ಚಡಚಣ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ
ಚಡಚಣ,ಮಾ.18-ಪಟ್ಟಣದಲ್ಲಿ ಬೀದಿಗಳ ನಾಯಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿಗೆ ಸಮೀಪದ ಇಂದ್ರಾ ನಗರದಲ್ಲಿ ಸುಮಾರು 8 ರಿಂದ 10 ನಾಯಿಗಳು ಬೀದಿ ನಾಯಿಗಳು ಎರಡು ಬೆಕ್ಕು ಮರಿಗಳನ್ನು ಮತ್ತು ಆಡಿನ ಮರಿ ಹರಿದು ತಿನ್ನುವ ಸನ್ನಿವೇಶ ಘಟನೆ ನಡೆದಿದೆ. ಇವು ಮುಂದೆ ಮಕ್ಕಳನ್ನು ಕಚ್ಚಿ ಗಾಯಗೊಳಿಸುವ ಸಂಭವವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.