ಈಡಿಗ ಸಮಾಜದ ತಾಲೂಕು ಅಧ್ಯಕ್ಷರಾಗಿ ರಾವೂರಕರ್ ಆಯ್ಕೆ
ಚಿತ್ತಾಪುರ:ಮಾ.18: ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಭಾನುವಾರ ನಡೆದ ತಾಲೂಕು ಆರ್ಯ ಈಡಿಗ ಸಮಾಜದ ಸಭೆಯಲ್ಲಿ ಸರ್ವಾನುಮತದಿಂದ ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಶಂಕರಗೌಡ ರಾವೂರಕರ್ (ಲೀಡರ್) ಅವರನ್ನು ಸಮಾಜದ ಮುಖಂಡರು ಸನ್ಮಾನಿಸಿದರು.
ಸಮಾಜದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಶಂಕರಗೌಡ ರಾವೂರಕರ್, ಸಂಘಟನೆಯ ಕೊರೆತಯಿಂದ ಈಡಿಗ ಸಮಾಜ ಎಲ್ಲ ರಂಗಳಲ್ಲಿ ಹಿಂದುಳಿದಿದೆ ಹಾಗೂ ಸರಕಾರದ ಸೌಲಭ್ಯಗಳನ್ನು ಸಹ ಪಡೆದುಕೊಳ್ಳುವಲ್ಲಿಯೂ ಹಿಂದುಳಿದಿದೆ ಆದ್ದರಿಂದ ಸಮಾಜದ ಮುಖಂಡರಲ್ಲಿನ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗೂಡಿ ಸಂಘಟಿತರಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ಸಮಾಜದ ತಾಲೂಕು ಅಧ್ಯಕ್ಷ ಸ್ಥಾನ ಬಹಳ ಜವಾಬ್ದಾರಿಯುತ ಸ್ಥಾನವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಾಗೂ ಈಡಿಗ ಸಮಾಜಕ್ಕೆ ಯಾವುದೇ ರೀತಿಯ ದಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸರಕಾರದ ಸೌಲಭ್ಯಗಳನ್ನು ಸಮಾಜದ ಜನರಿಗೆ ದೊರಕಿಸಿ ಕೊಡುವ ಕೆಲಸ ಮಾಡುತ್ತೇನೆ, ಸಮಾಜಕ್ಕಾಗಿ ಹಗಲಿರಳು ಶ್ರಮಿಸಲು ಸಿದ್ದನಿದ್ದೇನೆ ಆದ್ದರಿಂದ ಸಮಾಜದ ಹಿರಿಯರು, ಯುವಕರು ಸಹಕಾರ ನೀಡಬೇಕು ಎಂದರು. ಸಮಾಜದ ಮುಖಂಡರ ನಿಯೋಗದ ಜತೆ ಇಷ್ಟರಲ್ಲೇ ಕ್ಷೇತ್ರದ ಶಾಸಕ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಸಮಾಜದ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಮಾಜದ ಮುಖಂಡರಾದ ನಾಗಯ್ಯ ಗುತ್ತೇದಾರ ಕರದಾಳ, ಶ್ರೀಮಂತ ಗುತ್ತೇದಾರ, ಶಿವಯ್ಯ ಗುತ್ತೇದಾರ ಪೇಟಶಿರೂರು, ಕಾಶಣ್ಣ ಗುತ್ತೇದಾರ ಕರದಾಳ, ಡಿ.ನರಸಯ್ಯಗೌಡ್, ಶ್ರೀಶೈಲ್ ಗುತ್ತೇದಾರ ಅಳ್ಳೋಳ್ಳಿ, ಆನಂದ ರಾವೂರಕರ್, ಪಂಕಜಗೌಡ್, ಆನಂದ ಗುತ್ತೇದಾರ, ಹುಸನಯ್ಯ ಗುತ್ತೇದಾರ ಡೋಣಗಾಂವ, ಸುರೇಶ ಗುತ್ತೇದಾರ ಕರದಾಳ, ಸ್ವಸ್ತಿಕ್ ಭಂಡಾರಿ, ರವಿ ಗುತ್ತೇದಾರ ಸೂಲಹಳ್ಳಿ, ರಾಘವೇಂದ್ರ ಗುತ್ತೇದಾರ, ರಾಜು ಗುತ್ತೇದಾರ ಬೊಮ್ಮನಳ್ಳಿ ಮಾತನಾಡಿದರು.
ಅಂತಯ್ಯ ಮುಸ್ತಾಜರ್, ಮೋಹನ್ ಮುಸ್ತಾಜರ್, ಆಂಜನೇಯ ಗುತ್ತೇದಾರ, ಹಣಮಯ್ಯ ಲಾಡ್ಲಾಪೂರ, ಯಲ್ಲಯ್ಯ ಕಲಾಲ್, ಸುರೇಶ ಗುತ್ತೇದಾರ ಇಟಗಿ, ನಾಗೇಂದ್ರ ಗುತ್ತೇದಾರ ಇಟಗಿ, ಮಲ್ಲಿಕಾರ್ಜುನ ಗುತ್ತೇದಾರ ಅಳ್ಳೋಳ್ಳಿ, ಸುಭಾಷ ಗುತ್ತೇದಾರ, ಅಶೋಕ ರಾವೂರಕರ್, ಗುರು ಗುತ್ತೇದಾರ, ಸಾಹೇಬಗೌಡ ಸಾತನೂರ, ದಿಗಂಬರ್ ಗುತ್ತೇದಾರ, ಉಮೇಶ ಕುಕ್ಕುಂದಿ, ಖ್ಯಾದಿಗಪ್ಪ ಅಳೋಳ್ಳಿ, ಶರಣಬಸ್ಸಪ್ಪ ಗುತ್ತೇದಾರ, ಅಶೋಕ ಗುತ್ತೇದಾರ ಹೊಸ್ಸುರ್, ನಿತೀಶ್ ಮುಕ್ತೇದಾರ, ನಾರಾಯಣ ಮೊಗಲಾ, ದೀಪಕ್ ಗುತ್ತೇದಾರ, ರಾಜು ಗುತ್ತೇದಾರ ನಾಲವಾರ, ರಮೇಶ ಗುತ್ತೇದಾರ ದಿಗ್ಗಾಂವ, ಸುನೀಲ್ ಗುತ್ತೇದಾರ, ಅಶೋಕ ಗುತ್ತೇದಾರ ವಾಡಿ, ರಾಕೇಶ ಮುಕ್ತೇದಾರ ಸೇರಿದಂತೆ ಅನೇಕರು ಇದ್ದರು. ಕಾಶಿನಾಥ ಗುತ್ತೇದಾರ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ದಿ.ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜನ್ಮದಿನ ಆಚರಿಸಲಾಯಿತು.