ಮೋದಿ ಜನ್ಮ ದಿನಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.18:– ನಗರದ ನೂರೊಂದು ಗಣಪತಿ ದೇವಾಸ್ಥಾನದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನವನ್ನು ಆಚರಿಸಲಾಯಿತು.
ಜನ್ಮ ದಿನದ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ವಿತರಿಸಿದ ಮಾಜಿ ಸಂಸದ ಪ್ರತಾಪಸಿಂಹ ಮಾತನಾಡಿ, ವಿಶ್ವದ ಅತ್ಯುತ್ತಮ ನಾಯಕರೆಂದರೆ ಪ್ರಧಾನಿ ನರೇಂದ್ರಮೋದಿಯಾಗಿದ್ದಾರೆ. ಅವರಿಂದ ನಮ್ಮದೇಶ ಮತ್ತಷ್ಟು ಮುನ್ನಡೆಗೆ ಹೋಗುವುದನ್ನು ನಿರೀಕ್ಷಿಸಬಹುದಾಗಿದೆ ಎಂದರು.
ಮೋದಿಯವರ ಹೆಸರಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದ ಶಾಸಕ ಶ್ರೀವತ್ಸ ಮಾತನಾಡಿ, ವಿಶ್ವನಾಯಕರೆನಿಸಿಕೊಂಡ ಪ್ರಧಾನಿ ಮೋದಿಯವರು ನಮ್ಮ ಪ್ರಧಾನಿ ಎಂಬ ಹೆಮ್ಮೆ ನಮ್ಮೆಲ್ಲರಿಗೂ ಇದೆ. ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತು ಪಡಿಸಿ ಮೂರನೇ ಬಾರಿಗೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸುತ್ತಿರುವ ಎಕೈಕ ನಾಯಕೆನಿಸಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ದೇಶವನ್ನು ಮಾಡುವಲ್ಲಿ ಪ್ರಧಾನಿಯವರ ಚಿಂತನೆ ಅತ್ಯುತ್ತಮ ಆಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಮುದಾಯದ ಮುಖಂಡರಾದ ಡಿ.ಟಿ.ಪ್ರಕಾಶ್, ಬಿಜೆಪಿ ಮುಖಂಡರಾದ ಮನು ಶೈವ ಇನ್ನಿತರರು ಉಪಸ್ಥಿತರಿದ್ದರು.