ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಸಿಂಧುಗೆ ರಾಷ್ಟ್ರಮಟ್ಟದಲ್ಲಿ 11ನೇ ರ್ಯಾಂಕ್
ಮುದ್ದೇಬಿಹಾಳ,ಮಾ.18- ತಾಲೂಕಿನ ಕುಂಟೂಜಿ ಗ್ರಾಮದ ವಿದ್ಯಾರ್ಥಿನಿ ಸಿಂಧು ಶರಣಬಸು ಹಿರೇಮಠ ಅಖಿಲ ಭಾರತ ಸೈನಿಕ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ 300ಕ್ಕೆ 288 ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ 11ನೇ ರ್ಯಾಂಕಿಂಗ್ ಪಡೆದು ಸೈನಿಕ ಶಾಲೆಗೆ ಆಯ್ಕೆಯಾದ ಪ್ರಯುಕ್ತ ಹಾಗೂ ಕಿತ್ತೂರಿನ ಬಾಲಕಿಯರ ಸೈನಿಕ ಶಾಲೆಗೂ ಕೂಡ ಆಯ್ಕೆಯಾದ ಪ್ರಯುಕ್ತ ಕುಟುಂಬ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.