ಕಲ್ಯಾಣ ರಥ ವೋಲ್ವೋ ಮಲ್ಟಿ ಎಕ್ಸಲ್ ಬಸ್ಸು ಯಾದಗಿರಿ, ರಾಯಚೂರುಹಾಗೂ ಮಂತ್ರಾಲಯ ಮಾರ್ಗದಿಂದ ಕಾರ್ಯಾಚರಣೆ
ಕಲಬುರಗಿ:ಮಾ.18:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲಬುರಗಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಕಲ್ಯಾಣ ರಥ (ವೋಲ್ವೋ ಮಲ್ಟಿ ಎಕ್ಸಲ್ ಎ.ಸಿ. ಸ್ಲೀಪರ್) ಸಾರಿಗೆಯನ್ನು ಕೃಷ್ಣಾ ನದಿ ಸೇತುವೆ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಮಾರ್ಚ್ 12 ರಿಂದ (ವಾಯಾ ಯಾದಗಿರಿ, ರಾಯಚೂರು ಹಾಗೂ ಮಂತ್ರಾಲಯ ಮಾರ್ಗದಿಂದ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪ್ರಯಾಣಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಈ ಹಿಂದೆ ಕೃಷ್ಣಾ ನದಿ ಸೇತುವೆ ಕಾಮಗಾರಿ ಕೆಲಸ ನಡೆಯುತ್ತಿದ್ದಾಗ ಈ ಬಸ್ಸು ವಯಾ: ಜೇವರ್ಗಿ, ಶಹಾಪೂರ, ದೇವದುರ್ಗ, ರಾಯಚೂರು ಹಾಗೂ ಮಂತ್ರಾಲಯ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.