸಿರಿ ಸಂಪತ್ತು ಹೊಂದಿದ್ದರು ಆದರೆ ಪ್ರೀತಿ ಮಮತೆ ಇಲ್ಲದೆ ಕೊರಗುತ್ತಿದ್ದಾರೆ ಅದಕ್ಕೆ ಸಂಸ್ಕಾರ ಇಲ್ಲದೆ ಇರುವ ಕಾರಣ, ನಮ್ಮ ಧರ್ಮದ ಸಂಸ್ಕಾರ ಸಂಪ್ರದಾಯ ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಅಂದಾಗ ಮಾತ್ರ ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಬಾನುವಾರ ರಾತ್ರಿ ತಾಲೂಕಿನ ಬಮ್ಮಹಳ್ಳಿ ಗ್ರಾಮದಲ್ಲಿ ಆಲಮೇಲ ಗುರು ಸಂಸ್ಥಾನ ಹಿರೇಮಠದ ಲಿಂ. ಮಳೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೆಯ ಅಂಗವಾಗಿ ಬಮ್ಮನಹಳ್ಳಿ ಶಾಖಾ ಮಠದಲ್ಲಿ ಜಾತ್ರಾ ಮಹೋತ್ಸವ ಮತ್ತು ಲಿಂ. ಮಳೇಂದ್ರ ಶಿವಾಚಾರ್ಯರ ಬೆಳ್ಳಿ ಮೂರ್ತಿ ಉತ್ಸವ ಹಾಗೂ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಂದು ಎಸ್ಟೆ ಶೀರಿ ಸಂಪತ್ತು ಗಳಿಸಿದರು ವೃದ್ದಾಪ್ಯ ಜೀವನ ವೃದ್ದಾಶ್ರದಲ್ಲಿ ಕಳೆಯುವಂತಾಗುತ್ತಿದೆ ಅದಕ್ಕೆ ಕಾರಣ ಸಂಸ್ಕ್ರಾರ ಇಲ್ಲದಿರುವದು. ಈ ರೀತಿಯ ಕೆಟ್ಟ ಸಂಪ್ರದಾಯ ಸುಶಿಕ್ಷಿತರಲ್ಲೆ ಹೆಚ್ಚಾಗುತ್ತಿದೆ ಅದನ್ನು ಹೋಗಲಾಡಿಸಬೇಕು ಎಂದರೆ ಸಂಸ್ಕಾರ ಸಂಪ್ರದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಗ್ರಾಮೀಣ ಭಾಗದ ರೈತಾಪಿ ವರ್ಗ ಮತ್ತು ಕೂಲಿಕಾರ್ಮಿಕ ಬಡ ಜನರಲ್ಲಿ ಧರ್ಮದ ಸಂಸ್ಕಾರವಿದೆ, ತಂದೆ ತಾಯಿ, ಗುರು ಹಿರಿಯರನ್ನು ಗೌರವಿಸುತ್ತಾರೆ ಅವರಲ್ಲಿ ಸಂಸ್ಕಾರ ಸಂಪ್ರದಾಯ ಉಳಿದುಕೊಂಡಿದೆ. ಅದೆ ಉನ್ನತ ಶಿಕ್ಷಣ ಪಡೆದು ಸುಶಿಕ್ಷಿತರೆ ಸಂಸ್ಕಾರ ಸಂಪ್ರದಾಯ ಮರೆಯುತ್ತಿದ್ದಾರೆ, ವಯೋವೃದ್ದ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ದೂಡುವ ಮೂಲಕ ಸಮಾಜದ ಕೆಟ್ಟ ಸಂದೇಶವನ್ನು ನೀಡುತ್ತಿದ್ದಾರೆ ಇದನ್ನು ಹೋಗಲಾಡಿಸಬೇಕು ಎಂದರೆ ತಾಯಿಯಿಂದ ಮಾತ್ರ ಸಾದ್ಯ. ಮಕ್ಕಳಿಗೆ ಬಾಲ್ಯದಿಂದಲೆ ಮೊದಲು ಸಂಸ್ಕಾರ ಕಲಿಸಬೇಕಾಗಿದೆ ಅಂದಾಗ ಮತ್ರಾ ನಮ್ಮ ಧರ್ಮದ ಸಂಸ್ಕಾರ ಸಂಪ್ರದಾಯ ಉಳಿಯಲಿದೆ, ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಹೇಳಿದರು.
