ಸರಳವಾಗಿ ವಿವಿಧ ಮಹನೀಯರ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.18;: ಸಾರ್ವತ್ರಿಕ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನಲೆಯಲ್ಲಿ ಶ್ರೀ.ರೇಣುಕಾಚಾರ್ಯ, ಶ್ರೀ.ಯೋಗಿನಾರೇಯಣ ಯಂತೀAದ್ರ (ಕೈವಾರ ತಾತಯ್ಯ) ಹಾಗೂ ಶ್ರೀ.ಅಗ್ನಿಬನ್ನಿರಾಯ ಜಯಂತಿಗಳನ್ನು ಸರಳವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜಯಂತಿಗಳ ಆಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಭಾವಚಿತ್ರ ಮೆರವಣಿಗೆಗೆ ಅಕವಾಶ ಇರುವುದಿಲ್ಲ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಅಥವಾ ನಗರಸಭೆ ಸಭಾಂಗಣದಲ್ಲಿ ಜಯಂತಿ ಆಚರಣೆಯನ್ನು ಏರ್ಪಡಿಸಲಾಗುವುದು. ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅತ್ಯಂತ ಸರಳವಾಗಿ ಜಯಂತಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.ವೀರಶೈವ ಮುಖಂಡರ ಮನವಿಯಂತೆ ಮಾರ್ಚ್ 23 ರ ಬದಲಾಗಿ ಮಾರ್ಚ್ 22 ರಂದು ಶ್ರೀ.ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯತು. ಉಳಿದಂತೆ ಮಾರ್ಚ್ 25 ರಂದು ಶ್ರೀ.ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಹಾಗೂ ಮಾರ್ಚ್ 28 ಶ್ರೀ.ಅಗ್ನಿಬನ್ನಿರಾಯ ಜಯಂತಿ ಆಚರಿಸಲಾಗುವುದು.ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹರೀಶ್, ಪೋಲಿಸ್ ಇಲಾಖೆಯ ಸಿಪಿಐ ಗುಡ್ಡಪ್ಪ, ತೋಟಗಾರಿಕೆ ಇಲಾಖೆಯ ಅಧಿಕಾರಿ ಸಿದ್ದೇಶ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಉಪಸ್ಥಿದ್ದರು.