ಫಾರ್ಮಾ ದೀಕ್ಷಾ-2024 ಪದವಿ ಪ್ರದಾನ ದಿನ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೧೭ : ನಗರದ ಎಸ್.ಜೆ.ಎಂ. ಫಾರ್ಮಸಿ ಕಾಲೇಜಿನಲ್ಲಿ ಫಾರ್ಮಾ ದೀಕ್ಷಾ-2024 ಪದವಿ ಪ್ರದಾನ ದಿನವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ಮುರುಘಾಮಠ ಚಿತ್ರದುರ್ಗ, ಡಾ. ಹರಿಕೃಷ್ಣ ಮಾರನ್, ಚೇರ್ಮನ್ ವಿಷನ್ ಡಿಜಿಟಲï ಇಂಡಿಯಾ ಬೆಂಗಳೂರು. ಡಾ ಅಶೋಕ್ ಮಾಲ್ಪಾನಿ, ಡೀನ್ ಫ್ಯಾಕಲ್ಟಿ ಆಫ್ ಫಾರ್ಮಸಿ, ಆರ್.ಜಿ.ಯು.ಹೆಚ್.ಎಸ್. ಬೆಂಗಳೂರು, ಡಾ ಟಿ.ಎಸ್. ನಾಗರಾಜ ಪ್ರಾಂಶುಪಾಲರು ಎಸ್.ಜೆ.ಎಂ. ಕಾಲೇಜ್ ಆಫ್ ಫಾರ್ಮಸಿ ಚಿತ್ರದುರ್ಗ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಆದ ಡಾ ಯೋಗಾನಂದ ಆರ್, ಡಾ ಮಾರುತಿ ಟಿ. ಏಕಬೋಟೆ, ಡಾ ಬಸವರಾಜ ಎಚ್. ಎಸ್., ಡಾ. ಸ್ನೇಹಲತಾ ಉದ್ಘಾಟಿಸಿದರು. ಮುಖ್ಯಅತಿಥಿ ಡಾ. ಹರಿಕೃಷ್ಣ ಮಾರನ್ ಮಾತನಾಡಿ, ಮುಂದಿನ 20 ವರ್ಷಗಳಲ್ಲಿ ಭಾರತ ದೇಶವು ಎಲ್ಲಾ ದೇಶಗಳ ಆರ್ಥಿಕತೆಗಿಂತ ಮುಂದೆ ಇರುತ್ತದೆ. ಹೊಸ ಕಂಪನಿಗಳನ್ನು ಹುಟ್ಟುಹಾಕುವ ಅವಕಾಶ ಭಾರತದ ಪಾಲಿಗೆ ಮಾತ್ರ ಸುವರ್ಣ ಅವಕಾಶವಾಗಿರುತ್ತದೆ. ಏಕೆಂದರೆ ನಮ್ಮಲ್ಲಿ ನೈಪುಣ್ಯತೆ ಮತ್ತು ಕೆಲಸ ಮಾಡುವ ಬದ್ಧತೆ ರಕ್ತಗತವಾಗಿ ಬಂದಿದೆ. 2047ನೇ ವರ್ಷದ ಸ್ವಾತಂತ್ರö್ಯದ ಇಸವಿ ಒಳಗೆ ಭಾರತವು ಪ್ರಪಂಚದಲ್ಲಿ ಮೊದಲ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ. ಅದರ ಪಾಲುದಾರರು ನಾವೇ ಆಗಿರುತ್ತೇವೆ. ಈ ಅವಕಾಶ ನಿಮಗೆ ಬರಲಿದೆ. ಭಾರತದ ಕಂಪನಿಗಳಾದ ಬಿರ್ಲಾ, ಟಾಟಾ, ರಿಲಯನ್ಸ್, ಇನ್ಫೋಸಿಸ್ ಇವೆಲ್ಲವೂ ದೊಡ್ಡ ಕಂಪನಿಗಳಾಗಿ ಹೊರಹೊಮ್ಮಲಿವೆ. ಹತ್ತು ವರ್ಷದ ಹಿಂದೆ ಇದ್ದ ದೊಡ್ಡ ಕಂಪನಿಗಳು ಇಂದು ಸಣ್ಣ ಕಂಪನಿಗಳಾಗಿವೆ. ಕೇವಲ ಐದಾರು ವರ್ಷದಲ್ಲಿ ಹುಟ್ಟಿಕೊಂಡ ಕಂಪನಿಗಳು ದೊಡ್ಡ ಕಂಪನಿಗಳಾಗಿ ಹೊರಹೊಮ್ಮುತ್ತಿವೆ. ಅದಕ್ಕೆ ಕಾರಣ ಸಮಗ್ರ ಡಿಜಿಟಲï ತಂತ್ರe್ಞÁನದ ಸಮರ್ಪಕವಾಗಿ ಸದ್ಬಳಕೆ. ನಿಮ್ಮ ಪರಿಶ್ರಮ ದೇಶವನ್ನು ಹೊಸ ಆವಿಷ್ಕಾರದ ಪಥಕ್ಕೆ ಕೊಂಡೊಯ್ಯಲಿ ಎಂದು ಹೇಳಿದರು. ಡಾ ಅಶೋಕ್ ಮಾಲ್ಪಾನಿ ಮಾತನಾಡಿ, ಔಷಧೀಯ ಪದವಿ ಮುಗಿಸಿದ ನೀವು ಹಲವಾರು ವಿಭಾಗದಲ್ಲಿ ಕೆಲಸ ಮಾಡುತ್ತೀರ. ಅಲ್ಲಿ ಕೆಲಸ ಮಾಡುವ ರೀತಿಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನೀವು ಗೆಲ್ಲುತ್ತೀರಾ. ನಿಮ್ಮ ಬುದ್ಧಿವಂತಿಕೆಯ ಜತೆಗೆ ಹೊಸತನ್ನು ಕಾಲಕ್ಕೆ ತ್ಕಕಂತೆ ಕಲಿಯುತ್ತಾ ಹೋದಲ್ಲಿ ಮಾತ್ರ ನಿಮ್ಮನ್ನು ಬೆಳೆಸುತ್ತಾ ಹೋಗುತ್ತದೆ. ನೀವು ಬೆಳೆಯುತ್ತಾ ದೇಶವನ್ನು ಬೆಳೆಸುತ್ತೀರಾ ಎಂದು ಹೇಳಿದರು. ಪ್ರಾಂಶುಪಾಲರಾದ ಟಿ.ಎಸ್. ನಾಗರಾಜï ಅವರು ಪದವಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಶುಭವನ್ನು ಕೋರಿ ಮುಂಬರುವ ದಿನಗಳಲ್ಲಿ ಔಷಧಿ ಕ್ಷೇತ್ರದಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ತಂದೆ ತಾಯಿಗಳಿಗೆ ಕೀರ್ತಿ ಮತ್ತು ದೇಶಕ್ಕೆ ಮಾದರಿ ಆಗುವಂತೆ ಕೆಲಸಗಳು ಮತ್ತು ದೇಶವು ಮೆಚ್ಚುವಂಥ ಔಷಧಿ ತಜ್ಞರಾಗಿ ಎಂದು ಆಶಿಸಿದರು. ಶ್ರೀ ಬಸವಪ್ರಭು ಸ್ವಾಮಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶುಭಕೋರಿ ನಾಡಿಗೆ ಕೀರ್ತಿ ತರುವಂಥ ಫಾರ್ಮಸಿಸ್ಟ್ಗಳಾಗಿ ಎಂದು ಆಶೀರ್ವದಿಸಿದರು. ಕೊರೋನಾ ಸಮಯದಲ್ಲಿ ಹೊಸ ವ್ಯಾಕ್ಸಿನ್ ಆವಿಷ್ಕಾರದಲ್ಲಿ ಔಷಧಿತಜ್ಞರ ಕಾರ್ಯವನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಡಾ. ಸ್ನೇಹಲತಾ, ಸುಮಾರು 150 ವಿದ್ಯಾರ್ಥಿಗಳಾದ ಬಿ.ಫಾರ್ಮ, ಎಂ.ಫಾರ್ಮ ಪದವೀಧರರಿಗೆ ಮತ್ತು ಫಾರ್ಮ ಡಿ ವಿದ್ಯಾರ್ಥಿಗಳಿಗೆ ಫಾರ್ಮಸಿಸ್ಟ್ ಪ್ರತಿಜ್ಞೆಯನ್ನು ಬೋಧಿಸಿದರು. ಮಾರುತಿ ಏಕಬೋಟೆ ವಂದಿಸಿದರು. ಡಾ. ಅಬೂಬಕರ್ ಸಿದ್ದಿಕ್ ನಿರೂಪಿಸಿದರು.