ಮದೀನ ಸ್ತಬ್ಧ ಚಿತ್ರಕ್ಕೆ ಮೈಸೂರಿಗೆ ಪ್ರಥಮ ಬಹುಮಾನ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಸೆ.18:- .ಮೈಸೂರಿನ ಮೀನಾ ಬಜಾರಿನಲ್ಲಿ ಜರುಗಿದ ಮಿಲಾದ್ ಹಬ್ಬದ ಪ್ರಯುಕ್ತ ಸ್ತಬ್ಧ ಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಭಾಗವಹಿಸಿ ಪ್ರದರ್ಶಿಸಿದ್ದು ವಿಶೇಷವಾಗಿ ಎಲ್ಲಾ ಗಮನ ಸೆಳೆದ ಮದೀನ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಆಯ್ಕೆಯಾಯಿತು.
ಮೈಸೂರು ಈದ್ಗಾ ಕಮಿಟಿ ವತಿಯಿಂದ ಮದೀನ ಸಪ್ದ ಚಿತ್ರಕ್ಕೆ ಮೈಸೂರು ಜಿಲ್ಲೆಗೆ ಪ್ರಥಮ ಬಹುಮಾನಕ್ಕೆ ಪಡೆದು ಎಲ್ಲಾ ಗಮನವನ್ನು ಸೆಳೆಯುವ ಮೂಲಕ ಕಮಿಟಿಯ ಎಲ್ಲಾ ಸದಸ್ಯರು ಹರ್ಷ ವ್ಯಕ್ತ ಪಡಿಸಿ ಬಹುಮಾನವನ್ನು ಸ್ವೀಕರಿಸಿದರು.
ಈದ್ಗಾ ಕಮಿಟಿ ಅಧ್ಯಕ್ಷ ಫೈಜಲ್, ಫರೋಕ್, ಇಮ್ರಾನ್, ಮೊಹಮ್ಮದ್ ಕ್ಯಾಟಿರಿಂಗ್ ಕೆ.ಆರ್.ನಗರಸಮೀರ್, ಉವೈಸ್, ಬಾಬು ಸೇರಿದಂತೆ ಕಮಿಟಿಯ ಎಲ್ಲಾ ಸದಸ್ಯರು ಹಾಜರಿದ್ದರು.