ಬಂತನಾಳದ ವೃಷಭಲಿಂಗ ಮಹಾಸ್ವಾಮಿಗಳು ಮಾತನಾಡಿ ಧರ್ಮವನ್ನು ಯಾರು ರಕ್ಷಣೆ ಮಾಡುತ್ತಾರೆ ಅವರನ್ನು ಧರ್ಮ ರಕ್ಷಣೆ ಮಾಡಲಿದೆ. ನಿಜವಾದ ಧರ್ಮ ಯಾವುದು ಎಂದರೆ ಕೆಳಗೆ ಬಿದ್ದಂತವರನ್ನು ಮೇಲೆತ್ತುವದೆ ನಿಜವಾದ ಧರ್ಮ. ಸ್ವಾಮಿಗಳಿಗೆ ಗುರು ವಿರಕ್ತರೆಂಬ ಬೇದ ಭಾವವಿಲ್ಲ ಧರ್ಮದ ಜಾಗೃತಿ ಮಾಡುವದೆ ಸ್ವಾಮಿಗಳ ಕರ್ತವ್ಯೆವಾಗಿದೆ. ಸಂಸ್ಕಾರ ಬಹಳ ಮಹತ್ವದಾಗಿದೆ, ಸಂಸ್ಕಾರ ಸಂಪ್ರದಾಯ ಬೆಳೆಸುವ ಕೆಲಸ ಮಠ ಮಂದಿರಗಳು ಮಾಡುತ್ತಿವೆ ಮುಂದೆನು ಮಾಡುತ್ತವೆ ಎಂದು ಹೇಳಿದರು.
ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಧರ್ಮದ ಸಾವಿರಾರು ವರ್ಷಗಳ ಸಂಪ್ರದಾಯ ಉಳಿಯಬೇಕು ಎಂದರೆ ಅದು ಮಹಿಳೆಯರು ಕಾರಣ. ಇಂದಿನ ತಂತ್ರಜ್ಞಾನ ಕಾಲದಲ್ಲಿ ಗುಣಮಟ್ಟದ ಶಿಕ್ಷಣವಿದ್ದರೆ ಸಾಲದು ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯವಾಗಿದೆ, ಸಂಸ್ಕಾರಯುತ ಶಿಕ್ಷಣ ಇಂದಿನ ಮಕ್ಕಳಿಗೆ ಅವಶಕತೆ ಇದೆ. ಪುರಾತನ ಸಂಪ್ರದಾಯ ಸಂಸ್ಕಾರ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಸಂಸ್ಕಾರ ಇದ್ದರೆ ಮಾತ್ರ ಸಮಾಜ ಪರಿವರ್ತನೆ ಆಗಲು ಸಾದ್ಯ ಎಂದು ಹೇಳಿದರು.
ಅಫಜಲಪೂರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಜಿಲ್ಲಾ ಕಾಂಗ್ರೇಸ್ ಪಕ್ಷದ ವಕ್ತಾರರಾದ ಸಂಗಮೇಶ ಬಬಲೇಶ್ವರ, ಜಿಲ್ಲಾ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ರಾಜು ಅಲಗೂರ ಮುಂತಾದವರು ಮಾತನಾಡಿದರು.
ಮಮದಾಪೂರದ ಅಭಿನವ ಮುರುಗೇಂದ್ರ ಮಹಾಸ್ವಾಮಿಜಿ, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರಯ,ಬಮ್ಮನಹಳ್ಳಿಯ ನರಸಿಂಹ ಮಾರಾಜರು, ಕುಮಸಗಿಯ ಶಿವಾನಂದ ಸ್ವಾಮಿಜಿ ಮತ್ತು ಆಲಮೇಲ, ಕಣ್ಣಿ, ತಡವಲಗಾ, ಮಾಶಾಳ, ಸೋಮಜಾಳ, ನೀಲೂರ ವಿವಿದ ಮಠಾಧೀಶರು ಪಾಲ್ಗೊಂಡು ಸಾನಿದ್ಯ ವಹಿಸಿದರು.
ಅರ್ಬನ ಬ್ಯಾಂಕ ಅಧ್ಯಕ್ಷ ಶಿವುಕುಮಾರ ಗುಂದಗಿ, ಭಸವರಾಜ ಧನಶ್ರೀ, ಕಾಂಗ್ರೇಸ್ ಮುಖಂಡರಾದ ಗಂಗಾಧರ ಸಂಬಣ್ಣಿ, ಬಿಎಚ್. ಬಿರಾದಾರ, ಡಾ| ದಯಾನಂದ ಬಿರಾದಾರ, ಕಸಾಪ ತಾಲೂಕ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪರತಿ, ರಾಜಕುಮಾರ ಬಿರಾದಾರ ಮುಂತಾದವರು ಇದ್ದರು.