ಚಿಂಚೋಳಿ: ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ
ಚಿಂಚೋಳಿ,ಮಾ.19- ಪಟ್ಟಣದ ಚಂದಾಪುರದ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳವರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ 14 ತಂಡಗಳು ಭಾಗವಹಿಸಿದ್ದವು.
ಪಂದ್ಯಾವಳಿಯಲ್ಲಿ ಶ್ರೀ ಚನ್ನವೀರ ಮೋಟಾರ್ಸ್ ಪ್ರಾಯೋಜಕತ್ವದ ತಂಡ ಪೈನಲ್ ಹಣಾಹಣಿಯಲ್ಲಿ ಸಾಗರ ಮೋಟಾರ್ಸ್ ಪ್ರಾಯೋಜಕತ್ವದ ತಂಡದ ವಿರುದ್ಧ 25-20,25-19 ಅಂಕಗಳಿಂದ ಜಯಿಸಿ ಪ್ರಥಮ ಸ್ಥಾನ ಪಡೆಯಿತು.
ಸಾಗರ ಮೋಟಾರ್ಸ್ ತಂಡ ದ್ವಿತೀಯ ಸ್ಥಾನ ಪಡೆದರೆ ,ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ಮಹೇಶ್ ಹೋಂಡಾ ಪ್ರಾಯೋಜಕತ್ವದ ತಂಡ ವಿಷ್ಣು ಬಜಾಜ್ ತಂಡದ ವಿರುದ್ಧ ಜಯಗಳಿಸಿತು. ವಿಜೇತರಿಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಸವರಾಜ್ ಪಡಶೆಟ್ಟಿ, ಯೋದರಾದ ಶ್ರೀ ವಿನೋದ ಸೀಳಿನ , ಶ್ರೀ ನೀಲಕಂಠ ಸೀಳಿನ್,ರಾಜಶೇಖರ ಮಸ್ತಾರಿ, ಮಕ್ಬೂಲ್ ಖಾನ್ , ಮೌಲಾನ ಪಟೇಲ್ ಹಾಗೂ ಮತೀನ್ ಸೌದಾಗರ್ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖೆಯ ಕ್ರೀಡಾಪ್ರೇಮಿಗಳು ಹಾಜರಿದ್ದರು.